ಪ್ರೇಮ ನಿವೇದನೆ ತಿರಸ್ಕರಿಸಿದ ಹೆಣ್ಣು ಮಕ್ಕಳಿಗೆ ಕಿರುಕುಳ ನೀಡಿದರೆ ಹುಷಾರ್: ಕೇರಳ ಸಿಎಂ ಪಿಣರಾಯಿ ವಿಜಯನ್ ಎಚ್ಚರಿಕೆ - Mahanayaka
12:09 PM Friday 20 - September 2024

ಪ್ರೇಮ ನಿವೇದನೆ ತಿರಸ್ಕರಿಸಿದ ಹೆಣ್ಣು ಮಕ್ಕಳಿಗೆ ಕಿರುಕುಳ ನೀಡಿದರೆ ಹುಷಾರ್: ಕೇರಳ ಸಿಎಂ ಪಿಣರಾಯಿ ವಿಜಯನ್ ಎಚ್ಚರಿಕೆ

pinarai vijayan
11/08/2021

ತಿರುವನಂತಪುರಂ: ಪ್ರೇಮ ನಿವೇದನೆಯನ್ನು ತಿರಸ್ಕರಿಸಿದ ಹೆಣ್ಣು ಮಕ್ಕಳಿಗೆ ಕಿರುಕುಳ ನೀಡಿದರೆ ಕಠಿಣ ಶಿಕ್ಷೆಯನ್ನು ವಿಧಿಸುವ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದು, ಮಕ್ಕಳ ಅಂತರ್ಜಾಲ ಬಳಕೆಯ ಮೇಲೆ ಪೋಷಕರು ಕೂಡ ಕಣ್ಣಿಡಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿದ್ದಾರೆ.

ಕೇರಳ ವಿಧಾನ ಸಭೆಯಲ್ಲಿ ಮಾತನಾಡಿದ ಅವರು, ಕೊತಮಂಗಲಂ ನೆಲ್ಲಿಕುಳ್ಝಿಯಲ್ಲಿ ಮಾನಸ ಎಂಬ ವಿದ್ಯಾರ್ಥಿನಿಯನ್ನು ಗುಂಡಿಟ್ಟು ಹತ್ಯೆ ಮಾಡಿದ ಪ್ರಕರಣ ದಿಗ್ಭ್ರಾಂತಿಗೊಳಿಸಿತು ಎಂದ ಪಿಣರಾಯಿ, ಇಂತಹ ಪ್ರಕರಣಗಳಿಗೆ ಹೊಸ ಕಾನೂನುಗಳನ್ನು ಮಾಡುವುದಕ್ಕೂ ಮಿತಿ ಇದೆ. ಹಾಗಾಗಿ ಇರುವ ಕಾನೂನನ್ನು ಕಠಿಣವಾಗಿ ಜಾರಿಗೊಳಿಸುವುದಾಗಿ ತಿಳಿಸಿದರು.

ವರದಕ್ಷಿಣೆಗೆ ಸಂಬಂಧಿಸಿದಂತೆ ಕೇರಳದಲ್ಲಿ ನಡೆಯುತ್ತಿರುವ ಕೊಲೆ ಪಾತಕಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು,  ವರದಕ್ಷಿಣೆಯ ವಿರುದ್ಧ ಬಲವಾದ ಸಾಮಾಜಿಕ ವಿರೋಧ ಎದ್ದು ಬರಬೇಕು.  ರಾಜ್ಯದಲ್ಲಿ ವರದಕ್ಷಿಣೆ ಮದುವೆ ಸಮಾರಂಭವನ್ನು ಜನರು ತಿರಸ್ಕರಿಸಬೇಕು ಎಂದು ಕರೆ ನೀಡಿದ ಅವರು, ಜನ ಪ್ರತಿನಿಧಿಗಳು ಕೂಡ ವರದಕ್ಷಿಣೆ ಪಡೆದುಕೊಂಡು ಮದುವೆಯಾಗುತ್ತಿರುವವರ ಮದುವೆಯನ್ನು ಬಹಿಷ್ಕರಿಸಬೇಕು ಎಂದು ಅವರು ಕರೆ ನೀಡಿದರು.


Provided by

ಇನ್ನಷ್ಟು ಸುದ್ದಿಗಳು…

ಕೋಣೆಗೆ ನುಗ್ಗಿದ ಪ್ರಿಯಕರ, ಪ್ರೇಯಸಿಗೆ ಗುಂಡು ಹಾರಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡ!

ಭರ್ಜರಿ ವರದಕ್ಷಿಣೆ ನೀಡಿ ಅದ್ದೂರಿ ಮದುವೆ ಮಾಡಿದರೂ ಪತಿಯ ಮನೆಯಲ್ಲಿ ಶವವಾಗಿ ಪತ್ತೆಯಾದಳು ಮಗಳು!

20 ದಿನಗಳಿಗೊಮ್ಮೆ “ವರದಕ್ಷಿಣೆ ತಾ” ಎನ್ನುತ್ತಿದ್ದವರು ಕೊನೆಗೆ ಕೊಂದೇ ಬಿಟ್ಟರೇ?

ಉಗ್ರರ ಜೊತೆಗೆ ನಂಟು ವಿಚಾರ: ವಿ ಎಚ್ ಪಿ, ಬಜರಂಗದಳದಿಂದ ಬಿ.ಎಂ.ಬಾಷಾ ಮನೆಗೆ ಮುತ್ತಿಗೆ!

ಮೊಘಲರ ಆಳ್ವಿಕೆಯ 600 ವರ್ಷಗಳ ಕಾಲ ಪ್ರಮುಖ ಹುದ್ದೆ ಅಲಂಕರಿಸಿದ್ದವರು ಬ್ರಾಹ್ಮಣರು | ಸಿದ್ದರಾಮಯ್ಯ

ಆರೆಸ್ಸೆಸ್, ಬಿಜೆಪಿ ಕಾರ್ಯಕರ್ತರ ಮೇಲಿನ ಪ್ರಕರಣ ವಾಪಸ್ ಪಡೆಯುತ್ತೇವೆ | ದಲಿತ ಸಿಎಂ ಮಾಡ್ತೇವೆ- ಸಚಿವ ಈಶ್ವರಪ್ಪ ಹೇಳಿಕೆ

ಇತ್ತೀಚಿನ ಸುದ್ದಿ