ಹಿಂಡೆನ್ ಬರ್ಗ್ ಎಫೆಕ್ಟ್: ಗೌತಮ್ ಅದಾನಿ ಸಂಪತ್ತು ಭಾರೀ ಪ್ರಮಾಣದಲ್ಲಿ ಇಳಿಕೆ
ನವದೆಹಲಿ: ಅದಾನಿ ಸಮೂಹ ಸಂಸ್ಥೆಗಳ ಷೇರು ಬೆಲೆಗಳು ಸೋಮವಾರ ಮತ್ತೆ ಕುಸಿದಿದ್ದು, ಕಳೆದ ವರ್ಷ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯಾಗಿದ್ದ ಅವರ ಸಂಪತ್ತು ಗರಿಷ್ಠ ಮಟ್ಟದಿಂದ ಈಗ ಸುಮಾರು 100 ಬಿಲಿಯನ್ ಡಾಲರ್ ನಷ್ಟು ಕುಸಿತಗೊಂಡಿದೆ.
ಗೌತಮ್ ಅದಾನಿ ಅವರ ನಿವ್ವಳ ಸಂಪತ್ತು ಈಗ 50 ಬಿಲಿಯನ್ ಅಮೆರಿಕನ್ ಡಾಲರ್ ಗಿಂತ ಕಡಿಮೆಯಾಗಿದೆ. ಸೋಮವಾರ ಅದಾನಿಯವರ ಒಟ್ಟು ಸಂಪತ್ತು 47. 8 ಬಿಲಿಯನ್ ಡಾಲರ್ ಆಗಿದೆ ಎನ್ನಲಾಗಿದೆ. ಫೋರ್ಬ್ಸ್ ರಿಯಲ್-ಟೈಮ್ ಬಿಲಿಯನೇರ್ಗಳ ಪಟ್ಟಿಯಲ್ಲಿ ಗೌತಮ್ ಅದಾನಿ 25 ನೇ ಸ್ಥಾನದಲ್ಲಿದ್ದಾರೆ.
2023ರ ಕ್ಯಾಲೆಂಡರ್ ವರ್ಷದಲ್ಲಿ ಅಮೆರಿಕ ಮೂಲದ ಹಿಂಡೆನ್ ಬರ್ಗ್ ಜನವರಿ 24 ರಂದು ಷೇರು ಬೆಲೆ ತಿರುಚುವಿಕೆ ಮತ್ತಿತರ ವಿಷಯಗಳಲ್ಲಿ ಕಾರ್ಪೊರೇಟ್ ಆಡಳಿತದಲ್ಲಿನ ಲೋಪದೋಷಗಳನ್ನು ಆರೋಪಿಸಿದ ನಂತರ ಅವರು ಇಲ್ಲಿಯವರೆಗೆ 71. 5 ಬಿಲಿಯನ್ ಡಾಲರ್ ಕಳೆದುಕೊಂಡಿದ್ದಾರೆ.
ಅದಾನಿ ಭಾರತ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಸ್ಥಾನವನ್ನೂ ಕಳೆದುಕೊಂಡಿದ್ದಾರೆ. ಅವರು ಈಗ ರಿಲಯನ್ಸ್ ಕಂಪನಿಯ ಮುಖ್ಯಸ್ಥ ಮುಖೇಶ್ ಅಂಬಾನಿ ಅವರಿಗಿಂತ ಹಿಂದೆ ಇದ್ದಾರೆ. ಮುಖೇಶ್ ಅಂಬಾನಿ ಒಟ್ಟು ಸಂಪತ್ತು 85 ಬಿಲಿಯನ್ ಡಾಲರ್ ನಷ್ಟಿದೆ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw