ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಕಿರುಕುಳ ನೀಡಿದರೆ, ಈ ಸಂಖ್ಯೆಗೆ ಕರೆ ಮಾಡಿ

ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಹಾವಳಿಯಿಂದ ಸಾರ್ವಜನಿಕರು ನೆಮ್ಮದಿ, ಜೀವ ಕಳೆದುಕೊಂಡಿದ್ದಾರೆ. ಮಿತಿಗಿಂತ ಅಧಿಕ ಬಡ್ಡಿ ವಿಧಿಸಿ ಸಾರ್ವಜನಿಕರನ್ನು ಸತಾಯಿಸುವುದು, ಮನೆಗೆ ಬಂದು ಕಿರುಕುಳ ನೀಡುವ ಪ್ರಕರಣಗಳ ಹಿನ್ನೆಲೆ ರಾಜ್ಯ ಸರ್ಕಾರ ಕಿರುಕುಳ ತಡೆಗೆ ನೂತನ ಸಹಾಯವಾಣಿಯನ್ನು ತೆರೆದಿದೆ.
ಬಡಜನರ ಅವಶ್ಯಕತೆಯನ್ನು ಬಂಡವಾಳ ಮಾಡಿಕೊಳ್ಳುವ ಕೆಲವು ವ್ಯಕ್ತಿಗಳು, ಅನಧಿಕೃತ ಲೇವಾದೇವಿದಾರರು ಜನರ ತುರ್ತು ಅವಶ್ಯಕತೆಗೆ ಹಣ ನೀಡಿ, ಹೆಚ್ಚು ಬಡ್ಡಿ ವಿಧಿಸಿ ಶೋಷಣೆ ಮಾಡುತ್ತಾರೆ. ಅಂತಹ ವ್ಯಕ್ತಿಗಳು ಅಥವಾ ಸಂಸ್ಥೆಗಳ ವಿರುದ್ಧ ಸಾರ್ವಜನಿಕರು ಸಹಾಯವಾಣಿ(Helpline) 112 ಅಥವಾ 1902 ಸಂಖ್ಯೆಗೆ ದೂರು ನೀಡಬಹುದು.
ಮೈಕ್ರೋ ಫೈನಾನ್ಸ್ ಗಳ ದಬ್ಬಾಳಿಕೆಯಿಂದ ಸಾರ್ವಜನಿಕರ ರಕ್ಷಣೆಗಾಗಿ ಈ ಸಹಾಯವಾಣಿಯನ್ನು ತೆರೆಯಲಾಗಿದೆ. ಮೈಕ್ರೋ ಫೈನಾನ್ಸ್ ಗಳ ಕಿರುಕುಳಕ್ಕೆ ಸಾರ್ವಜನಿಕರು ಎದೆಗುಂದ ಬೇಕಾಗಿಲ್ಲ, ಸಮಸ್ಯೆಯ ವಿರುದ್ಧ ಹೋರಾಟ ಮಾಡಲು ಮುಂದಾಗಬೇಕಿದೆ. ಸರ್ಕಾರ ನೀಡಿರುವ ಸಹಾಯವಾಣಿಗೆ ಕರೆ ಮಾಡಿ, ಸಮಸ್ಯೆಗಳನ್ನು ವಿವರಿಸಿದರೆ, ಮೈಕ್ರೋ ಫೈನಾನ್ಸ್ ಹಾವಳಿಯಿಂದ ಮುಕ್ತಾಗಬಹುದು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: