ಹಿಮಸ್ಫೋಟ: 12 ಮಂದಿ ಬಲಿ | 170ಕ್ಕೂ ಅಧಿಕ ಜನ ನಾಪತ್ತೆ | ಮೃತದೇಹ ಸಿಗುತ್ತಲೇ ಇದೆ - Mahanayaka
6:24 PM Wednesday 5 - February 2025

ಹಿಮಸ್ಫೋಟ: 12 ಮಂದಿ ಬಲಿ | 170ಕ್ಕೂ ಅಧಿಕ ಜನ ನಾಪತ್ತೆ | ಮೃತದೇಹ ಸಿಗುತ್ತಲೇ ಇದೆ

08/02/2021

ಡೆಹ್ರಾದೂನ್: ಉತ್ತರಾಖಂಡ್ ಚಮೋಲಿಯಲ್ಲಿ ನಡೆದ ಹಿಮಾಸ್ಫೋಟದ ಪರಿಣಾಮ 12 ಮಂದಿ ಬಲಿಯಾಗಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದ ಇಬ್ಬರು ಸಿಬ್ಬಂದಿ ನಾಪತ್ತೆಯಾಗಿದ್ದು,  170ಕ್ಕೂ ಅಧಿಕ ಮಂದಿ ಸುಳಿವು ಕೂಡ ಸಿಗದಂತಾಗಿದೆ.

ಹಿಮಸ್ಫೋಟದ ಹಿನ್ನೆಲೆಯಲ್ಲಿ ಉತ್ತರಪ್ರದೇಶದಲ್ಲಿ ಕೂಡ ಪ್ರವಾಹ ಭೀತಿ ಎದುರಾಗಿದ್ದು, ಹೈ ಅಲರ್ಟ್ ಘೋಷಣೆಯಾಗಿದೆ.  ಶ್ರೀನಗರ, ಹರಿದ್ವಾರ, ಋಷಿಕೇಶದಲ್ಲಿ ನದಿ ಮಟ್ಟ ಹೆಚ್ಚಳವಾಗಿದೆ.

ಎನ್ ಡಿ ಆರ್ ಎಫ್ ಈವರೆಗೆ 16 ಕಾರ್ಮಿಕರನ್ನು ರಕ್ಷಣೆ ಮಾಡಿದೆ. ಎರಡನೇ ದುರಂಗದಲ್ಲಿ 60ಮಂದಿ ಸಿಲುಕಿದ್ದಾರೆ. ಎನ್ ಟಿಪಿಸಿ ಸ್ಥಾವರದಲ್ಲಿ 148 ಮತ್ತು ಋಷಿಗಂಗಾದಲ್ಲಿ ಕೆಲಸ ಮಾಡುತ್ತಿದ್ದ 22 ಮಂದಿ ಉದ್ಯೋಗಿಗಳು ಸೇರಿ ಒಟ್ಟು 170 ಜನರು ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ