ಹೆಣ್ಣು ಮಕ್ಕಳನ್ನು ಹಿಂದಿನಿಂದ ಎತ್ತಿಕೊಂಡು ಪ್ರಶಾಂತ್ ಸಂಬರ್ಗಿ ಅಶ್ಲೀಲ ವರ್ತನೆ | ಫೋಟೋ ಲೀಕ್ - Mahanayaka
4:30 AM Saturday 10 - January 2026

ಹೆಣ್ಣು ಮಕ್ಕಳನ್ನು ಹಿಂದಿನಿಂದ ಎತ್ತಿಕೊಂಡು ಪ್ರಶಾಂತ್ ಸಂಬರ್ಗಿ ಅಶ್ಲೀಲ ವರ್ತನೆ | ಫೋಟೋ ಲೀಕ್

prashanth sambargi
09/04/2021

ಬಿಗ್ ಬಾಸ್ ಎಂದರೆ, ಹುಚ್ಚರ ಸಂತೆ ಎಂದೇ ಹಿಂದಿನಿಂದಲೂ ಜನ ಹೇಳುತ್ತಲೇ ಬಂದಿದ್ದರೂ ಬಿಗ್ ಬಾಸ್ ನೋಡುವುದನ್ನಂತು ಯಾರು ಬಿಡುತ್ತಿಲ್ಲ. ಈ ನಡುವೆ ಈ ಬಾರಿ ಬಹಳ ಸಂಸ್ಕೃತಿವಂತ ಎಂದು ಹೇಳಿಕೊಂಡು ಎಂಟ್ರಿಯಾಗಿದ್ದ ಪ್ರಶಾಂತ್ ಸಂಬರ್ಗಿ ಅವರು ಬಿಗ್ ಬಾಸ್ ಮನೆಯ ಹೆಣ್ಣುಮಕ್ಕಳ ಜೊತೆಗೆ ನಡೆದುಕೊಳ್ಳುತ್ತಿರುವ ರೀತಿಗೆ ಮತ್ತೊಮ್ಮೆ ಭಾರೀ ಟೀಕೆ ವ್ಯಕ್ತವಾಗಿದೆ.

ಪ್ರಶಾಂತ್ ಸಂಬರ್ಗಿ ಅವರು ಸಹ ಸ್ಪರ್ಧಿ ದಿವ್ಯ ಉರುದುಗ ಅವರನ್ನು ಹಿಂದಿನಿಂದ ಎತ್ತಿಕೊಂಡಂತಹ ನೋಡಲು ಅಸಹ್ಯವಾಗಿ ಕಂಡು ಬರುವಂತಹ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಫೋಟೋ ನೋಡುತ್ತಿದ್ದಂತೆಯೇ ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಸ್ಕೃತಿ ಸಂಪ್ರದಾಯ ಎಂದು ಮಾತನಾಡುವ ಪ್ರಶಾಂತ್ ಸಂಬರ್ಗಿ ಇಷ್ಟೊಂದು ಕೀಳುಮಟ್ಟಕ್ಕೆ ಇಳಿಯುವುದು ಸರಿಯಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಟಾಸ್ಕ್ ಗಳು ಕೂಡ ಬೇಕಾ? ಎಂದು ಪ್ರಶ್ನಿಸಿದ್ದಾರೆ.

ದಿವ್ಯ ಉರುದುಗ ಅವರನ್ನು ಹಿಂದಿನಿಂದ ಎತ್ತಿಕೊಂಡ ಪ್ರಶಾಂತ್ ಸಂಬರ್ಗಿ, ಅವರನ್ನು ಬಲವಂತವಾಗಿ ಎತ್ತಿದ್ದಾರೆ ಎನ್ನುವಂತಹ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅವರ ಸ್ಪರ್ಧಿ ಆದರೇನು? ಈ ರೀತಿಯ ಕೆಲಸ ಮಾಡಬಹುದೇ? ಇಂತಹವೆಲ್ಲ ಮಹಿಳಾ ಸಂಘಟನೆಗಳಿಗೂ ಕಾಣುತ್ತಿಲ್ಲವೇ? ಮನೆಯಲ್ಲಿ ಕುಳಿತು ಬಿಗ್ ಬಾಸ್ ನೋಡುವ ಪುಟ್ಟ ಮಕ್ಕಳ ಮನಸ್ಸಿನ ಮೇಲೆ ಇದು ಹೇಗೆ ಪರಿಣಾಮ ಬೀರಬಹುದು ಎಂದೆಲ್ಲ ಸಾರ್ವಜನಿಕರು ಬಿಗ್ ಬಾಸ್ ಆಯೋಜಕರನ್ನು ಬೆಂಡೆತ್ತಿದ್ದಾರೆ.

ಇತ್ತೀಚಿನ ಸುದ್ದಿ