ಭಾರಿ ಹಿಮಪಾತ: 7 ಸೇನಾ ಸಿಬ್ಬಂದಿ ಹಿಮದಡಿ ಸಿಲುಕಿರುವ ಶಂಕೆ
ನವದೆಹಲಿ: ಈಶಾನ್ಯ ರಾಜ್ಯ ಅರುಣಾಚಲ ಪ್ರದೇಶದಲ್ಲಿ ಭಾರತೀಯ ಸೇನಾ ಗಸ್ತು ಪಡೆಯ ಕಡೆ ಹಿಮಪಾತ ಸಂಭವಿಸಿದ್ದು, ಗಸ್ತು ತಿರುಗುತ್ತಿದ್ದ ಏಳು ಸೇನಾ ಸಿಬ್ಬಂದಿ ಹಿಮದಡಿ ಸಿಲುಕಿದ್ದಾರೆ ಎಂದು ಭಾರತೀಯ ಸೇನೆ ಮಾಹಿತಿ ನೀಡಿದೆ.
ಈ ಘಟನೆ ನಿನ್ನೆ ಕಮೆಂಗ್ ಸೆಕ್ಟರ್ನ ಎತ್ತರದ ಪ್ರದೇಶದಲ್ಲಿ ಹಿಮಪಾತವಾಗಿದ್ದು, ಸೇನೆ ಶೋಧ ಮತ್ತು ರಕ್ಷಣಾ ತಂಡಗಳನ್ನು ಸ್ಥಳಕ್ಕೆ ಏರ್ ಲಿಫ್ಟ್ ಮಾಡಿದೆ. ಇನ್ನು ಹೆಲಿಕಾಪ್ಟರ್ ಮೂಲಕ ಕಾರ್ಯಾಚರಣೆ ಮುಂದುವರಿದಿದೆ. ಈ ಪ್ರದೇಶದಲ್ಲಿ ಕಳೆದ ಹಲವಾರು ದಿನಗಳಿಂದ ಭಾರಿ ಹಿಮಪಾತ ಸಂಭವಿಸುತ್ತಿದೆ ಎಂದು ಸೇನೆ ತಿಳಿಸಿದೆ.
ಹಿಮಪಾತದಿಂದ ಹಾನಿಗೊಳಗಾದ ಸೇನಾ ಗಸ್ತು ಪಡೆ ರಕ್ಷಿಸಲು ಅರುಣಾಚಲ ಪ್ರದೇಶದ ಕಮೆಂಗ್ ಸೆಕ್ಟರ್ನಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಸಹಾಯಕ್ಕಾಗಿ ವಿಶೇಷ ತಂಡಗಳನ್ನು ಏರ್ ಲಿಫ್ಟ್ ಮಾಡಲಾಗಿದೆ. ಈ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಹಿಮಪಾತದೊಂದಿಗೆ ಅಸಹನೀಯ ಹವಾಮಾನವಿದೆ ಎಂದು ಭಾರತೀಯ ಸೇನೆ ತಿಳಿಸಿದೆ.
ಅರುಣಾಚಲ ಪ್ರದೇಶವನ್ನು ಸಾಮಾನ್ಯವಾಗಿ ಪಶ್ಚಿಮದಲ್ಲಿ ಕಮೆಂಗ್ ಪ್ರದೇಶ ಮತ್ತು ಅರುಣಾಚಲ ಪ್ರದೇಶದ ಉಳಿದ ಭಾಗಗಳಾಗಿ ವಿಂಗಡಿಸಲಾಗಿದೆ.
ಭಾರತೀಯ ಸೇನೆಯ ಪೂರ್ವ ಕಮಾಂಡ್ ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ ಸೇರಿದಂತೆ 1,346 ಕಿ.ಮೀ. ಉದ್ದದ ನೈಜ ನಿಯಂತ್ರಣ ರೇಖೆಯನ್ನು ನಿರ್ವಹಿಸುತ್ತದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಕೇವಲ 900 ರೂ. ಆಸೆಗೆ ತಂದೆಯನ್ನೇ ಕೊಲೆ ಮಾಡಿದ ಪುತ್ರ
ತ್ರಿಪುರಾ ಬಿಜೆಪಿಗೆ ಇಬ್ಬರು ಶಾಸಕರು ರಾಜೀನಾಮೆ
ತಿಂಡಿ ತಿನ್ನಲು ಬಂದ ವಿದ್ಯಾರ್ಥಿ ಹೋಟೆಲ್ ನಲ್ಲೇ ಹೃದಯಾಘಾತದಿಂದ ಸಾವು
ಹಿಜಾಬ್-ಕೇಸರಿ ಪೈಟ್ ನಡುವೆ ಎಂಟ್ರಿಯಾದ ನೀಲಿ: ನೀಲಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳು
ಕಲಾವಿದೆಯರನ್ನು ವೇಶ್ಯಾವಾಟಿಕೆಗೆ ಪ್ರಚೋದಿಸಿದ ಆರ್ಕೇಸ್ಟ್ರಾ ಮಾಲಕ: ದೂರು ದಾಖಲು