ಬೆಟ್ಟದಿಂದ ಉರುಳಿದ ಬೃಹತ್ ಬಂಡೆಗಳು: 9 ಮಂದಿ ಸಾವು | ಭಯಾನಕ ವಿಡಿಯೋ ವೈರಲ್
ಹಿಮಾಚಲ ಪ್ರದೇಶ: ಹಿಮಾಚಲ ಪ್ರದೇಶದ ಸಾಂಗ್ಲಾ ಕಣಿವೆಯಲ್ಲಿ ಭಾರೀ ಭೂಕುಸಿತ ಸಂಭವಿಸಿದ ಪರಿಣಾಮ ಬೆಟ್ಟದಿಂದ ಬೃಹತ್ ಕಲ್ಲುಗಳು ಉರುಳಿದ್ದು, ಪರಿಣಾಮವಾಗಿ 9 ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದು, ಬೆಟ್ಟದಿಂದ ಕಲ್ಲುಗಳು ಉರುಳುವ ಭಯಾನಕ ವಿಡಿಯೋ ವೈರಲ್ ಆಗಿದೆ.
ಮೃತಪಟ್ಟವರೆಲ್ಲರೂ ಪ್ರವಾಸಿಗರು ಎಂದು ಹೇಳಲಾಗಿದ್ದು, ಕಣಿವೆಯ ಕೆಳಗೆ ಪ್ರವಾಸಿಗರು ವಾಹನದಲ್ಲಿದ್ದ ವೇಳೆ ವಾಹನದ ಮೇಲೆ ಕಲ್ಲೊಂದು ಬಿದ್ದಿದ್ದು, ಪರಿಣಾಮವಾಗಿ 9 ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನಾ ಸ್ಥಳದಲ್ಲಿ ವೈದ್ಯರ ತಂಡ ಕೂಡ ಬೀಡು ಬಿಟ್ಟಿದೆ ಎಂದು ಎಸ್ ಪಿ ಕಿನೌರ್ನ ಸಾಜು ರಾಮ್ ರಾಣಾ ತಿಳಿಸಿದ್ದಾರೆ.
ಕಣಿವೆಯ ಮೇಲಿನಿಂದ ಗುಡ್ಡ ಕುಸಿತವಾಗಿದ್ದು, ಈ ವೇಳೆ ಬೃಹತ್ ಕಲ್ಲುಗಳು ಬೆಟ್ಟದಿಂದ ಕೆಳಗೆ ಉರುಳಿದ್ದು, ವೇಗವಾಗಿ ಬಂದು ಕೆಳಗಡೆ ಇದ್ದ ಸೇತುವೆಯೊಂದಕ್ಕೆ ಕಲ್ಲುಗಳು ಅಪ್ಪಳಿಸಿವೆ. ಇದರಿಂದಾಗಿ ಸೇತುವೆ ಕುಸಿದು ಬಿದ್ದಿದೆ. ಈ ಪ್ರದೇಶದಲ್ಲ ನಿಲ್ಲಿಸಲಾಗಿದ್ದ ವಾಹನಗಳ ಮೇಲೆಯೂ ಕಲ್ಲುಗಳು ಬಿದ್ದಿವೆ. ಈ ಭಯಾನಕ ವಿಡಿಯೋವನ್ನು ವ್ಯಕ್ತಿಯೋರ್ವರು ಮನೆಯೊಂದರೊಳಗಿಂದ ಮಾಡಿರುವುದು ಕಂಡು ಬಂದಿದೆ. ಆ ಮನೆಯವರೆಗೂ ಕಲ್ಲುಗಳು ವೇಗವಾಗಿ ಹಾರಿ ಬಂದಿವೆ. ಇನ್ನೂ ಭೂ ಕುಸಿತದ ಹಿನ್ನೆಲೆಯಲ್ಲಿ ಘಟನಾ ಸ್ಥಳದಲ್ಲಿ ಭಾರೀ ಧೂಳು ಆವರಿಸಿದ್ದು, ಈ ದೃಶ್ಯಗಳು ವಿಡಿಯೋದಲ್ಲಿ ಕಂಡು ಬಂದಿದೆ.
#WATCH | Himachal Pradesh: Boulders roll downhill due to landslide in Kinnaur district resulting in bridge collapse; vehicles damaged pic.twitter.com/AfBvRgSxn0
— ANI (@ANI) July 25, 2021
ಇನ್ನಷ್ಟು ಸುದ್ದಿಗಳು…
ಯುವಕನ ಲಾಕಪ್ ಡೆತ್ ವಿರೋಧಿಸಿ ಪೊಲೀಸ್ ಠಾಣೆಗೆ ನುಗ್ಗಿದ ಗ್ರಾಮಸ್ಥರು | ಮಹಿಳಾ ಪೇದೆ ಸ್ಥಳದಲ್ಲಿಯೇ ಸಾವು
ಪ್ರೇಯಸಿಯ ಮನೆಗೆ ಬಂದಿದ್ದ ಯುವಕನನ್ನು ಥಳಿಸಿ, ಮರ್ಮಾಂಗ ಕತ್ತರಿಸಿ ಭೀಕರ ಹತ್ಯೆ!
ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಒಂದೇ ಮನೆಯ 9 ಮಂದಿ ದುರಂತ ಸಾವು!
ಬೆಚ್ಚಿ ಬೀಳಿಸಿದ ಘಟನೆ: ಬಹಿರ್ದೆಸೆಗೆ ತೆರಳಿದ್ದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ!
ಆಟವಾಡುವ ನೆಪದಲ್ಲಿ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರ!