ಹೆಲ್ಮೆಟ್ ಧರಿಸಿ ಬಸ್ ಚಲಾಯಿಸಿದ ಬಸ್ ಚಾಲಕ! - Mahanayaka

ಹೆಲ್ಮೆಟ್ ಧರಿಸಿ ಬಸ್ ಚಲಾಯಿಸಿದ ಬಸ್ ಚಾಲಕ!

ksrts protest
07/04/2021

ಬೆಳಗಾವಿ: ಸಾರಿಗೆ ನೌಕರರು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ಸಿಬ್ಬಂದಿ  ಕರ್ತವ್ಯಕ್ಕೆ ಹಾಜರಾಗಲು ಹಿಂದೇಟು ಹಾಕಿದ್ದರು. ಇದೇ ಸಂದರ್ಭದಲ್ಲಿ ಕೆಲವು ಸಿಬ್ಬಂದಿಯನ್ನು ಒತ್ತಡ ಹೇರಿ  ಡ್ಯೂಟಿಗೆ ಕಳುಹಿಸಲಾಗಿದೆ. ಈ ನಡುವೆ ಚಾಲಕರು ಕಲ್ಲು ತೂರಾಟವಾಗುವ ಭೀತಿಯಿಂದ ಹೆಲ್ಮೆಟ್ ಧರಿಸಿ ಬಸ್ ಚಲಾಯಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಇಲಾಖೆ ಅಧಿಕಾರಿಗಳು ಸಾರಿಗೆ ನೌಕರರ ಮೇಲೆ ಒತ್ತಡ ಹೇರಿ ಕೆಲಸಕ್ಕೆ ನಿಯೋಜಿಸಿದ್ದಾರೆ.  ಹೀಗಾಗಿ ಮುಷ್ಕರಕ್ಕೆ ಹೆದರಿ ಬಸ್ ಒಳ ಭಾಗದಲ್ಲಿ ಸಮವಸ್ತ್ರ ಕೂಡ ಧರಿಸದೇ ಹೆಲ್ಮೆಟ್ ಹಾಕಿಕೊಂಡು ವಾಹನ ಚಲಾಯಿಸಿದ ಘಟನೆ ನಡೆದಿದೆ.

ಸಾರಿಗೆ ಇಲಾಖೆಯ ಹಲವು ಚಾಲಕ ಹಾಗೂ ನಿರ್ವಾಹಕರಿಗೆ ಅಧಿಕಾರಿಗಳು ಇಂದು ಮುಂಜಾನೆ ಡ್ಯೂಟಿ ಮುಗಿದ ಬಳಿಕವೂ ಡ್ಯೂಟಿ ಮುಂದುವರೆಸುವಂತೆ ಒತ್ತಡ ಹೇರಿದ್ದಾರೆ ಎಂದು ತಿಳಿದು ಬಂದಿದೆ.

ಮುಷ್ಕರದ ಗಂಭೀರತೆ ತಿಳಿಯದ ಸಾರಿಗೆ ನೌಕರರು ಡ್ಯೂಟಿಗೆ ಬಂದಿದ್ದಾರೆ. ಈ ನೌಕರರನ್ನು ಬಳಸಿಕೊಂಡು ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಸಾರಿಗೆ ಇಲಾಖೆ ಅಧಿಕಾರಿಗಳು ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ