ಭುಗಿಲೆದ್ದ ಆಕ್ರೋಶ:  ಹೆಳವ ಸಮಾಜ ಎಸ್ಟಿ ಗೆ ಸೇರಿಸುವಂತೆ ಪಟ್ಟು - Mahanayaka
7:34 AM Wednesday 22 - January 2025

ಭುಗಿಲೆದ್ದ ಆಕ್ರೋಶ:  ಹೆಳವ ಸಮಾಜ ಎಸ್ಟಿ ಗೆ ಸೇರಿಸುವಂತೆ ಪಟ್ಟು

helava samaja
24/08/2022

ವಿಜಯಪುರ: ಅತೀ ಹಿಂದುಳಿದ ಪ್ರವರ್ಗ-1ರ ಪಟ್ಟಿಯಲ್ಲಿರುವ ಅಲೆಮಾರಿ ಹೇಳವ ಸಮುದಾಯವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಹೆಳವ ಸಮಾಜದಿಂದ ಪ್ರತಿಭಟನೆ ನಡೆಸಲಾಯಿತು.

ನಮ್ಮ ಸಮಾಜದ ಕುಲಶಾಸ್ತ್ರೀಯ ಅಧ್ಯಯನದ ವರದಿಯನ್ನು ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಅನುಮೋದನೆಗಾಗಿ ಶಿಫಾರಸ್ಸು ಮಾಡುವಂತೆ ಮುಖ್ಯಮಂತ್ರಿಗಳಿಗೆ ಬರೆದ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಕಳಹಿಸಿಕೊಡಲಾಯಿತು.


ADS

ವಿಜಯಪುರ ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆ ನೂರಾರು ಜನ ಹೆಳವ ಸಮಾಜದ ಭಾಂಧವರೊಂದಿಗೆ  ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಯವರೆವಗೆ ತಲುಪಿತು.

ಈ ಸಂದರ್ಭದಲ್ಲಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸುನಿಲ್ ಕಾಂತ್, ಹೆಳವರ ರವರು ಅಲೆಮಾರಿ ಗುಂಪಿಗೆ ಸೇರಿದ ಅತೀ ಹಿಂದುಳಿದ ಜನಾಂಗದವರಾದ ನಾವು ನಮ್ಮ ಹೊಟ್ಟೆಪಾಡಿಗಾಗಿ ಒಕ್ಕಲು ಮನೆತನದವರ ವಂಶಾವಳಿ ಹೇಳುತ್ತಾ, ಊರೂರು ಅಲೆದಾಡುತ್ತಾ, ಮಳೆ, ಗಾಳಿ, ಬಿಸಿಲು, ಚಳಿಯೆನ್ನದೆ ಇಂದು ಈ ಊರಲ್ಲಿ ನಾಳೆ ಮತ್ತೊಂದು ಊರಲ್ಲಿ ಬೀದಿ ಬದಿಗಳಲ್ಲಿ ಟೆಂಟ್ ಹಾಕಿಕೊಂಡು ಶಾಶ್ವತ ನೆಲೆ ಇಲ್ಲದೆ ಸಾಮಾಜಿಕವಾಗಿ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ತೀರಾ ಹಿಂದುಳಿದವರಾಗಿದ್ದು  ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರುವ ಎಲ್ಲಾ ಲಕ್ಷಣಗಳನ್ನು ಹೊಂದಿದ್ದೇವೆ.  ಸಂವಿಧಾನಾತ್ಮಕವಾಗಿ ನ್ಯಾಯಬದ್ಧವಾಗಿ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಇರಬೇಕಾದ ಅಲೆಮಾರಿ ಸಮುದಾಯವು ಇಂದು ಹಿಂದುಳಿದ ವರ್ಗದ ಪ್ರವರ್ಗ-1ರ ಪಟ್ಟಿಯಲ್ಲಿದೆ ಎಂದರು.

ಇದೇ ಸಂದರ್ಭದಲ್ಲಿ ರಾಜ್ಯ ಲೆಕ್ಕಪರಿಶೋಧಕರಾದ ಹೆಚ್. ಎನ್. ಗೋಗಿ ಅವರು ಮಾತನಾಡಿ 1975 ರಲ್ಲಿ ಎಲ್ ಜಿ ಹಾವನೂರ ಅವರ ಅಧ್ಯಕ್ಷತೆಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ವರದಿಯಲ್ಲಿ ಮತ್ತು 1992 ರಲ್ಲಿ ಡಿ. ಕೆ. ನಾಯ್ಕರ್ ಅಧ್ಯಕ್ಷತೆಯಲ್ಲಿ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ವರದಿಯಲ್ಲಿ ಸಮುದಾಯವನ್ನು ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿ ಸೇರಿಸಲು ಶಿಫಾರಸು ಮಾಡಿರುವುದನ್ನು ಕಾಣಬಹುದಾಗಿದ್ದರೂ ಈವರೆಗೂ ನಮಗೆ ನ್ಯಾಯ ಸಿಕ್ಕಿರುವುದಿಲ್ಲ ಎಂದರು.

ಕಳೆದ ಎರಡು ವರ್ಷಗಳ ಹಿಂದೆ ಸದರಿ ಕಡತವು ಕರ್ನಾಟಕ ವಿಶ್ವವಿದ್ಯಾಲಯ ಹಂಪಿ ಮಾನವಶಾಸ್ತ್ರದ ವಿಭಾಗದ ಡಾಕ್ಟರ್ ಶ್ರೀನಿವಾಸ್ ರವರು ಕರ್ನಾಟಕ ಪಿಚ್ಚಗುಂಟ್ಲು ಹೆಳವ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ಪೂರ್ಣಗೊಳಿಸಿ ಕರ್ನಾಟಕ ಸರ್ಕಾರದ ಕಲ್ಯಾಣ ಇಲಾಖೆ ಬೆಂಗಳೂರು ಇವರಿಗೆ 2018ರಲ್ಲಿ ವರದಿ ಸಲ್ಲಿಸಿರುತ್ತಾರೆ.  ಎರಡು ವರ್ಷಗಳಿಂದ ಸದರಿ ಕಡತವು ರಾಜ್ಯ ಸಮಾಜ ಕಲ್ಯಾಣ ಇಲಾಖೆಯಲ್ಲಿಯೇ ಉಳಿದಿದ್ದು ರಾಜ್ಯ ಸರ್ಕಾರದ ಯಾವ ನಿಲುವು ದೋರಣೆಗಳಿಂದ ಉಳಿದಿರುತ್ತದೆ ಎಂಬುದು ನಮಗೆ ತೋಚದಾಗಿದೆ, ನಮ್ಮ ಸಮುದಾಯವು ಇವತ್ತು  ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗಿಂತಲೂ ಹೀನಾಯವಾದ ಸ್ಥಿತಿಯಲ್ಲಿ ಬದುಕುತ್ತಿದ್ದು ಇಂದಿನ ಆಧುನಿಕರಣ ಮತ್ತು ಜಾಗತೀಕರಣದ ಪರಿಣಾಮವಾಗಿ ಪಾರಂಪರಿಕ ಜ್ಞಾನ ಮೂಲೆಗುಂಪಾಗಿದೆ ಎಂದರು.

ನನೆಗುದಿಗೆ ಬಿದ್ದಿರುವ ಸದರಿ ಕಡತಕ್ಕೆ ಪುನರ್ಜೀವ ನೀಡಿ ಸರ್ಕಾರ ತಕ್ಷಣವೇ ಹೆಳವ ಸಮಾಜವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರ್ಪಡೆ ಮಾಡಲು ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಮೂಲಕ ಸಮುದಾಯಕ್ಕೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಬಸವರಾಜ ಗುರೂಜಿ, ಧುಮ್ಮನಸೂರ ಮಠದ ಶಂಕರಲಿಂಗ ಸ್ವಾಮಿಗಳು ನೇತೃತ್ವ ವಹಿಸಿದ್ದರು ,ಜಿಲ್ಲಾಧ್ಯಕ್ಷರಾದ ಬಾಬು ಹೆಳವರ , ಕಾರ್ಯದರ್ಶಿ ಸಂತೋಷ್, ಮಲ್ಲಿಕಾರ್ಜುನ ಬಿ ಹೆಚ್ ಕಲಬುರ್ಗಿ, ಹೆಚ್ ಎನ್ ಗೋಗಿ,ಶ್ರೀಮಂತ ಸೌಂದರ್ಗೆ, ದೇವೇಂದ್ರ ಹೆಳವರ, ಯಮುನಪ್ಪ ಹೆಳವರ,ಸಂಗಮೇಶ ಐಹೊಳೆ,ಶಿವಶರಣ ಗಬಸಾವಳಗಿ,ಶರಣಪ್ಪ ಲಕ್ಕುಂಡಿ, ಡಾ:ಹಣಮಂತ್ರಾಯ ಹಳಿಸಗರ,ಅಶೋಕ ಗಂಜ್ಯಾಳ,ಅಮೃತ ದಪ್ಪಿನವರ, ಕೆಂಚಪ್ಪ ಹೆಳವರ,ವೆಂಕಟೇಶ ಬೈರಾಮಡಗಿ, ಶೇಕ್ಷಾವಲಿ ಹೊಸಪೇಟೆ, ಚಂದಪ್ಪ ಕಕ್ಕೇರಿ, ರಾಘು ಮಾಸ್ತರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಮಾಜದ ಹಲವರು ಉಪಸ್ಥಿತರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ