ಹೆಂಡ್ತಿ ಆಸೆ ತೀರಿಸಲಾಗದೆ ಪತಿ ಆತ್ಮಹತ್ಯೆ - Mahanayaka

ಹೆಂಡ್ತಿ ಆಸೆ ತೀರಿಸಲಾಗದೆ ಪತಿ ಆತ್ಮಹತ್ಯೆ

suicid
25/01/2022

ಬೆಂಗಳೂರು: ಹೆಂಡತಿಯ ಆಸೆ ತೀರಿಸಲಾಗದೇ ವ್ಯಕ್ತಿಯೊಬ್ಬ ಮ‌ನನೊಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬಸವೇಶ್ವರ ನಗರದ ಮಂಜುನಾಥನಗರದ 6ನೇ ಕ್ರಾಸ್​​ನಲ್ಲಿ ವಾಸವಾಗಿದ್ದ ಚಾಂದ್ ಪಾಷಾ ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ನಾಲ್ಕು ತಿಂಗಳ ಹಿಂದೆ ಉಸ್ಮಾ ಎಂಬಾಕೆಯೊಂದಿಗೆ ಚಾಂದ್ ಪಾಷಾ ಮದುವೆಯಾಗಿದ್ದ. ಇಬ್ಬರಿಗೂ ಇದು ಎರಡನೆಯ ಮದುವೆಯಾಗಿತ್ತು.

ಜೀವನಕ್ಕಾಗಿ ಪತಿ ಮೆಕ್ಯಾನಿಕ್ ಕೆಲಸ ಮಾಡಿಕೊಂಡಿದ್ದರೆ, ಪತ್ನಿ ಗೃಹಿಣಿಯಾಗಿದ್ದಳು. ಆರಂಭದಲ್ಲಿ ಎಲ್ಲವೂ ಸರಿಯಾಗಿತ್ತು‌. ಕೆಲ‌ ದಿನಗಳಿಂದ ಉಸ್ಮಾ ಹೈಫೈ ಜೀವನದ ವ್ಯಾಮೋಹದ ಗೀಳು ಹತ್ತಿಸಿಕೊಂಡಿದ್ದಳು. ಪ್ರತಿದಿನ ಹೊರಗೆ ಸುತ್ತಾಡಿ ಒಳ್ಳೊಳ್ಳೆ ಬಟ್ಟೆ ಹಾಕಿಕೊಳ್ಳಬೇಕು, ಚಿನ್ನಾಭರಣ ಬೇಕೆನ್ನುವ ಹುಚ್ಚು ಹೆಚ್ಚಾಗಿತ್ತು.

ಹೆಂಡತಿಯ ಎಲ್ಲಾ ಆಸೆಗಳನ್ನು‌ ಈಡೇರಿಸಲು ಚಾಂದ್‌ ಪಾಷಾಗೆ ಕಷ್ಟವಾಗುತ್ತಿತ್ತು. ಇದೇ ವಿಚಾರಕ್ಕಾಗಿ ದಂಪತಿಯ ನಡುವೆ ಆಗಾಗ ಜಗಳವಾಗುತ್ತಿತ್ತು‌. ನಿನ್ನೆಯೂ ಮನೆಯಲ್ಲಿ ಇಬ್ಬರ ನಡುವೆ ಗಲಾಟೆಯಾಗಿದೆ ಎನ್ನಲಾಗಿದೆ.

ಒಂದು ಕಡೆ ಹೆಂಡತಿ ಅಂದುಕೊಂಡಿದ್ದನ್ನು ಈಡೇರಿಸಲು ಆಗದೆ ಮನನೊಂದಿದ್ದ ಚಾಂದ್ ಪಾಷಾ ನಿನ್ನೆ ರಾತ್ರಿ ಮನೆಯ ಹಾಲ್​​ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಪಡುಮಾರ್ನಾಡು ಗ್ರಾ.ಪಂ. ಸಾಮಾನ್ಯ ಸಭೆ: ಪಂ. ನೌಕರನ ವಜಾಕ್ಕೆ ಬಿಜೆಪಿ ಸದಸ್ಯರ ಒತ್ತಾಯ; ವಜಾಗೊಳಿಸಿದರೆ ದಲಿತ ಸಂಘಟನೆಗಳಿಂದ ಉಗ್ರ ಪ್ರತಿಭಟನೆಯ ಎಚ್ಚರಿಕೆ

ರೈಲಿನಲ್ಲಿ ದಾಖಲಾತಿ ಇಲ್ಲದೆ ಸಾಗಿಸುತ್ತಿದ್ದ 1.48 ಕೋಟಿ ರೂ. ನಗದು, ಚಿನ್ನಾಭರಣ ವಶ

ಅಧಿಕಾರಕ್ಕಾಗಿ ಮಠ ಕಟ್ಟುತ್ತಿದ್ದಾರೆ: ಸಚಿವ ನಿರಾಣಿ ವಿರುದ್ಧ ಬಿಜೆಪಿ ಶಾಸಕ ಯತ್ನಾಳ್​ ವ್ಯಂಗ್ಯ

‘ಸ್ಟುಪಿಡ್ ಸನ್ ಆಫ್​ ಎ..’ ಎಂದು ಪತ್ರಕರ್ತನಿಗೆ ನಿಂದಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡನ್

ಹುಡುಗಿಯ ವಿಚಾರಕ್ಕೆ ಒಂದೇ ಸಂಘಟನೆಯ ಎರಡು ಗುಂಪುಗಳ ನಡುವೆ ಹೊಡೆದಾಟ

 

ಇತ್ತೀಚಿನ ಸುದ್ದಿ