ಪರೀಕ್ಷಾ ಕೇಂದ್ರಕ್ಕೆ ಹಿಜಾಬ್ ಧರಿಸಿ ಬಂದಿದ್ದ ಶಿಕ್ಷಕಿ ಅಮಾನತು - Mahanayaka
9:58 PM Thursday 14 - November 2024

ಪರೀಕ್ಷಾ ಕೇಂದ್ರಕ್ಕೆ ಹಿಜಾಬ್ ಧರಿಸಿ ಬಂದಿದ್ದ ಶಿಕ್ಷಕಿ ಅಮಾನತು

hijab
28/03/2022

ಬೆಂಗಳೂರು:  ಹಿಜಾಬ್ ಧರಿಸಿ ಬಂದಿದ್ದ ಪರೀಕ್ಷಾ ಮೇಲ್ವಿಚಾರಕಿಯನ್ನು ಮುಖ್ಯ ಅಧೀಕ್ಷಕರು ವಜಾಗೊಳಿಸಿದ ಘಟನೆ ವರದಿಯಾಗಿದೆ.

ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅನುಮತಿ ನೀಡಲ್ಲ ಅಂತ ಸರ್ಕಾರ ಈಗಾಗಲೇ ತಿಳಿಸಿದೆ. ರಾಜಾಜಿನಗರದ ಕೆಟಿಎಸ್ ​ವಿ ಹೈಸ್ಕೂಲ್ ಶಿಕ್ಷಕಿ ಪರೀಕ್ಷಾ ಕೊಠಡಿಗೆ ಶಿಕ್ಷಕಿ ನೂರ್ ಫಾತಿಮಾ ಹಿಜಾಬ್ ಧರಿಸಿ ಬಂದಿದ್ದರು ಎನ್ನಲಾಗಿದೆ.

ಇನ್ನೂ ಹಿಜಾಬ್ ತೆಗೆದು ಪರೀಕ್ಷಾ ಕೊಠಡಿಗೆ ತೆರಳುವಂತೆ ಅವರಿಗೆ ಸೂಚನೆ ನೀಡಲಾಗಿತ್ತು. ಆದರೆ, ಅವರು ಇದನ್ನು ನಿರಾಕರಿಸಿದ್ದು,  ಕೋರ್ಟ್ ವಿದ್ಯಾರ್ಥಿನಿಯರಿಗೆ ಮಾತ್ರವೇ ಹಿಜಾಬ್ ಧರಿಸಿ ಬರಬಾರದು ಎಂದು ಹೇಳಿದೆ. ಶಿಕ್ಷಕರಿಗೆ ಹೇಳಿಲ್ಲ ಎಂದು ಅವರು, ,ಮನವರಿಕೆ ಮಾಡಲು ಪ್ರಯತ್ನ ಪಟ್ಟರು. ಆದರೆ ಅವರನ್ನು ಪರೀಕ್ಷಾ ಕೆಲಸದಿಂದ ಮುಖ್ಯ ಅಧಿಕ್ಷಕರು ವಜಾಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಶಿಕ್ಷಕಿ ನೂರ್ ಫಾತಿಮಾ ಅವರನ್ನು ಪರೀಕ್ಷಾ ಕೆಲಸದಿಂದ ವಜಾಗೊಳಿಸಿದ ಬೆನ್ನಲ್ಲೇ ಮತ್ತೋರ್ವ ಶಿಕ್ಷಕಿಯನ್ನು ಮೇಲ್ವಿಚಾರಕಿಯಾಗಿ ನೇಮಕ ಮಾಡಲಾಗಿದೆ ಎಂದು ತಿಳಿದು ಬಂದಿದೆ.




ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಉತ್ತರ ಪ್ರದೇಶ: ಕ್ರಿಮಿನಲ್ ಗಳಿಗೆ ಎನ್ ಕೌಂಟರ್ ಭೀತಿ, ಜನರಿಗೆ ಬುಲ್ಡೋಜರ್ ಭೀತಿ

ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ದ.ಕ. ಅಧ್ಯಕ್ಷರಾಗಿ ಕೆ.ಎಂ.ಫಯಾಝ್ ಆಯ್ಕೆ

ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ದ.ಕ. ಅಧ್ಯಕ್ಷರಾಗಿ ಕೆ.ಎಂ.ಫಯಾಝ್ ಆಯ್ಕೆ

ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್‌ ಗೆ ಒಂದು ವರ್ಷ ಜೈಲು

ಇತ್ತೀಚಿನ ಸುದ್ದಿ