ಹಿಜಾಬ್, ಹಲಾಲ್ ಬಗ್ಗೆ ಮಾತನಾಡಿದರೆ ಏನಾಗುತ್ತೋ ಅನ್ನೋದು ಬೇಡ: ಕಾಂಗ್ರೆಸ್ ನಾಯಕರಿಗೆ ಸಿದ್ದರಾಮಯ್ಯ ಹೇಳಿದ್ದೇನು?
ಬೆಂಗಳೂರು: ಸಹಿಷ್ಣುತೆ, ಸಹಬಾಳ್ವೆ ಸಂವಿಧಾನದಲ್ಲಿದೆ. ಇದರ ಮೇಲೆ ಕಾಂಗ್ರೆಸ್ ನಂಬಿಕೆ ಇಟ್ಟಿದೆ. ಹಿಜಾಬ್, ಹಲಾಲ್ ಮಾಂಸ ವಿಚಾರವಾಗಿ ಮಾತನಾಡಿದರೆ, ಏನಾಗುತ್ತೋ , ತಪ್ಪು ತಿಳಿದುಕೊಳ್ತಾರೆ ಅನ್ನೋದು ಬೇಡ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಜರುಗಿದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕರು ಹಿಜಾಬ್ ಹಾಗೂ ಹಲಾಲ್ ಮಾಂಸದ ಕುರಿತು ಮಾತನಾಡಲು ಹಿಂದೇಟು ಹಾಕುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದರು.
ಮೊದಲು ನಮಗೆ ಕ್ಲಾರಿಟಿ ಇರಬೇಕು. ನಾವು ಅಗ್ರೆಸ್ಸೀವ್ ಆಗಿ ಇದನ್ನ ಪ್ರತಿಪಾದಿಸಬೇಕು. ಇಲ್ಲದೇ ಹೋದರೆ ಸೆಕ್ಯೂಲರಿಸಂ ರಕ್ಷಿಸೋಕೆ ಆಗಲ್ಲ ಎಂದು ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಇತರ ನಾಯಕರು ಹಿಜಾಬ್ ಹಾಗೂ ಹಲಾಲ್ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದೇಟು ಹಾಕುತ್ತಿರುವ ಬಗ್ಗೆ ಪರೋಕ್ಷವಾಗಿ ತಿಳುವಳಿಕೆ ನೀಡಲು ಪ್ರಯತ್ನಿಸಿದರು.
2023ಕ್ಕೆ ಚುನಾವಣೆ ಬರುತ್ತಿದೆ, ಬಿಜೆಪಿ ಅನೇಕ ಬಾರಿ ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಪ್ರಧಾನಿಯೂ ಜನರ ಸಮಸ್ಯೆ ಬಗ್ಗೆ ಚರ್ಚೆಮಾಡಲಿಲ್ಲ. ದೇಶದ ಉದ್ದಗಲಕ್ಕೂ ಜನರನ್ನ ವಿಭಜಿಸುವ ಪ್ರಯತ್ನ ಮಾಡ್ತಿದ್ದಾರೆ. ಈಗ ರಾಜ್ಯದ ಚುನಾವಣೆ ಹತ್ತಿರ ಬಂದಿದೆ. ಅದಕ್ಕೆ ಹೆಚ್ಚು ಕೋಮುವಾದ ಹುಟ್ಟುಹಾಕ್ತಿದ್ದಾರೆ ಎಂದರು.
ಗೋ ಹತ್ಯೆ ನಿಷೇಧ, ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದರು. ಹಿಜಾಬ್, ಭಗವದ್ಗೀತೆ ಎಲ್ಲವನ್ನೂ ತಂದ್ರು. ಈಗ ಹಲಾಲ್ ವಿಚಾರ ಪ್ರಸ್ತಾಪ ಮಾಡ್ತಿದ್ದಾರೆ. ಇವೆಲ್ಲವೂ ಸಂವಿಧಾನಕ್ಕೆ ವಿರುದ್ಧವಾಗಿವೆ. ಯುವಕರಿಗೆ ದ್ವೇಷದ ವಿಷಬೀಜ ಬಿತ್ತುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧದ ಹೋರಾಟಕ್ಕೆ ಕಾಂಗ್ರೆಸ್ ನಾಯಕರಿಗೆ ಕರೆ ನೀಡಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಧಗಧಗನೆ ಹೊತ್ತಿ ಉರಿದ ಚಲಿಸುತ್ತಿದ್ದ ಬಸ್
ತಂದೆಯ ಕೊಲೆ ಪ್ರಕರಣ: ಪುತ್ರ ದೋಷಿ ಎಂದು ತೀರ್ಪು ನೀಡಿದ ನ್ಯಾಯಾಲಯ
ವಿಶ್ವ ಮೂರ್ಖರ ದಿನ ದಿನದ ಇತಿಹಾಸ [April Fools’ Day] ಏನು ಗೊತ್ತಾ?
ಮುಸ್ಲಿಂ ಮಗುವಿಗೆ ಸಿದ್ಧಗಂಗ ಶ್ರೀಗಳ ನೆನಪಿಗೆ ‘ಶಿವಮಣಿ’ ಎಂದು ನಾಮಕರಣ
ಗ್ರಾಹಕರಿಗೆ ಬಿಗ್ ಶಾಕ್: ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ 250 ರೂಪಾಯಿ ಏರಿಕೆ