ಬಲವಂತವಾಗಿ ಹಿಂದಿ ಹೇರಿಕೆ ಮಾಡಿದರೆ ರಕ್ತಪಾತವಾಗುತ್ತದೆ | ಸಿದ್ದರಾಮಯ್ಯ ಎಚ್ಚರಿಕೆ - Mahanayaka

ಬಲವಂತವಾಗಿ ಹಿಂದಿ ಹೇರಿಕೆ ಮಾಡಿದರೆ ರಕ್ತಪಾತವಾಗುತ್ತದೆ | ಸಿದ್ದರಾಮಯ್ಯ ಎಚ್ಚರಿಕೆ

13/02/2021

ಮಂಡ್ಯ: ಭಾರತದಲ್ಲಿ  ಕನ್ನಡವನ್ನು ಪಕ್ಕಕ್ಕೆ ಸರಿಸಿ ಬಲವಂತವಾಗಿ ಹಿಂದಿ ಹೇರಿಕೆ ಮಾಡಿದರೆ, ರಕ್ತಪಾತವಾಗುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದು, ಕನ್ನಡಕ್ಕೆ ಪ್ರಥಮ ಸ್ಥಾನ ಕೊಡಬೇಕು ಎಂದು ಅವರು ಹೇಳಿದ್ದಾರೆ.

ಪ್ರಶಸ್ತಿ ಪ್ರಧಾನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಹಿಂದಿ ಎಂದಿಗೂ ರಾಷ್ಟ್ರ ಭಾಷೆಯಾಗಲು ಸಾಧ್ಯವಿಲ್ಲ,  ಉತ್ತರದ 5 ರಾಜ್ಯಗಳಲ್ಲಿ ಮಾತ್ರವೇ ಹಿಂದಿ ಭಾಷೆ ಇದೆ. ದೇಶದ ಬೇರೆ ಯಾವ ರಾಜ್ಯದಲ್ಲಿಯೂ ಇಲ್ಲ. ಹೀಗಿರುವಾಗ ಹಿಂದಿ ರಾಷ್ಟ್ರ ಭಾಷೆ ಆಗಲು ಹೇಗೆ ಸಾಧ್ಯವಾಗುತ್ತದೆ ಎಂದು ಅವರು ಪ್ರಶ್ನಿಸಿದರು.

ದೇಶದಲ್ಲಿ ಹಿಂದೆ ಭಾಷೆಯನ್ನು ಬಲವಂತವಾಗಿ ಹೇರಲು ಮುಂದಾದರೆ ರಕ್ತಪಾತವಾಗುತ್ತದೆ.  ಇಲ್ಲಿ ಎಲ್ಲ ಭಾಷೆ ಸಂಸ್ಕೃತಿ, ಜನಾಂಗ, ಆಚಾರವನ್ನು ಹೊಂದಿದವರು ಇದ್ದಾರೆ. ಹಿಂದಿ ಹೇರಿಕೆಯ ಕನಸ್ಸನ್ನು ಕೇಂದ್ರ ಸರ್ಕಾರ ಬಿಡಲಿ ಎಂದು ಅವರು ಹೇಳಿದರು.


Provided by

ಇತ್ತೀಚಿನ ಸುದ್ದಿ