ಹೆದ್ದಾರಿ ಬಳಿಯಲ್ಲಿಯೇ ಸುಟ್ಟು ಭಸ್ಮವಾದ ಯುವತಿ
05/03/2021
ಚಂಡೀಗಢ: ಯುವತಿಯೋರ್ವಳು ರಾಷ್ಟ್ರೀಯ ಹೆದ್ದಾರಿ ಬಳಿಯ ಸೇತುವೆಯಲ್ಲಿಯೇ ಸುಟ್ಟು ಭಸ್ಮವಾದ ಘಟನೆ ಪಂಜಾಬ್ ನ ಖನ್ನಾದಲ್ಲಿ ಗುರುವಾರ ಬೆಳಗ್ಗೆ ನಡೆದಿದ್ದು, ರಸ್ತೆ ಬದಿಯಲ್ಲಿ ಯುವತಿ ಸುಟ್ಟು ನರಳಾಡುತ್ತಿದ್ದರೂ, ಯಾರೊಬ್ಬರೂ ಸಾರ್ವಜನಿಕರು ಆಕೆಯ ನೆರವಿಗೆ ಹೋಗಲಿಲ್ಲ.
ಇಲ್ಲಿನ ಭಟ್ಟಲ್ ಗ್ರಾಮದ ಭಜನ್ ಸಿಂಗ್ ಅವರ ಪುತ್ರಿ ಮನ್ ಪ್ರೀತ್ ಕೌರ್ ಎಂಬ 31 ವರ್ಷದ ಮಹಿಳೆ ಸಾವನ್ನಪ್ಪಿದವರು. ಇವರು ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಮನೆಯವರು ಹೇಳಿದ್ದಾರೆ. ಆದರೆ ಇವರಿಗೆ ಬೆಂಕಿ ಹಚ್ಚಿದ್ದು ಯಾರು ಎನ್ನುವುದು ತಿಳಿದು ಬಂದಿಲ್ಲ.
ಬೆಳಗ್ಗೆ 8:30ರ ವೇಳೆಗೆ ಪೊಲೀಸರಿಗೆ ಈ ವಿಚಾರ ತಿಳಿದು ಬಂದಿದೆ. ಪೊಲೀಸರು ಬರುವಷ್ಟರಲ್ಲಿ ಯುವತಿ ಸುಟ್ಟು ಭಸ್ಮವಾಗಿದ್ದಾಳೆ. ಇದು ಆತ್ಮಹತ್ಯೆಯಂತು ಖಂಡಿತಾ ಅಲ್ಲ ಎಂದು ಮನೆಯವರು ಹೇಳುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳಬೇಕಾದರೆ, ಮಹಿಳೆ ಆ ಸ್ಥಳಕ್ಕೆ ಬಂದು ಮಾಡಿಕೊಳ್ಳಬೇಕು ಎಂದೇನು ಇರಲಿಲ್ಲ. ಇದೊಂದು ವ್ಯವಸ್ಥಿತವಾದ ಕೊಲೆ ಎಂದು ಅವರು ಹೇಳಿದ್ದಾರೆ.