ಅಪ್ಪ…ಅಮ್ಮ… ದೊಡ್ಡಪ್ಪ…ಚಿಕ್ಕಪ್ಪ.. ಮಕ್ಕಳು: ಕಾಫಿ ತೋಟದಲ್ಲಿ ಕುಟುಂಬ ಸಮೇತ ಬೀಡು ಬಿಟ್ಟ ಕಾಡಾನೆ ಹಿಂಡು!

ಚಿಕ್ಕಮಗಳೂರು: ಕಾಫಿನಾಡ ಕಾಫಿತೋಟದಲ್ಲಿ ಕಾಡಾನೆ ತನ್ನ ವಂಶ ವೃಕ್ಷದೊಂದಿಗೆ ಬೀಡು ಬಿಟ್ಟ ಘಟನೆ ಮೂಡಿಗೆರೆ ತಾಲೂಕಿನ ಗೋಣಿಬೀಡು ಸಮೀಪದ ಜಿ.ಹೊಸಳ್ಳಿ ಬಳಿ ನಡೆದಿದೆ.
ಅಪ್ಪ…ಅಮ್ಮ… ದೊಡ್ಡಪ್ಪ…ಚಿಕ್ಕಪ್ಪ ಹೀಗೆ ಒಂದೇ ಹಿಂಡಿನಲ್ಲಿ ಸುಮಾರು 16 ಕಾಡಾನೆಗಳು ಕುಟುಂಬ ಸಮೇತವಾಗಿ ಬೀಡುಬಿಟ್ಟಿವೆ.
ಜಿ.ಹೊಸಳ್ಳಿ, ಅರೇಹಳ್ಳಿ, ಚೀಕನಹಳ್ಳಿ, ಮಾಕೋನಹಳ್ಳಿ ಸುತ್ತ ಮುತ್ತ ಕಾಡಾನೆಗಳ ಹಿಂಡು ಬೀಡು ಬಿಟ್ಟಿವೆ. ಮರಿಗಳು ಇರೋದ್ರಿಂದ ಜನರನ್ನ ಕಂಡು ಕಾಡಾನೆಗಳು ಘೀಳಿಡ್ತಾ ನುಗ್ಗುತ್ತಿವೆ.
ಕಾಡಾನೆಗಳು ಯಾವಾಗ, ಎಲ್ಲಿ, ಹೇಗೆ ಜನರ ಮೇಲೆ ದಾಳಿ ಮಾಡ್ತಾವೋ ಎನ್ನುವುದು ಗ್ರಾಮಸ್ಥರ ಆತಂಕವಾಗಿದೆ. ಈಗಾಗಲೇ ಸಾಕಷ್ಟು ಬೆಳೆಯನ್ನು ಹಾಳು ಮಾಡಿರುವ ಕಾಡಾನೆಗಳ ಹಿಂಡಿನಿಂದಾಗಿ ಜನರು ಸಂಕಷ್ಟಕ್ಕೀಡಾಗಿದ್ದಾರೆ.
ಅಧಿಕಾರಿಗಳು ಆನೆ ಹಿಂಡನ್ನು ಓಡಿಸೋ ಪ್ರಯತ್ನ ಮಾಡಿದರೂ ಜಗ್ಗದ ಕಾಡಾನೆಗಳ ಗುಂಪು
ಕಾಫಿತೋಟದಲ್ಲೇ ಒಂದು ಕಡೆಯಿಂದ ಮತ್ತೊಂದು ಕಡೆ ಹೋಗಿ ನಿಲ್ಲುತ್ತಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ