ಹಿಜಾಬ್  ತೀರ್ಪು ನೀಡಿದ ನ್ಯಾಯಾಧೀಶರಿಗೆ ಜೀವ  ಬೆದರಿಕೆ: ಇಬ್ಬರ ಬಂಧನ - Mahanayaka
7:16 AM Friday 20 - September 2024

ಹಿಜಾಬ್  ತೀರ್ಪು ನೀಡಿದ ನ್ಯಾಯಾಧೀಶರಿಗೆ ಜೀವ  ಬೆದರಿಕೆ: ಇಬ್ಬರ ಬಂಧನ

hijab
20/03/2022

ಚೆನ್ನೈ: ಹಿಜಾಬ್ ಪ್ರಕರಣದಲ್ಲಿ ತೀರ್ಪು ನೀಡಿದ ನ್ಯಾಯಾಧೀಶರಿಗೆ ಜೀವ ಬೆದರಿಕೆ ಹಾಕಿದ ಆರೋಪದಲ್ಲಿ ಇಬ್ಬರನ್ನು ಬಂಧಿಸಲಾಗಿದೆ.

ತಿರುನಲ್ವೇಲಿ ಮೂಲದ ಕೋವೈ ರಹಮತುಲ್ಲಾ ಮತ್ತು ತಂಜಾವೂರಿನ ಎಸ್.ಜಮಾಲ್ ಮೊಹಮ್ಮದ್ ಬಂಧಿತರಾಗಿದ್ದು,  ಕರ್ನಾಟಕದಲ್ಲಿ ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಾರ್ಚ್ 15 ರಂದು ತೀರ್ಪು ನೀಡಿತ್ತು.

ಹೈಕೋರ್ಟ್ ತೀರ್ಪಿನ ವಿರುದ್ಧ ಕರ್ನಾಟಕ ಮತ್ತು ತಮಿಳುನಾಡಿನ ಧಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.  ಮಧುರೈನಲ್ಲಿ ನಡೆದ ಸಭೆಯಲ್ಲಿ ತಮಿಳುನಾಡು ತೌಹೀದ್ ಜಮಾಅತ್ ಆಡಿಟಿಂಗ್  ಸಮಿತಿ ಸದಸ್ಯ ಕೋವೈ ರಹಮತುಲ್ಲಾ ಅವರು ಮಾಡಿದ ಭಾಷಣ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗಿದೆ. ತಪ್ಪು ತೀರ್ಪು ನೀಡಿದ ಜಾರ್ಖಂಡಿನ  ಜಡ್ಜ್ ಒಬ್ಬರು ಬೆಳಗಿನ ಜಾವದಲ್ಲಿ ವಾಕಿಂಗ್ ಹೊರಟಾಗ ಕೊಲ್ಲಲ್ಪಟ್ಟಿದ್ದರು, ಎಂದು ರಹಮತುಲ್ಲಾ ಅವರ ಭಾಷಣದಲ್ಲಿ  ಉಲ್ಲೇಖಿಸಿದ್ದು, ಅದೇ ರೀತಿ ತೀರ್ಪು ನೀಡಿದ ನ್ಯಾಯಾಧೀಶರಿಗೆ ಏನಾದರೂ ಆದರೆ ಬಿಜೆಪಿಯವರು ನಮ್ಮನ್ನು ದೂರುತ್ತಾರೆ ಎಂದು ರಹಮತುಲ್ಲಾ ಹೇಳಿದ್ದರು ಎನ್ನಲಾಗಿದೆ.


Provided by

ಈ ಹೇಳಿಕೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿದ್ದರು.  ತಮಿಳುನಾಡು ತೌಹೀದ್ ಜಮಾತ್ ಜಿಲ್ಲಾಧ್ಯಕ್ಷ ಹಬೀಬುಲ್ಲಾ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ರಾಜಿಕ್ ಮೊಹಮ್ಮದ್ ವಿರುದ್ಧ ಪ್ರಕರಣ ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬಿಜೆಪಿಯವರು ಕರ್ನಾಟಕದಲ್ಲಿ ಸ್ವಂತ ಶಕ್ತಿಯಿಂದ ಗೆದ್ದು ಬಂದಿಲ್ಲ: ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ

ಮೂಲ್ಕಿ ಬಸ್ ನಿಲ್ದಾಣದಲ್ಲಿ ಕಾರ್ಕಳದ ವ್ಯಕ್ತಿಯ ಶವ ಪತ್ತೆ

ಪಠ್ಯ ಪುಸ್ತಕದಲ್ಲಿ ಭಗವದ್ಗೀತೆ ಸೇರಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ: ಸಚಿವ ಮಾಧುಸ್ವಾಮಿ

ಶಾಲೆಯಲ್ಲಿ ಭಗವದ್ಗೀತೆ ಕಲಿಸುವುದನ್ನು ಸ್ವಾಗತಿಸುತ್ತೇನೆ: ವಿಪಕ್ಷ ನಾಯಕ ಸಿದ್ದರಾಮಯ್ಯ

ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆ ನಿರ್ಧಾರ ಕೊರೊನಾ ಮಹಾಮಾರಿಗಿಂತಲೂ ಮಾರಕ: ತನ್ವೀರ್‌ ಸೇಠ್‌

ಇತ್ತೀಚಿನ ಸುದ್ದಿ