ಹಿಂದೂ ಬೇರೆ ಹಿಂದುತ್ವ ಬೇರೆ, ಭಯೋತ್ಪಾದನೆ ಯಾರು ಮಾಡಿದರು ತಪ್ಪು: ಉಡುಪಿಯಲ್ಲಿ ಸಿದ್ದರಾಮಯ್ಯ ಹೇಳಿಕೆ
ಉಡುಪಿ: ಕರಾವಳಿ ಹಿಂದುತ್ವದ ಲ್ಯಾಬೋರೇಟರಿ. ಸುಳ್ಳು ಹೇಳುವುದೇ ಬಿಜೆಪಿಯವರ ಕಸುಬು. ಸಾವರ್ಕರ್ ಹಿಟ್ಲರ್ ತತ್ವದಿಂದ ಪ್ರಭಾವಿತರಾದವರು. ಹಿಂದುತ್ವ ಶಬ್ದ ಹುಟ್ಟು ಹಾಕಿದವರೇ ಸಾವರ್ಕರ್. ಹಿಂದೂ ಬೇರೆ ಹಿಂದುತ್ವ ಬೇರೆ. ಭಯೋತ್ಪಾದನೆ ಯಾರು ಮಾಡಿದರು ತಪ್ಪು. ಭಯೋತ್ಪಾದನೆಯನ್ನು ನಾವು ಖಂಡಿಸುತ್ತೇವೆ. ಭಯೋತ್ಪಾಧಕರಿಗೆ ಕಠಿಣವಾದ ಶಿಕ್ಷೆಯಾಗಬೇಕು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಹಿಂದುತ್ವದ ಹೆಸರಲ್ಲಿ ಸುಳ್ಳು ಹೇಳುವವರು ಮನುವಾದ ಮಾಡುವವರನ್ನು ಕಂಡರೆ ಕೋಪ. ನಾವು ಮನುಷ್ಯರನ್ನು ಪ್ರೀತಿಸುವ ಜನ. ಹಿಂದೂ ಕ್ರೈಸ್ತ ಮುಸ್ಲಿಂ ಯಾವ ಧರ್ಮದ ಮನುಷ್ಯರಿದ್ದರೂ ಪ್ರೀತಿಸುತ್ತೇವೆ ಎಂದರು. ಬಿಜೆಪಿಗೆ ಅಭಿವೃದ್ಧಿ ಕೆಲಸದಲ್ಲಿ ನಂಬಿಕೆ ಇಲ್ಲ. ಅಭಿವೃದ್ಧಿ ಮಾತನಾಡಬೇಡಿ, ಲವ್ ಜಿಹಾದ್ ಬಗ್ಗೆ ಮಾತನಾಡಿ ಎಂದು ಕಟೀಲ್ ಹೇಳಿದ್ದರು. ಅಭಿವೃದ್ಧಿ ಬಡವರ ಕಾರ್ಯಕ್ರಮದ ಬಗ್ಗೆ ಅವರಿಗೆ ಆಸಕ್ತಿ ಇಲ್ಲ. ಬಿಜೆಪಿಯಿಂದ ಕರಾವಳಿ, ಕರ್ನಾಟಕ ದೇಶ ಅಭಿವೃದ್ಧಿ ಸಾಧ್ಯವಿಲ್ಲ. ಬಿಜೆಪಿಯ ಮನಸ್ಸು ಮತ್ತು ಮನಸ್ಥಿತಿ ಜನಕ್ಕೆ ಅರ್ಥ ಆಗಿದೆ ಎಂದು ಅವರು ದೂರಿದರು.
ಮೋದಿ ದೇಶದ ಪ್ರಧಾನಿಯಾಗಿ ರಾಜ್ಯಕ್ಕೆ ಬರಬಹುದು. ಆದರೆ ಬಿಜೆಪಿ ಯನ್ನು ಅಧಿಕಾರಕ್ಕೆ ತರುತ್ತೇನೆ ಎಂದು ಬಂದರೆ ಅಸಾಧ್ಯ. ಕರ್ನಾಟಕಕ್ಕೆ 100 ಬಾರಿ ಬಂದರು ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ರಾಜ್ಯದ ರಾಜ್ಯದ ಜನಕ್ಕೆ ಬಿಜೆಪಿ ಮೇಲೆ ಭ್ರಮನಿರಸನವಾಗಿದೆ ಎಂದು ಅವರು ತಿಳಿಸಿದರು.
ಕೋಲಾರದಲ್ಲಿ ನಾನು ಮನೆ ಹುಡುಕುತ್ತಿಲ್ಲ. ನಮ್ಮ ಪಕ್ಷದವರು ಹುಡುಕುತ್ತಿದ್ದಾರೆ. ಮನೆ ಹುಡುಕುವ ಬಗ್ಗೆ ನನಗೆ ಗೊತ್ತೇ ಇಲ್ಲ. ನಮ್ಮ ಪಕ್ಷದವರು ಹುಡುಕುತ್ತಿದ್ದಾರೆ. ನಾನು ಕೋಲಾರದಿಂದಲೇ ಸ್ಪರ್ಧೆ ಎಂದು ತೀರ್ಮಾನ ಮಾಡಿದ್ದೇನೆ. ಅಂತಿಮವಾಗಿ ಹೈಕಮಾಂಡ್ ಏನು ಹೇಳುತ್ತಾರೆ ಅದರಂತೆ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದರು.
ಎಸ್ ಪಾರ್ಟಿ ಡೀ ಪಾರ್ಟಿ ಎಂಬುದು ಸುಮ್ಮನೆ ಹುಟ್ಟು ಹಾಕಿದ ಸುಳ್ಳು. ಯತ್ನಾಳ್ ಮೇಲೆ ಬಿಜೆಪಿ ಯಾಕೆ ಕ್ರಮ ಕೈಗೊಂಡಿಲ್ಲ? ಬಿಜೆಪಿಯಲ್ಲಿ ಗುಂಪುಗಾರಿಕೆ ಇದೆಯೋ ಇಲ್ಲವೋ? ನಡ್ಡಾ ಕಾರ್ಯಕ್ರಮಕ್ಕೆ ಹೋಗಿಲ್ಲ ಯಾಕೆ? ಅಶೋಕ ಹೇಳಿಬಿಟ್ಟ ಕೂಡಲೆ ಗುಂಪುಗಾರಿಕೆ ಆಗಲು ಸಾಧ್ಯವೇ? ಎಂದು ಅವರು ಪ್ರಶ್ನಿಸಿದರು.
ರಾಜ್ಯದಲ್ಲಿ ಮಿನಿಮಂ 130 ಮ್ಯಾಕ್ಸಿಮಮ್ 150 ಸೀಟ್ ಗೆಲ್ಲುತ್ತೇವೆ . ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ತಕ್ಕಿಂತ ಹೆಚ್ಚು ಸೀಟು ಗೆಲ್ಲುತ್ತೇವೆ ಎಂದಅ ವರು ನಮಗೆ ಕುರ್ಚಿ ಮೇಲೆ ಆಸೆ ಎಂದು ಬಿಜೆಪಿಯವರು ಹೇಳುತ್ತಾರೆ. ಹಾಗಾದರೆ ಇವರಿಗೆ ಮತ್ತೆ ಯಾವುದರ ಮೇಲೆ ಆಸೆ. ಬಿಟ್ಟುಬಿಡಿ ಕುರ್ಚಿ ಆಸೆಯನ್ನು. ಈಗ ನಮಗೆ ಕುರ್ಚಿ ಮೇಲೆ ಆಸೆ ಅಂತ ಹೇಳುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw