ಶಿಕ್ಷೆಗೊಳಗಾಗಲು ದೇಶದ್ರೋಹ ಮಾಡಬೇಕಿಲ್ಲ, ಹೆಣ್ಣಾಗಿ ಹುಟ್ಟಿದರೆ ಸಾಕು | ಅಫ್ಘಾನಿಸ್ತಾನದ ಮೊದಲ ಮಹಿಳಾ ಮೇಯರ್ ಜೀವ ಭಯದಲ್ಲಿ!
ಕಾಬೂಲ್: ಅಫ್ಘಾನಿಸ್ತಾನದ ಮೊದಲ ಮಹಿಳಾ ಮೇಯರ್ ಜರೀಫಾ ಗಫಾರಿ ಇದೀಗ ಜೀವಭಯದಲ್ಲಿದ್ದು, ತಾಲಿಬಾನ್ ಉಗ್ರರು ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಂಡಿರುವ ಬೆನ್ನಲ್ಲೇ, ಅವರು ಯಾವ ಬೇಕಾದರೂ ತನ್ನನ್ನು ಕೊಂದು ಹಾಕಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಮುಂಬರಲಿರುವ ಭೀಕರ ಕ್ಷಣಗಳಿಗೆ ಕೈಗನ್ನಡಿ ಹಿಡಿದಂತಿದೆ- ಈ ಹೊತ್ತಿನಲ್ಲಿ ತಾಲಿಬಾನಿಗಳು ನಾನಿರುವಲ್ಲಿಗೇ ಬಂದು ನನ್ನನ್ನು ಕೊಲ್ಲುವುದನ್ನೇ ಎದುರು ನೋಡುತ್ತಿದ್ದೇನೆ. ಏಕೆಂದರೆ ತಾಲಿಬಾನಿಗಳ ಕಣ್ಣು ಮೊದಲು ಬೀಳುವುದೇ ನನ್ನಂಥವಳ ಮೇಲೆ. ತಾಲಿಬಾನಿಗಳ ರಾಜ್ಯದಲ್ಲಿ ಶಿಕ್ಷೆಗೆ ಒಳಗಾಗಲು ದೇಶದ್ರೋಹದ ಕೆಲಸವನ್ನೇ ಮಾಡಬೇಕೆಂದಿಲ್ಲ. ಇಲ್ಲಿ ಹೆಣ್ಣಾಗಿ ಹುಟ್ಟಿದರೆ ಸಾಕು ಎಂದು ಹೇಳಿದ್ದಾರೆ.
ನನ್ನನ್ನಾಗಲಿ ನನ್ನ ಕುಟುಂಬವನ್ನಾಗಲಿ ರಕ್ಷಣೆ ಮಾಡಲು ಯಾರೂ ಇಲ್ಲ. ನನ್ನ ಸಹಾಯಕ್ಕೆ ಯಾರೂ ಬಾರರು. ಅದು ನನಗೆ ಚೆನ್ನಾಗಿ ಗೊತ್ತಿದೆ. ಹಾಗೆಂದು ನಾನು ಓಡಿಹೋಗಲು ಆಗುವುದಿಲ್ಲ. ಓಡಿ ಹೋದರೂ ಎಲ್ಲಿಗೇ ಎಂದು ಓಡಲಿ. ಎಲ್ಲೆಡೆ ಅವರೇ ತುಂಬಿಕೊಂಡಿರುವಾಗ ಎಲ್ಲಿ ಅವಿತುಕೊಳ್ಳಲಿ. ದನಿಯೆತ್ತರಿಸಿ ಮಾತನಾಡುವ, ರಾಜಕೀಯದಲ್ಲಿ ಉನ್ನತ ಹುದ್ದೆಗೇರಿರುವ ಹೆಣ್ಣನ್ನು ತಾಲಿಬಾನಿಗಳು ಎಂದಿಗೂ ಉಳಿಸುವುದಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ನನ್ನ ಸೇನೆಯಲ್ಲಿ ಜನರಲ್ ಹುದ್ದೆಯ ಅಧಿಕಾರಿಯಾಗಿದ್ದವರು. ಅವರನ್ನು ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ಇದುವರೆಗೂ ನನ್ನ ಮೇಲೆ ಮೂರು ಬಾರಿ ಕೊಲೆ ಯತ್ನಗಳು ನಡೆದಿವೆ. ಪ್ರಜಾಪ್ರಭುತ್ವ ಸರ್ಕಾರ ಇದ್ದ ಸಮಯದಲ್ಲೇ ತಾಲಿಬಾನಿಗಳು ಅವರ ಕಡೆಯವರಿಂದ ನನ್ನನ್ನು ಕೊಲ್ಲಲು ಶತಪ್ರಯತ್ನ ನಡೆಸಿದ್ದರು. ಈ ಬಾರಿ ಅವರದೇ ಸರ್ಕಾರ ಬರುತ್ತಿದೆ. ಈಗ ನನ್ನನ್ನು ಉಳಿಸದೇ ಬಿಡುವರೇ! ಎಂದು ಅವರು ಪ್ರಶ್ನಿಸಿದ್ದಾರೆ.
ಇನ್ನಷ್ಟು ಸುದ್ದಿಗಳು…
ಕಿಟಕಿಯಲ್ಲಿ ನೇತಾಡುತ್ತಾ ಲಸಿಕೆ ಪಡೆದ ವ್ಯಕ್ತಿ | “ಶಾರ್ಟ್ ಕಟ್ ಲಸಿಕೆ” ವಿಡಿಯೋ ವೈರಲ್
ತಮಿಳುನಾಡಿನಂತೆ ಕರ್ನಾಟಕದಲ್ಲಿಯೂ ಪೆಟ್ರೋಲ್ ಬೆಲೆ ಇಳಿಕೆಯಾಗುತ್ತಾ? | ಸಿಎಂ ಬೊಮ್ಮಾಯಿ ಹೇಳಿದ್ದೇನು?
ಕಾಬುಲ್ ನ ಅಮ್ಯೂಸ್ಮೆಂಟ್ ಪಾರ್ಕ್ ಗೆ ನುಗ್ಗಿ ಮಕ್ಕಳ ಆಟಿಕೆ ಕಾರಿನಲ್ಲಿ ಆಟವಾಡಿದ ಉಗ್ರರು
ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಇಳಿಕೆ | ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಇಳಿಕೆ
ನಾಳೆಯೇ ಬಿಜೆಪಿಗೆ ರಾಜೀನಾಮೆ ನೀಡುತ್ತಾರಾ ಆನಂದ್ ಸಿಂಗ್? | ಬೊಮ್ಮಾಯಿ ಹಚ್ಚಿದ ಮುಲಾಮು ಫಲಕೊಡಲಿಲ್ಲವೇ?
ಮಂಗಳೂರಿನಲ್ಲಿ 1,725 ಕೆ.ಜಿ. ಅಪಾಯಕಾರಿ ಸ್ಫೋಟಕ ಪತ್ತೆ! | ಆರೋಪಿ ಅರೆಸ್ಟ್