ಹಿಂದಿನ ನಿಯಮಗಳೇ ಮುಂದುವರಿಕೆ: ಪಾಸಿವಿಟಿ ಕಡಿಮೆ ಇರುವ ಜಿಲ್ಲೆಗಳಲ್ಲಿ ಶಾಲೆ ತೆರೆಯಲು ನಿರ್ಧಾರ | ಸಿಎಂ ಬೊಮ್ಮಾಯಿ
ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಇಂದು ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆದಿದ್ದು, ಮುಂದಿನ ಎರಡು ವಾರಗಳವರೆಗೆ ಈಗಿರುವ ನಿಯಮಗಳೇ ಮುಂದುವರೆಸಲು ನಿರ್ಧರಿಸಲಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.
ತಜ್ಞರ ಸಮಿತಿಯೊಂದಿಗೆ ಚರ್ಚೆ ನಡೆಸಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಕೊವಿಡ್ 2ನೇ ಅಲೆ ಇನ್ನೂ ಪೂರ್ಣವಾಗಿಲ್ಲ. ಕೊವಿಡ್ ಅಲೆ ಕಡಿಮೆ ಇದ್ದರೂ 1800ವರೆಗೂ ಪ್ರಕರಣಗಳು ದಾಖಲಾಗುತ್ತಿವೆ. ಈ ನಡುವೆ ಮುಂಜಾಗೃತೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಎಂದು ಅವರ ಹೇಳಿದರು.
ಪಾಸಿಟಿವಿಟಿ ಶೇ.2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಶಾಲೆಗಳನ್ನು ತೆರೆಯಲಾಗುವುದು. ಪೋಷಕರು, ಶಿಕ್ಷಕರು, ಸಿಬ್ಬಂದಿಗೆ ಲಸಿಕೆ ಹಾಕಬೇಕು, ಶಾಲೆ ಆರಂಭವಾದ ನಂತರ ಶೇಕಡ 2 ರಷ್ಟು ಪಾಸಿಟಿವಿಟಿ ದರ ಜಾಸ್ತಿ ಆದರೆ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ದಕ್ಷಿಣ ಕನ್ನಡ, ಕಲಬುರ್ಗಿ, ಮೈಸೂರು, ಚಾಮರಾಜನಗರ, ಕೊಡಗು, ಬೆಳಗಾವಿ, ವಿಜಯಪುರ, ಬೀದರ್ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಮುಂದುವರೆಯಲಿದೆ.
ಇನ್ನಷ್ಟು ಸುದ್ದಿಗಳು…
ಮನೆಯೊಳಗೆ ಒಂಟಿ ಮಹಿಳೆಯನ್ನು ಕೂಡಿ ಹಾಕಿ ಅತ್ಯಾಚಾರ ನಡೆಸಿ, ಕೊಲೆ ಬೆದರಿಕೆ!
ಮಕ್ಕಳಾಗುತ್ತಿಲ್ಲ, ಪರಿಹಾರ ತಿಳಿಸಿ ಎಂದು ಬಂದ ಮಹಿಳೆಯನ್ನು ಮಂಚಕ್ಕೆ ಕರೆದ ಮಾಟಗಾರ!
ಬಿಗ್ ಬಾಸ್ ಸೀಸನ್ 8 ಮುಗಿದ ಬೆನ್ನಲ್ಲೇ ಮತ್ತೆ 7 ದಿನಗಳವರೆಗೆ ನಡೆಯಲಿದೆ ಬಿಗ್ ಬಾಸ್ ಕಾರ್ಯಕ್ರಮ!
ಜಿಯೋ ಫೋನ್ ಸ್ಫೋಟ: ಪ್ಯಾಂಟ್ ನ ಜೇಬಿನಲ್ಲಿದ್ದಾಗಲೇ ಏಕಾಏಕಿ ಸಿಡಿದ ಮೊಬೈಲ್