ಹಿಝ್ಬುಲ್ಲಾದ ಉನ್ನತ ನಾಯಕನನ್ನು ಗುಂಡಿಟ್ಟು ಸಾಯಿಸಿದ ಅಪರಿಚಿತರು: ಮನೆಯ ಹತ್ತಿರವೇ ನಡೀತು ಕೃತ್ಯ!
ಹಿಝ್ಬುಲ್ಲಾದ ಉನ್ನತ ನಾಯಕ ಶೈಖ್ ಮುಹಮ್ಮದ್ ಅಲಿ ಹಮಾದಿ ಅವರನ್ನು ಅಜ್ಞಾತ ಬಂದೂಕುಧಾರಿಗಳು ಗುಂಡಿಟ್ಟು ಸಾಯಿಸಿದ್ದಾರೆ. ಲೆಬನಾನಿನಲ್ಲಿರುವ ಅವರ ಮನೆಯ ಹತ್ತಿರವೇ ಈ ಹತ್ಯೆ ನಡೆದಿದೆ. ಲೆಬನಾನಿನ ಉತ್ತರ ಭಾಗದ ಅಲ್ ಬಕ್ಕದಲ್ಲಿ ಇವರು ಹಿಝ್ಬುಲ್ಲಾದ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ಈ ದಾಳಿಯ ಹೊಣೆಗಾರಿಕೆಯನ್ನು ಯಾರೂ ವಹಿಸಿಕೊಂಡಿಲ್ಲ. ಅಮೆರಿಕಾದ ಗುಪ್ತಚರ ಸಂಸ್ಥೆ ಎಫ್ ಬಿ ಐಯ ಮೋಸ್ಟ್ ವಾಂಟೆಡ್ ಲಿಸ್ಟ್ ನಲ್ಲಿ ಇದ್ದ ವ್ಯಕ್ತಿಯಾಗಿದ್ದರು ಈ ಹಮಾದಿ. 153 ಮಂದಿ ಪ್ರಯಾಣಿಕರನ್ನು ಅತೆನ್ಸ್ ನಿಂದ ರೋಮ್ ಗೆ ಕೊಂಡೊಯ್ಯುತ್ತಿದ್ದ ಲಿಫ್ತಾನ್ಸ್ ವಿಮಾನವನ್ನು ಈ ಹಿಂದೆ ಅಪಹರಿಸಲಾಗಿತ್ತು. ಅದರ ಆರೋಪವನ್ನು ಅಮೆರಿಕಾ ಈ ಹಮಾದಿಯ ಮೇಲೆ ಹೋರಿಸಿತ್ತು.
ಮತ್ತು ಆ ಕಾರಣಕ್ಕಾಗಿಯೇ ಅವರನ್ನು ವಾಂಟೆಡ್ ಪಟ್ಟಿಯಲ್ಲಿ ಸೇರಿಸಿತ್ತು. ಇಸ್ರೇಲ್ ಮತ್ತು ಹಿಝ್ಬುಲ್ಲ ನಡುವೆ 60 ದಿನಗಳ ಕದನ ವಿರಾಮ ಒಪ್ಪಂದ ಮುಗಿಯುವುದಕ್ಕೆ ದಿನಗಳಷ್ಟೇ ಉಳಿದಿರುವಾಗ ಈ ಹತ್ಯೆ ನಡೆದಿದೆ. ಜನವರಿ 26ರ ಮೊದಲು ಲೆಬನಾನಿನಿಂದ ಇಸ್ರೇಲ್ ತನ್ನ ಸೇನೆಯನ್ನು ಹಿಂಪಡೆಯಬೇಕು ಮತ್ತು ಇಸ್ರೇಲ್ ನ ಗಡಿ ಯಿಂದ ಲಿತಾನಿ ನದಿಯ ಪಶ್ಚಿಮ ಭಾಗಕ್ಕೆ ಹಿಝ್ಬುಲ್ಲಾ ಹೊರಟು ಹೋಗಬೇಕು ಎಂಬುದಾಗಿ ಒಪ್ಪಂದದಲ್ಲಿ ಹೇಳಲಾಗಿದೆ. ಲೆಬನಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 3700 ಮಂದಿ ಸಾವಿಗೀಡಾಗಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj