ಹೈಕೋರ್ಟ್ ತೀರ್ಪು ಅತ್ಯಂತ ಐತಿಹಾಸಿಕವಾಗಿದೆ: ಪ್ರಮೋದ್​ ಮುತಾಲಿಕ್ - Mahanayaka
10:15 PM Thursday 14 - November 2024

ಹೈಕೋರ್ಟ್ ತೀರ್ಪು ಅತ್ಯಂತ ಐತಿಹಾಸಿಕವಾಗಿದೆ: ಪ್ರಮೋದ್​ ಮುತಾಲಿಕ್

pramood muthalik
15/03/2022

ಧಾರವಾಡ: ರಾಜ್ಯಾದ್ಯಂತ ಭಾರೀ ವಿವಾದಕ್ಕೆ ಕಾರಣವಾಗಿದ್ದ ಹಿಜಾಬ್‌ ವಿಚಾರವಾಗಿ ಇವತ್ತಿನ ಹೈಕೋರ್ಟ್ ನೀಡಿದ ತೀರ್ಪು ಅತ್ಯಂತ ಐತಿಹಾಸಿಕವಾಗಿದೆ. ಇದು ಸಂವಿಧಾನದ ವಿಜಯ. ಸಂವಿಧಾನದ ಬದ್ಧವಾದ ಸರ್ಕಾರದ ಆದೇಶ ಎತ್ತಿ‌ ಹಿಡಿದಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್​ ಮುತಾಲಿಕ್​ ಹೇಳಿದ್ದಾರೆ.

ಹೈಕೋರ್ಟ್ ತೀರ್ಪಿನ ಕುರಿತು ಪ್ರತಿಕ್ರಿಯಿಸಿದ ಅವರು, ಹೈಕೋರ್ಟ್ ಶಾಲಾ-ಕಾಲೇಜಿಗೆ ಹಿಜಾಬ್ ಪ್ರವೇಶ ಇಲ್ಲ ಅಂತ ಸ್ಪಷ್ಟವಾಗಿ ಹೇಳಿದೆ. ಸಮವಸ್ತ್ರ ಅಂದರೆ ಸಮವಸ್ತ್ರವೇ. ಕೇಸರಿ ಶಾಲು, ಹಿಜಾಬ್‌ಗೆ ಅವಕಾಶ ಇಲ್ಲ ಅಂತ ಸಾಮಾನ್ಯರಿಗೂ ಗೊತ್ತಿತ್ತು. ಆದರೂ ವಿವಾದ ಮಾಡಿದ್ದರು. ಮುಖಕ್ಕೆ ಹೊಡೆದಂತೆ ಆದೇಶವಾಗಿದೆ ಎಂದರು.

ಹೈಕೋರ್ಟ್ ನೀಡಿದ ತೀರ್ಪುನ್ನು‌ ಮುಸ್ಲಿಮರು ಪಾಲಿಸಬೇಕು. ಮಧ್ಯಂತರ ಆದೇಶ ಬಂದಾಗ ಪಾಲಿಸಿರಲಿಲ್ಲ. ಈಗ ಪಾಲಿಸಲೇಬೇಕು ಎಂದು ಪ್ರಮೋದ್​ ಮುತಾಲಿಕ್ ಎಂದು ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ




ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಹಿಜಾಬ್​ ತೀರ್ಪು: ಬಿಜೆಪಿ ಮುಖಂಡರೊಂದಿಗೆ ಕೇಸರಿಬಾತ್​ ಸವಿದು ಸಂಭ್ರಮಿಸಿದ ಸಚಿವ ಈಶ್ವರಪ್ಪ

ತಾಯಿ ಸಾವನ್ನಪ್ಪಿದ್ದು ಗೊತ್ತಿಲ್ಲದೇ 4 ದಿನ ಅಮ್ಮನ ಮಡಿಲಲ್ಲೇ ಮಲಗಿದ್ದ ಮಗ

ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ನಿಮಿಷ ಪ್ರಿಯಗೆ ರಾಯಭಾರ ಕಚೇರಿಯ ಸಹಾಯದ ಭರವಸೆ

ಬರೀ ಟ್ವೀಟ್ ಮಾಡಿದರೆ ಪಕ್ಷ ಉಳಿಯಲ್ಲ: ಕಾಂಗ್ರೆಸ್ ಮುಖಂಡ ವೀರಪ್ಪ  ಮೊಯ್ಲಿ ಕಿಡಿ

ಪಾಪಪ್ರಜ್ಞೆ ಇದ್ದರೆ ತೆರೆದು ನೋಡಲು ನೂರಾರು ಫೈಲುಗಳಿವೆ

ಹೊಸಂಗಡಿ ಗ್ರಾಮ ಪಂಚಾಯತ್ ನಲ್ಲಿ ರಾಷ್ಟ್ರಧ್ವಜಕ್ಕೆ ಸರಣಿ ಅವಮಾನ

 

ಇತ್ತೀಚಿನ ಸುದ್ದಿ