ಹೆಲ್ಮೆಟ್ ಧರಿಸಿದ್ದರಿಂದ ಯುವತಿಯ ಪ್ರಾಣ ಉಳಿಯಿತು! - Mahanayaka
1:07 PM Thursday 12 - December 2024

ಹೆಲ್ಮೆಟ್ ಧರಿಸಿದ್ದರಿಂದ ಯುವತಿಯ ಪ್ರಾಣ ಉಳಿಯಿತು!

helmet
28/06/2022

ಮಲೇಷ್ಯಾ: ಸ್ಕೂಟರ್ ನಲ್ಲಿ ತೆರಳುತ್ತಿದ್ದ ಯುವತಿಯ ತಲೆ ಮೇಲೆ ತೆಂಗಿನಕಾಯಿ ಬಿದ್ದಿದ್ದು, ಹೆಲ್ಮೆಟ್ ಧರಿಸಿದ್ದರಿಂದ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಮಲೇಷ್ಯಾದ ಜಲನ್ ಟೆಲೆಕ್ ಕುಂಬಾರ್ ನಲ್ಲಿ ಈ ಘಟನೆ ನಡೆದಿದೆ. ಸ್ಕೂಟರ್‌ ನ ಹಿಂಬದಿಯಲ್ಲಿದ್ದ ಮಹಿಳೆಯ ತಲೆ ಮೇಲೆ ತೆಂಗಿನಕಾಯಿ ಬಿದ್ದಿದೆ.  ಇದರಿಂದ ನಿಯಂತ್ರಣ ಕಳೆದ ಬೈಕಿನಿಂದ ಮಹಿಳೆ  ರಸ್ತೆಗೆ ಬದಿಗೆ  ಎಸೆಯಲ್ಪಟ್ಟು ಹೆಲ್ಮೆಟ್ ಇದ್ದ ಕಾರಣಕ್ಕೆ ಮಹಿಳೆಯ ತಲೆಗೆ ಯಾವುದೇ ಗಾಯವಾಗದೇ ಅಪಾಯದಿಂದ ಪಾರಾಗಿದ್ದಾರೆ.

ಬೈಕ್ ನಿಂದ ಎಸೆಯಲ್ಪಟ್ಟ ಪರಿಣಾಮ ಮಹಿಳೆಗೆ ಅಲ್ಪಸ್ವಲ್ಪ ಗಾಯಗಳಾಗಿವೆ. ಮಹಿಳೆಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೆಲ್ಮೆಟ್ ಇದ್ದುದರಿಂದಾಗಿ ಯುವತಿ ಯಾವುದೇ ಪ್ರಾಣಾಪಾಯವಿಲ್ಲದೇ ಪರಾಗಿದ್ದಾಳೆ. ಹೆಲ್ಮೆಟ್ ಧರಿಸಿಲ್ಲವಾಗಿದ್ದರೆ, ಪ್ರಾಣಾಪಾಯವಾಗುತ್ತಿತ್ತು. ಇದೇ ಕಾರಣಕ್ಕೆ ಹೆಲ್ಮೆಟ್ ಧರಿಸಿ ಎಂದು ಟ್ರಾಫಿಕ್ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡುತ್ತಿರುತ್ತಾರೆ. ದಂಡಪಾವತಿಸಬೇಕಾಗುತ್ತದೆ ಎಂದು ಕೆಲವರು ಹೆಲ್ಮೆಟ್ ಧರಿಸುತ್ತಾರೆ. ಆದರೆ, ಹೆಲ್ಮೆಟ್ ಧರಿಸದೇ ಇರುವುದರಿಂದ ಪ್ರಾಣವನ್ನೇ ದಂಡ ಕಟ್ಟುವಂತಾಗಬಹುದು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ನಟಿಯ ಮೇಲೆ ಅತ್ಯಾಚಾರ ಆರೋಪ: ನಟ ವಿಜಯ್ ಬಾಬು ಆರೆಸ್ಟ್

ಟ್ರಕ್ ನೊಳಗೆ ಉಸಿರುಗಟ್ಟಿ ಸಾವನ್ನಪ್ಪಿದ 46 ಕಾರ್ಮಿಕರು!

ಕಾಂಗ್ರೆಸ್ ಗೆ ಮತ ನೀಡಿ ನಿಮ್ಮ ಮತ ವ್ಯರ್ಥ ಮಾಡಬೇಡಿ: ಅಸಾದುದ್ದೀನ್ ಓವೈಸಿ

ಮಂಗಳೂರಿನ ಸಮುದ್ರದಲ್ಲಿ ಮುಳುಗಡೆಯಾದ ಚೀನಾದ ಹಡಗು!

ಅಂಬೇಡ್ಕರ್‌ ಸಮಾಜ ಸೇವಾ ಸಂಘದಿಂದ ಪ್ರತಿಭಾನ್ವಿತ ವಿದ್ಯಾರ್ಥಿನಿಗೆ ಪ್ರೋತ್ಸಾಹ ಧನ

 

 

 

ಇತ್ತೀಚಿನ ಸುದ್ದಿ