ಆರೋಗ್ಯ ಸೇತು ಆ್ಯಪ್ ಇಲ್ಲ ಎಂದು ನಾಗರಿಕರಿಗೆ ಸೇವೆ-ಸೌಲಭ್ಯ ನಿರಾಕರಿಸುವಂತಿಲ್ಲ | ಹೈಕೋರ್ಟ್ - Mahanayaka

ಆರೋಗ್ಯ ಸೇತು ಆ್ಯಪ್ ಇಲ್ಲ ಎಂದು ನಾಗರಿಕರಿಗೆ ಸೇವೆ-ಸೌಲಭ್ಯ ನಿರಾಕರಿಸುವಂತಿಲ್ಲ | ಹೈಕೋರ್ಟ್

20/10/2020

ಬೆಂಗಳೂರು: ಆರೋಗ್ಯ ಸೇತು ಆ್ಯಪ್ ಇಲ್ಲದ ಕಾರಣಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಯಾವುದೇ ಅಂಗ ಸಂಸ್ಥೆಗಳು ನಾಗರಿಕರಿಗೆ ಸೌಲಭ್ಯ-ಸೇವೆಗಳನ್ನು ನಿರಾಕರಿಸುವಂತಿಲ್ಲ ಎಂದು ರಾಜ್ಯ ಹೈಕೋರ್ಟ್ ಹೇಳಿದೆ.

ಡಿಜಿಟಲ್ ಹಕ್ಕು ಹೋರಾಟಗಾರ ಅನಿವರ್ ಎ. ಅರವಿಂದ್ ಅವರು, ಆರೋಗ್ಯ ಸೇತು ಆ್ಯಪ್ ಕಡ್ಡಾಯದಿಂದ ಖಾಸಗಿ ಹಕ್ಕು ಮತ್ತು ಇತರೆ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಗೆ ಸಂಬಂಧಿಸಿದಂತೆ  ಆದೇಶಿಸಿರುವ ಕೋರ್ಟ್,  ಯಾವುದೇ ಸೌಲಭ್ಯಕ್ಕಾಗಿ ಆಪ್ ಬಳಕೆಗೆ ಒತ್ತಾಯ ಮಾಡುವಂತಿಲ್ಲ. ಈ ಬಗ್ಗೆ ಆಕ್ಷೇಪ ಸಲ್ಲಿಸಲು ಕೇಂದ್ರ ಸರ್ಕಾರಕ್ಕೆ ಕೊನೆಯ ಅವಕಾಶ ನೀಡಿ ವಿಚಾರಣೆಯನ್ನು ನವೆಂಬರ್ 10ಕ್ಕೆ ಮುಂದೂಡಿದೆ.

ಇತ್ತೀಚಿನ ಸುದ್ದಿ