ಹೆಂಡತಿ ಮೇಲಿನ ವ್ಯಾಮೋಹ: ಹೆತ್ತ ತಾಯಿಯನ್ನೇ ಕೊಂದ ಮಗ - Mahanayaka
6:10 PM Wednesday 11 - December 2024

ಹೆಂಡತಿ ಮೇಲಿನ ವ್ಯಾಮೋಹ: ಹೆತ್ತ ತಾಯಿಯನ್ನೇ ಕೊಂದ ಮಗ

death
31/03/2022

ಯಾದಗಿರಿ: ಹೆಂಡತಿ ಮೇಲಿನ ವ್ಯಾಮೋಹಕ್ಕೆ ಹೆತ್ತ ತಾಯಿಯನ್ನೇ ಮಗ ನದಿಗೆ ತಳ್ಳಿ ಕೊಲೆ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಪೂರ ತಾಲೂಕಿನ ಶಿರವಾಳದ ಬಳಿಯ ಭೀಮಾ ನದಿಯಲ್ಲಿ ನಡೆದಿದೆ.

ರಾಚಮ್ಮ ಮೃತ ಮಹಿಳೆ. ಆರೋಪಿಯನ್ನು ನಾಗಣ್ಣ ಎಂದು ಗುರುತಿಸಲಾಗಿದ್ದು, ಈತ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಬಿಳವಾರ ಗ್ರಾಮದವನಾಗಿದ್ದಾನೆ. ತನ್ನ ತಾಯಿ ಹೆಂಡತಿಯೊಂದಿಗೆ ಸದಾ ಜಗಳವಾಡುತ್ತಾಳೆ ಎಂಬ ಕಾರಣಕ್ಕೆ ನಾಗಣ್ಣ ತನ್ನ ಸ್ನೇಹಿತನೊಂದಿಗೆ ಸೇರಿ ತಾಯಿಯನ್ನು ನದಿಗೆ ತಳ್ಳಿ ಹತ್ಯೆಗೈದಿದ್ದಾನೆ.

ಈ ಪ್ರಕರಣದ ಸಂಬಂಧ ಭೀಮರಾಯನ ಗುಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ನಾಗಣ್ಣ ಹಾಗೂ ಆತನ ಸ್ನೇಹಿತನನ್ನು ವಶಕ್ಕೆ ಪಡೆದಿದ್ದಾರೆ. ಇದೀಗ ಪೊಲೀಸರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ದುಲ್ಕರ್ ಸಲ್ಮಾನ್ ಮೇಲಿನ ನಿಷೇಧವನ್ನು  ಹಿಂಪಡೆದ ಫಿಯೋಕ್

ದೇಶಕ್ಕಾಗಿ ಪ್ರಾಣವನ್ನೂ ತೆರಬಲ್ಲೆ: ಅರವಿಂದ್‌ ಕೇಜ್ರಿವಾಲ್‌

ಇತಿಹಾಸ ತಿರುಚುವುದು ಒಳ್ಳೆ ಬೆಳವಣಿಗೆಯಲ್ಲ: ಎಚ್.ವಿಶ್ವನಾಥ್

ರಂಜಾನ್ ವೇಳೆ ಹಿಂದೂಗಳ ವ್ಯಾಪಾರಕ್ಕೆ ಧಕ್ಕೆ ತರಬೇಡಿ, ಅವರೊಂದಿಗೆ ಸಹಕರಿಸಿ: ಮುಸ್ಲಿಮ್ ಮುಖಂಡರಿಂದ ಮನವಿ

ಇತ್ತೀಚಿನ ಸುದ್ದಿ