ಹಿಜಬ್-ಕೇಸರಿ ವಿವಾದ: ಶಾಲೆಗಳು ಧರ್ಮ ಪ್ರದರ್ಶನದ ಸ್ಥಳವಲ್ಲ; ನಟಿ ಖುಷ್ಬೂ - Mahanayaka
4:24 PM Friday 20 - September 2024

ಹಿಜಬ್-ಕೇಸರಿ ವಿವಾದ: ಶಾಲೆಗಳು ಧರ್ಮ ಪ್ರದರ್ಶನದ ಸ್ಥಳವಲ್ಲ; ನಟಿ ಖುಷ್ಬೂ

khushbu
10/02/2022

ಚೆನ್ನೈ: ಶಾಲಾ-ಕಾಲೇಜುಗಳು ಧರ್ಮ ಪ್ರದರ್ಶನಕ್ಕೆ ಇರುವ ಸ್ಥಳವಲ್ಲ. ಅಲ್ಲಿ ನೀವು ಭಾರತೀಯರೆಂಬ ಒಗ್ಗಟ್ಟನ್ನು ಪ್ರದರ್ಶಿಸಬೇಕು ಎಂದು ಹಿಜಬ್-ಕೇಸರಿ ವಿವಾದದ ಬಗ್ಗೆ ಸರಣಿ ಟ್ವೀಟ್ ಮೂಲಕ ನಟಿ ಖುಷ್ಬೂ ಕಿಡಿಕಾರಿದ್ದಾರೆ.

ಶಿಕ್ಷಣಕ್ಕೆ ಧರ್ಮವಿಲ್ಲ. ಅದು ಸಮಾನತೆಯ ಆಲಯ. ಶಿಸ್ತು, ಜ್ಞಾನವನ್ನು ವೃದ್ಧಿಸುವ ಸ್ಥಳ ಶಾಲಾ-ಕಾಲೇಜು ಇಲ್ಲಿ ಧರ್ಮದ ಆಚರಣೆಗೆ ಮುಂದಾಗಬೇಡಿ. ನಿಮ್ಮ ಧರ್ಮದ ಆಚರಣೆಯನ್ನು ನಿಮ್ಮ ಇಚ್ಛೆಯ ಪ್ರಕಾರ ಇತರ ಸ್ಥಳಗಲ್ಲಿ ಆಚರಿಸಿ. ಶಿಕ್ಷಣದ ವಿಚಾರದಲ್ಲಿ ಸುಮ್ಮನೆ ರಾಜಕೀಯ ಮಾಡಬೇಡಿ ಎಂದು ಟ್ವೀಟ್ ತಿಳಿಸಿದ್ದಾರೆ.

ನಾನು ಶಾಲೆಗೆ ಹೋಗುವಾಗ ಸಮವಸ್ತ್ರ ಧರಿಸುತ್ತಿದ್ದೆ. ಆಗ ಎಲ್ಲರಿಗೂ ರೂಲ್ಸ್ ಒಂದೇ ಆಗಿತ್ತು. ಸಮಾನತೆ ಇತ್ತು. ಆದರೆ ಇದೀಗ ಶಾಲಾ-ಕಾಲೇಜಿನಲ್ಲಿ ಧರ್ಮದ ವಿಚಾರವಾಗಿ ರಾಜಕೀಯ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ.


Provided by

ನಾನು ಶಾಲೆಗೆ ಹೋಗುವಾಗ ಸಮವಸ್ತ್ರ ಮಾತ್ರ ಕಡ್ಡಾಯವಾಗಿತ್ತು. ನನ್ನ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಈವರೆಗೆ ಯಾರು ಕೂಡ ಈ ಬಗ್ಗೆ ಪ್ರಶ್ನೆ ಮಾಡಿಲ್ಲ. ಆದರೆ ಇದೀಗ ಈ ಗೊಂದಲ ಯಾಕೆ?. ಸರಸ್ವತಿ ಜ್ಞಾನದ ಸಂಕೇತ ಕೆಲವು ಕಿಡಿಗೇಡಿಗಳು ಈ ಬಗ್ಗೆ ಮಾತನಾಡುತ್ತಿದ್ದಾರೆ. ಅವರಿಗೆ ಶಿಕ್ಷಣದ ಬಗ್ಗೆ ಜ್ಞಾನವಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಧರ್ಮ ಬರುವುದು ತಪ್ಪು ಎಂದು ನಟಿ ಖುಷ್ಬೂ ಟ್ವೀಟ್ ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮುಸ್ಲಿಂ ಶಿಕ್ಷಣ ಸಂಸ್ಥೆಯಲ್ಲಿ ಹಿಂದೂ ವಿದ್ಯಾರ್ಥಿನಿಯವರು ಬುರ್ಖಾ ಧರಿಸಬೇಕಾ?: ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ

ಅಕ್ರಮ ಸಂಬಂಧ ಗಂಡನಿಗೆ ಗೊತ್ತಾದ ಹಿನ್ನಲೆ: ಪತಿಯನ್ನೇ ಕೊಲೆ ಮಾಡಿಸಿದ ಪತ್ನಿ

ಅಲ್ಲಾಹು ಅಕ್ಬರ್‌’ ಎಂದು ಕೂಗಿದ ಮಂಡ್ಯದ ವಿದ್ಯಾರ್ಥಿನಿಗೆ ತಮಿಳುನಾಡಿನಲ್ಲಿ ಪ್ರಶಸ್ತಿ ಘೋಷಣೆ

ಉತ್ತರ ಪ್ರದೇಶದಲ್ಲಿ ಇಂದು ಮೊದಲ ಹಂತದ ಮತದಾನ

ಸಮಾನತೆ ಕಾಣಬೇಕಾದರೆ ಸರ್ಕಾರಿ ಕಚೇರಿಗಳಲ್ಲಿರುವ ದೇವರ ಫೋಟೋ ಕೂಡ ತೆಗೆಯಿರಿ: ನಟ ಚೇತನ್

 

ಇತ್ತೀಚಿನ ಸುದ್ದಿ