Monsoon Skin Care: ಮಳೆಗಾಲದಲ್ಲಿ ಕಾಡುವ ಮೊಡವೆ ಸಮಸ್ಯೆಗೆ ಇಲ್ಲಿದೆ ಸರಳ ಮನೆ ಮದ್ದು
ಮಳೆಗಾಲದಲ್ಲಿ ಕೂಡ ಬೆವರುವುದು ಸಹಜವಾಗಿದೆ. ಬೆವರಿನಿಂದ ಚರ್ಮ ಜಿಗುಟಾಗುತ್ತದೆ. ಇದು ಸಾಕಷ್ಟು ಬ್ಯಾಕ್ಟೀರಿಯಾಗಳ ಸೃಷ್ಟಿಗೆ ಕಾರಣವಾಗುತ್ತದೆ. ಹೀಗಾಗಿ ಮುಖದಲ್ಲಿ ಮೊಡವೆ, ಕಜ್ಜಿ ಆಗುವುದು ಸಾಮಾನ್ಯವಾಗಿದೆ. ಈ ರೀತಿಯಾಗಿ ಮುಖದಲ್ಲಿ ಸೃಷ್ಟಿಯಾಗುವ ಮೊಡವೆಗಳು ತಕ್ಷಣಕ್ಕೆ ಹೋಗುವುದಿಲ್ಲ. ಒಂದರ ಹಿಂದೆ ಒಂದರಂತೆ ಕಾಣಿಸಿಕೊಳ್ಳುತ್ತವೆ. ಇಂತಹ ಮೊಡವೆ ಸಮಸ್ಯೆಗೆ ಮನೆಯಲ್ಲೇ ಚಿಕಿತ್ಸೆ ಪಡೆಯಬಹುದು. ಇದು ನಿಧಾನವಾಗಿ ಮೊಡವೆ ಸಮಸ್ಯೆಯನ್ನು ಶಾಶ್ವತವಾಗಿ ನಿವಾರಿಸುತ್ತದೆ.
* ಜಾಯಿಕಾಯಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚುವುದರಿಂದ ಮೊಡವೆ ಸಮಸ್ಯೆಯನ್ನು ನಿವಾರಿಸಲು ಸಾಧ್ಯವಾಗುತ್ತದೆ.
ಜಾಯಿಕಾಯಿ ಪೇಸ್ಟ್ ಮಾಡಲು, ಅದನ್ನು ಸ್ವಲ್ಪ ನೀರು ಸೇರಿಸಿ ಕಲ್ಲಿನ ಮೇಲೆ ಉಜ್ಜಿ. ಆಗ ಪೇಸ್ಟ್ ರೀತಿ ಬರುತ್ತದೆ. ಅದನ್ನು ಮೊಡವೆಗಳಿರುವ ಜಾಗಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆಯಿರಿ.
* ಕಾಳುಮೆಣಸಿನ ಪೇಸ್ಟ್ ಮಾಡಿ ಮೊಡವೆಗಳು ಕಾಣಿಸಿಕೊಂಡ ಜಾಗಕ್ಕೆ ಮಾತ್ರ ಹಚ್ಚಿ. ಇದರಿಂದ ಸುಲಭವಾಗಿ ಮೊಡವೆ ನಿವಾರಿಸಬಹುದು. ಆದರೆ ನೆನಪಿಡಿ ಇಡೀ ಮುಖದ ಮೇಲೆ ಹಚ್ಚಬೇಡಿ. ಕರಿಮೆಣಸಿನ ಪೇಸ್ಟ್ ಮಾಡಲು ಹಸಿ ಹಾಲಿಗೆ ಕರಿಮೆಣಸಿನ ಪುಡಿಯನ್ನು ಬೆರೆಸಿ ಮಿಶ್ರಣ ಮಾಡಿ ಮೊಡವೆ ಇರುವ ಜಾಗಕ್ಕೆ ಮಾತ್ರವೇ ಹಚ್ಚಿ.
* ಬೇವಿನಿಂದ ತಯಾರಿಸಿದ ಪೇಸ್ಟ್ ಅನ್ನು ಮುಖಕ್ಕೆ ಹಚ್ಚುವುದರಿಂದ ಮೊಡವೆಗಳ ಸಮಸ್ಯೆ ಕಡಿಮೆಯಾಗುತ್ತದೆ ಮತ್ತು ಕಲೆಗಳು ಸಹ ಕಡಿಮೆಯಾಗುತ್ತದೆ.
ಹಾಲಿಗೆ ಕೊತ್ತಂಬರಿ ಪುಡಿ ಸೇರಿಸಿ ಪೇಸ್ಟ್ ತಯಾರಿಸಿ ಮತ್ತು ಮೊಡವೆಗಳು ಅಥವಾ ಕಲೆಗಳು ಕಾಣಿಸಿಕೊಳ್ಳುವ ಜಾಗಕ್ಕೆ ಹಚ್ಚಿ. ಸ್ವಲ್ಪ ಸಮಯದ ನಂತರ ತೊಳೆಯಿರಿ. ಕೆಲವು ಸಮಯದ ನಿರಂತರ ಬಳಕೆಯ ನಂತರ, ಮೊಡವೆಗಳ ಸಮಸ್ಯೆ ಕಣ್ಮರೆಯಾಗಲು ಪ್ರಾರಂಭಿಸುತ್ತದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: