3 ಕರು 3 ದನಗಳನ್ನು ಪಿಕಪ್ ನಲ್ಲಿ ಹಿಂಸಾತ್ಮಕವಾಗಿ ಸಾಗಾಟ: ಇಬ್ಬರ ಬಂಧನ, ಓರ್ವ ಪರಾರಿ
ಬೆಳ್ತಂಗಡಿ: ಪುದುವೆಟ್ಟುವಿನಲ್ಲಿ ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಧರ್ಮಸ್ಥಳ ಪೊಲೀಸರು ಪತ್ತೆ ಹಚ್ಚಿದ್ದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂದಿ ಆರೋಪಿಗಳು ನೆರಿಯ ಗ್ರಾಮದ ನಿವಾಸಿಗಳಾದ ಅಬ್ದುಲ್ ಅಜೀಜ್ (55) ಮಹಮ್ಮದ್ ರಫೀಕ್ (39) ಎಂಬವರಾಗಿದ್ದಾರೆ. ಇನ್ನೋರ್ವ ಆರೋಪಿ ಅನ್ವರ್ ತಪ್ಪಿಸಿಕೊಂಡಿದ್ದಾನೆ.
ಆರೋಪಿಗಳು ಪಿಕಪ್ ವಾಹನದಲ್ಲಿ ಮೂರು ಕರುಗಳು ಹಾಗೂ ಮೂರು ದನಗಳು ಸೇರಿದಂತೆ ಆರು ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ತುಂಬಿ ಸಾಗಾಟ ಮಾಡುತ್ತಿದ್ದರು ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಪುದುವೆಟ್ಟು ಗ್ರಾಮದ ಬಾಯಿತ್ತಾರ್ ಎಂಬಲ್ಲಿ ವಾಹನ ನಿಲ್ಲಿಸಿ ಪರಿಶೀಲಿಸದಾಗ ಅಕ್ರಮ ಜಾನುವಾರು ಸಾಗಾಟ ಕಂಡು ಬಂದಿದೆ.
ಆರೀಪಿಗಳು ಯಾವುದೇ ಪರವಾನಿಗೆಯಿಲ್ಲದೆ ಕಾಯರ್ತಡ್ಕ ನಿವಾಸಿ ಧರ್ಣಪ್ಪ ಗೌಡ ಎಂಬವರಿಂದ ಜಾನುವಾರಗಳನ್ನು ಖರೀದಿಸಿ ಕೊಂದು ಮಾಂಸ ಮಾಡಲೆಂದು ಸಾಗಾಟ ಮಾಡುತ್ತಿದ್ದರು ಎಂಬುದು ಸ್ಪಷ್ಟ ಗೊಂಡ ಹಿನ್ನಲೆಯಲ್ಲಿ ಪೊಲೀಸರು ವಾಹನವನ್ನು ಹಾಗೂ ಜಾನುವಾರುಗಳನ್ನುವವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಿದ್ದಾರೆ.ವಶಕ್ಕೆ ಪಡೆದಿರುವ ಜಾನುವಾರುಗಳ ಒಟ್ಟು ಮೌಲ್ಯ 40,000 ಎಂದು ಅಂದಾಜಿಸಲಾಗಿದೆ. ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka