ಹಿಜಾಬ್ ಧರಿಸದೇ ಇರುವುದರಿಂದ ಅತ್ಯಾಚಾರ ಹೆಚ್ಚುತ್ತಿದೆ | ಜಮೀರ್ ಅಹ್ಮದ್ ಹೇಳಿಕೆ - Mahanayaka
12:05 PM Wednesday 12 - March 2025

ಹಿಜಾಬ್ ಧರಿಸದೇ ಇರುವುದರಿಂದ ಅತ್ಯಾಚಾರ ಹೆಚ್ಚುತ್ತಿದೆ | ಜಮೀರ್ ಅಹ್ಮದ್ ಹೇಳಿಕೆ

jameer ahmad
14/02/2022

ಹುಬ್ಬಳ್ಳಿ: ಹಿಜಾಬ್ ಧರಿಸದೇ ಇರುವುದರಿಂದಲೇ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ ಎಂದು ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿದರು.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಾಜ್ಯಪಾಲ ಮಹಮದ್ ಖಾನ್ ಅವರ ,  “ಮುಸ್ಲಿಮ್ ಸಮುದಾಯದಲ್ಲಿ ಹಿಜಾಬ್ ಅನಿವಾರ್ಯವಲ್ಲ” ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಯಾವ ಅರ್ಥದಲ್ಲಿ ಅವರು ಹೀಗೆ ಹೇಳಿದ್ದಾರೆಯೋ ಗೊತ್ತಿಲ್ಲ, ಹೆಣ್ಣುಮಕ್ಕಳು ಇರುವವರಿಗೆ ಹಿಜಾಬ್ ನ ಪ್ರಾಮುಖ್ಯತೆ ತಿಳಿದಿರುತ್ತದೆ. ಬಹುಶಃ ಅವರಿಗೆ ಹೆಣ್ಣುಮಕ್ಕಳಿಲ್ಲ ಎಂದೆನಿಸುತ್ತದೆ ಎಂದು ತಿರುಗೇಟು ನೀಡಿದರು.

ಹಿಜಾಬ್ ಎಂದರೆ.. ಪರದೆ… ಅಂದರೆ ಹೆಣ್ಣು ಮಗು ಬೆಳೆದು ದೊಡ್ಡವಳಾದಾಗ ಆಕೆಯ ಅಂದವನ್ನು ಬಚ್ಚಿಡುವ ಪರದೆಯಾಗಿದೆ. ಹೆಣ್ಣಿನ ಅಂದ ಪ್ರದರ್ಶನವಾದರೆ ದುರ್ಬಳಕೆಯಾಗುವ ಸಾಧ್ಯತೆ ಇದೆ. ನೀವು ಅಂಕಿಅಂಶಗಳನ್ನು ನೋಡಿದರೆ ತಿಳಿಯುತ್ತದೆ. ಭಾರತದಲ್ಲಿ ಅತ್ಯಾಚಾರ ಪ್ರಮಾಣ ಹೆಚ್ಚಿದೆ. ಏಕೆಂದರೆ ಭಾರತದಲ್ಲಿ ಮಹಿಳೆಯರು ಹೆಚ್ಚಾಗಿ ಹಿಜಾಬ್ ಧರಿಸುತ್ತಿಲ್ಲ.


Provided by

ಅಂತೆಯೇ ಹಿಜಾಬ್ ಏನೂ ಕಡ್ಡಾಯವಲ್ಲ.. ಆದರೆ ಯಾರು ಹಿಜಾಬ್ ಧರಿಸಲು ಇಚ್ಚಿಸುತ್ತಾರೆಯೋ ಅವರು.. ಯಾರು ತಮ್ಮ ಅಂದವನ್ನು ಬೇರೆಯಾರಿಗೂ ತೋರಿಸಬಾರದು ಎಂದು ಭಾವಿಸುತ್ತಾರೆಯೋ ಅವರು ಹಿಜಾಬ್ ಧರಿಸುತ್ತಾರೆ. ಇದು ಅನಾದಿ ಕಾಲದಿಂದಲೂ  ನಡೆದುಕೊಂಡು ಬಂದ ಪದ್ಧತಿಯಾಗಿದೆ ಎಂದು ಜಮೀರ್ ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮದುವೆ ಮೆರವಣಿಗೆಯಲ್ಲಿ ಸುಡುಮದ್ದು ಸ್ಫೋಟ: ಓರ್ವ ಸಾವು, ಇಬ್ಬರಿಗೆ ಗಾಯ

ಕಿಡಿಗೇಡಿಗಳಿಂದ ಬಿಜೆಪಿ ಶಾಸಕ ಅನಿಲ್ ಬೆನಕೆ ಕಚೇರಿ ಮೇಲೆ ಕಲ್ಲೆಸೆತ

ಮನೆ ಮುಂದೆ ಅಕ್ರಮ ಕಟ್ಟಡ , ಬಡ ಕುಟುಂಬಕ್ಕೆ ದಿಗ್ಬಂಧನ | ಗ್ರಾ.ಪಂ. ಸದಸ್ಯನ ದೌರ್ಜನ್ಯ ವಿರುದ್ಧ ಜಿಲ್ಲಾಧಿಕಾರಿಗೆ ದೂರು

ಪದವಿ ಪೂರ್ವ ಕಾಲೇಜುಗಳಿಗೆ ಫೆ.15ರ ವರೆಗೆ ರಜೆ ವಿಸ್ತರಣೆ

 

ಇತ್ತೀಚಿನ ಸುದ್ದಿ