ಹೆಣ್ಣು ಮಕ್ಕಳಿರುವ ಮನೆಯ ಮುಂದೆ ಚಪ್ಪಲಿ ತಂದಿಡುತ್ತಿರುವ ಸೈಕೋ! | ಏನಿದು ವಿಚಿತ್ರ ಪ್ರಕರಣ?
ಕೊಲ್ಲಂ: ಇದೊಂದು ವಿಚಿತ್ರ ಪ್ರಕರಣ. ಹೆಣ್ಣು ಹೆತ್ತವರು ಈ ಪ್ರಕರಣದಿಂದಾಗಿ ಬೆಚ್ಚಿ ಬಿದ್ದಿದ್ದು, ತಮ್ಮ ಹೆಣ್ಣು ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸಲು ಭಯಪಡುವಂತಾಗಿದೆ. ಕೇರಳದ ಕೊಟ್ಟಿಯಂ ಪೊಲೀಸ್ ಠಾಣೆಯಿಂದ ಮೂರು ಕಿಲೋ ಮೀಟರ್ ವ್ಯಾಪ್ತಿಯ ಎರಡು ಪ್ರದೇಶಗಳಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ.
ಹೌದು…! ಅದು ಅವನೋ ಅವಳೋ ಎನ್ನುವುದು ತಿಳಿದಿಲ್ಲ. ಆದರೆ, ಯಾರ ಮನೆಯಲ್ಲಿ ಹೆಣ್ಣು ಮಕ್ಕಳಿದ್ದಾರೋ ಅವರ ಮನೆಯ ಮುಂಭಾಗದಲ್ಲಿ ಹೆಣ್ಣು ಮಕ್ಕಳು ಧರಿಸುವ ಚಪ್ಪಲಿಗಳು ಪತ್ತೆಯಾಗುತ್ತಿವೆ.
ಕಳೆದ ತಿಂಗಳೂ ಉಮಾಯಲೂರು ಮುಕ್ಕಿ ಪ್ರದೇಶದಲ್ಲಿ ಬೆಳಗ್ಗೆ ಜನರು ವಾಕಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಬಣ್ಣ ಬಣ್ಣದ ಹೆಣ್ಣು ಮಕ್ಕಳ ಚಪ್ಪಲಿಗಳು ಪತ್ತೆಯಾಗಿದ್ದವು. ಆದರೆ ಇದನ್ನು ಇಲ್ಲಿನ ಜನರು ಗಂಭೀರವಾಗಿ ಪರಿಗಣಿಸಿರಲಿಲ್ಲ. ನಾಯಿಗಳು ಚಪ್ಪಲಿಯನ್ನು ತಂದು ಹಾಕಿರಬೇಕು ಎಂದು ಭಾವಿಸಿದ್ದರು. ಆದರೆ ಇದಾದ ಬಳಿಕ ಹೆಣ್ಣು ಮಕ್ಕಳು ಇರುವ ಪ್ರತಿ ಮನೆಗಳಲ್ಲಿಯೂ ಆ ಮನೆಯಲ್ಲಿ ಎಷ್ಟು ಹೆಣ್ಣು ಮಕ್ಕಳಿದ್ದಾರೋ ಅಷ್ಟು ಜೊತೆ ಚಪ್ಪಲಿಗಳನ್ನು ಮನೆಯ ಮುಂಭಾಗದಲ್ಲಿ ತಂದಿಡಲಾಗುತ್ತಿದೆ.
ಚಪ್ಪಲಿಗಳನ್ನು ಕಳ್ಳತನ ಮಾಡುವ ಪ್ರಕರಣಗಳನ್ನು ಸಾಮಾನ್ಯವಾಗಿ ನೋಡುತ್ತಿದ್ದ ಜನರಿಗೆ ಇದೀಗ ತಮ್ಮ ಮನೆಯ ಮುಂಭಾಗದಲ್ಲಿ ಯಾರೋ ಅಪರಿಚಿತರು, ತಮ್ಮ ಮನೆಯ ಹೆಣ್ಣು ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಚಪ್ಪಲಿ ತಂದಿಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಸದ್ಯ ಈ ವಿಚಾರ ಪೊಲೀಸರ ಗಮನಕ್ಕೆ ಬಂದಿದೆ. ಈ ಬಗ್ಗೆ ಪೊಲೀಸರು ಕೂಡ ಈ ಘಟನೆಯ ಹಿಂದೆ ಏನಿದೆ ಎಂದು ಪರಿಶೀಲಿಸುತ್ತಿದ್ದಾರೆ. ಸಿನಿಮೀಯ ಶೈಲಿಯಲ್ಲಿ ಈ ಘಟನೆ ನಡೆದಿದ್ದು, ಇದರ ಹಿಂದೆ ಯಾರಾದರೂ ಮನಸ್ಸು ಬಾದೆಗೊಳಪಟ್ಟವರು ಅಥವಾ ಸೈಕೋಗಳು ಇರಬಹುದೇ? ಈ ಘಟನೆ ಮುಂದೆ ಅನಾಹುತಗಳಿಗೆ ಕಾರಣವಾಗಬಹುದೇ ಎಂಬ ಆತಂಕಗಳಿಗೆ ಕಾರಣವಾಗಿದೆ.