ಕೋರ್ಟ್ ಆವರಣದಲ್ಲಿ ಪತ್ನಿಯ ಮೇಲೆ ಆ್ಯಸಿಡ್ ಎರಚಿದ ಪತಿ!
ಕೊಯಂಬತ್ತೂರು: ಕೋರ್ಟ್ ಆವರಣದಲ್ಲಿಯೇ ಪತಿಯೋರ್ವ ತನ್ನ ಪತ್ನಿಯ ಮೇಲೆ ಆ್ಯಸಿಡ್ ದಾಳಿ ನಡೆಸಿದ ಆಘಾತಕಾರಿ ಘಟನೆ ಕೊಯಂಬತ್ತೂರಿನಲ್ಲಿ ನಡೆದಿದೆ.
ಕೊಯಂಬತ್ತೂರಿನ ರಾಮನಾಥಪುರಂನ ಕಾವೇರಿ ನಗರದ 33 ವರ್ಷದ ಕವಿತಾ ಆ್ಯಸಿಡ್ ದಾಳಿಗೊಳಗಾದ ಮಹಿಳೆಯಾಗಿದ್ದಾರೆ. ಇವರು 2016ರಲ್ಲಿ ಬಸ್ ಪ್ರಯಾಣಿಕರೊಬ್ಬರ ಚೈನ್ ಕಳ್ಳತನ ಪ್ರಕರಣದಲ್ಲಿ ಬಂಧಿತರಾಗಿದ್ದು, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
ಪತಿ ಶಿವ ಎಂಬಾತನಿಂದ ದೂರವಾಗಿ ಬದುಕುತ್ತಿದ್ದ ಇವರು, ವಿಚಾರಣೆಗಾಗಿ ನ್ಯಾಯಾಲಯಕ್ಕೆ ಬರುತ್ತಿದ್ದರು. ಪತಿ ಮತ್ತು ಪತ್ನಿ ನಡುವೆ ಆಗಾಗ ಜಗಳ ಕೂಡ ನಡೆಯುತ್ತಿತ್ತು.
ಗುರುವಾರ, ಕವಿತಾ ಪ್ರಕರಣದ ವಿಚಾರಣೆಗಾಗಿ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಆಕೆಯನ್ನು ಹಿಂಬಾಲಿಸಿದ ಪತಿ ಶಿವ, ಕೋರ್ಟ್ ಕಾರಿಡಾರ್ನಲ್ಲಿ ಕಾಯುತ್ತಿದ್ದಾಗ ಜಗಳಕ್ಕಿಳಿದಿದ್ದು, ಇಬ್ಬರ ನಡುವೆ ಜಗಳ ನಡೆಯುತ್ತಿದ್ದಾಗ ಶಿವ ತಾನು ಬಚ್ಚಿಟ್ಟಿದ್ದ ಪ್ಲಾಸ್ಟಿಕ್ ಬಾಟಲಿಯಿಂದ ಕವಿತಾ ಮೇಲೆ ಆಸಿಡ್ ಸುರಿದಿದ್ದಾನೆ.
ಆ್ಯಸಿಡ್ ನಿಂದಾಗಿ ಕವಿತಾ ಅವರಿಗೆ ಗಂಭೀರ ಗಾಯಗಳಾಗಿವೆ. ಅಲ್ಲಿದ್ದ ವಕೀಲರು ದಾಳಿಯನ್ನು ತಡೆಯಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಆಸಿಡ್ ಸೋರಿಕೆಯಿಂದಾಗಿ ವಕೀಲರೊಬ್ಬರಿಗೆ ಸಣ್ಣ ಸುಟ್ಟ ಗಾಯಗಳಾಗಿವೆ.
ಶಿವನನ್ನು ಥಳಿಸಿದ ವಕೀಲರು ಪೊಲೀಸರಿಗೆ ಒಪ್ಪಿಸಿದ್ದಾರೆ. ಕವಿತಾ ಅವರನ್ನು ತಕ್ಷಣ ಚಿಕಿತ್ಸೆಗಾಗಿ ಕೊಯಮತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಯಿತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw