ಹಿಜಾಬ್ , ಜನಿವಾರ, ಕುಂಕುಮ, ಲಿಂಗ, ಕ್ರಾಸ್ ಶಾಲೆಯಿಂದ ಹೊರಗಿಡಿ | ನಟ ಚೇತನ್ ಅಹಿಂಸಾ ಒತ್ತಾಯ
ಬೆಂಗಳೂರು: ಶಾಲಾ ಕಾಲೇಜುಗಳಲ್ಲಿ ಧಾರ್ಮಿಕ ಸಂಕೇತಗಳ ಬಳಕೆಗೆ ವಿರೋಧ ವ್ಯಕ್ತವಾಗುತ್ತಿರುವ ನಡುವೆಯೇ ನಟ ಚೇತನ್ ಅಹಿಂಸಾ ಅವರು, ಯಾವುದೇ ಧರ್ಮಗಳ ಧಾರ್ಮಿಕ ಸಂಕೇತಗಳ ಬಳಕೆಗೆ ಅವಕಾಶ ನೀಡಬಾರದು ಎಂದು ಹೇಳಿದ್ದಾರೆ.
ಹಿಜಾಬ್ ಜೊತೆಗೆ ಕರ್ನಾಟಕದ ಯಾವುದೇ ವಿದ್ಯಾರ್ಥಿಯ ಹಣೆಯ ಮೇಲೆ ಕುಂಕುಮ, ಬೊಟ್ಟು, ವಿಭೂತಿ, ತಿಲಕ, ಕೂದಲಿಗೆ ಹೂ ಮುಡಿಯುವುದು, ಕಾಣುವಂತೆ ಜನಿವಾರ, ಲಿಂಗ, ಕ್ರಾಸ್ ಇತ್ಯಾದಿಗಳನ್ನು ತರಗತಿಗಳಲ್ಲಿ ಧರಿಸಲು ಅನುಮತಿ ನೀಡಬಾರದು ಎಂದು ಅವರು ಒತ್ತಾಯಿಸಿದ್ದಾರೆ.
ಏಕರೂಪತೆ ಹಾಗೂ ನಿಜವಾದ ಜಾತ್ಯತೀತತೆಗಾಗಿ ಬಹುಸಂಖ್ಯಾತ, ಅಲ್ಪಸಂಖ್ಯಾತ ಎಲ್ಲ ಧಾರ್ಮಿಕ ಗುರುತುಗಳನ್ನು ಸಾರ್ವಜನಿಕ ಶಾಲೆಗಳಿಂದ ಹೊರಗಿಡಬೇಕು ಎಂದು ಚೇತನ್ ಅಹಿಂಸಾ ಒತ್ತಾಯಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ದಲಿತರಿಗೆ ಜಮೀನು ಮಂಜೂರಾಗುವುದನ್ನು ಸಹಿಸದೇ ಮಾರಣಾಂತಿಕ ಹಲ್ಲೆ ನಡೆಸಿದ ಮೇಲ್ವರ್ಗದ ಹಿಂದೂಗಳು!
ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪುನೀತ್, ಸಂಚಾರಿ ವಿಜಯ್ ಅವರಿಗೆ ಗೌರವ
ಮುಸ್ಲಿಮ್ ವಿದ್ಯಾರ್ಥಿನಿಗೆ ಬೆಂಗಾವಲಾಗಿ ನಿಂತ ನಾಲ್ವರು ಹಿಂದೂ ವಿದ್ಯಾರ್ಥಿನಿಯರು!
30 ಕೋಟಿ ರೂ. ವಂಚನೆ: ಪಂಚಮುಖಿ ಚಿಟ್ ಫಂಡ್ ಡೈರೆಕ್ಟರ್ ಬಂಧನ
ಹಿಜಾಬ್ ವಿವಾದ: ಶಾಲೆಗೆ ನಾಗಸಾಧುಗಳ ಥರ ಬರ್ತೀನಿ ಅನ್ನೋಕ್ಕಾಗಲ್ಲ: ಸಿ.ಟಿ.ರವಿ