ಗಾಝಾ ಕದನ ವಿರಾಮ: ಹಿಜ್ಬುಲ್ಲಾ ಮುಖ್ಯಸ್ಥರಿಂದ ಫೆಲೆಸ್ತೀನಿಯರಿಗೆ ಅಭಿನಂದನೆ
ಗಾಝಾ ಕದನ ವಿರಾಮ ಒಪ್ಪಂದಕ್ಕೆ ಹಿಜ್ಬುಲ್ಲಾ ಮುಖ್ಯಸ್ಥ ನಯೀಮ್ ಖಾಸಿಮ್ ಅವರು ಫೆಲೆಸ್ತೀನಿಯನರನ್ನು ಅಭಿನಂದಿಸಿದ್ದಾರೆ. ಇದು ಇಸ್ರೇಲ್ ವಿರುದ್ಧದ ಪ್ರತಿರೋಧದ ನಿರಂತರತೆಯನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ. ಇಸ್ರೇಲ್ ಗೆ ಬಯಸಿದ್ದು ಸಿಗಲಿಲ್ಲ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಕಳೆದ ನವೆಂಬರ್‌ನಲ್ಲಿ ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವೆ ಕದನ ವಿರಾಮ ಒಪ್ಪಂದಕ್ಕೆ ಬಂದಿದ್ದು . ಅಕ್ಟೋಬರ್ 7, 2023 ರಿಂದ, ಲೆಬನಾನ್‌ನ ಹಿಜ್ಬೊಲ್ಲಾ ಮತ್ತು ಯೆಮೆನ್‌ನಿಂದ ಹೌತಿಗಳು ಇಸ್ರೇಲ್ ವಿರುದ್ಧ ನಿರಂತರ ದಾಳಿಗಳನ್ನು ಆರಂಭಿಸಿವೆ. ಶನಿವಾರ, ಹೌತಿಗಳು ಇಸ್ರೇಲ್ ಅನ್ನು ಗುರಿಯಾಗಿಸಿಕೊಂಡು ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಸಹ ಹಾರಿಸಿದ್ದಾರೆ . ಇಸ್ರೇಲಿ ರಕ್ಷಣಾ ಪಡೆಗಳು ಕ್ಷಿಪಣಿಯನ್ನು ಯಶಸ್ವಿಯಾಗಿ ತಡೆಹಿಡಿದಿರುವುದಾಗಿ ಘೋಷಿಸಿದೆ .
ಕ್ಷಿಪಣಿ ಹೊಡೆದಂತೆ, ಮಧ್ಯ ಇಸ್ರೇಲ್ ಮತ್ತು ಜೆರುಸಲೆಮ್‌ನಾದ್ಯಂತ ಸೈರನ್‌ಗಳು ಮೊಳಗಿದ್ದು . ಈ ಮಧ್ಯೆ, ಕದನ ವಿರಾಮ ಜಾರಿಗೆ ಬಂದರೆ ದಾಳಿ ನಿಲ್ಲಿಸುವುದಾಗಿ ಹೌತಿಗಳು ನಿನ್ನೆ ಘೋಷಿಸಿದ್ದರು .
ಗಾಜಾದಲ್ಲಿ ಕದನ ವಿರಾಮ ಒಪ್ಪಂದ ಭಾನುವಾರ ಬೆಳಿಗ್ಗೆ 8:30 ರಿಂದ ಜಾರಿಗೆ ಬರಲಿದೆ ಎಂದು ಕತಾರ್ ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj