‘ಹಿಂದೂ ಹುಲಿಯ ಸಿಡಿ ಬಿಡುಗಡೆ’ ಪೋಸ್ಟ್ ಬಗ್ಗೆ ಮೌನ ಮುರಿದ ಯತ್ನಾಳ್ - Mahanayaka
6:11 AM Thursday 12 - December 2024

‘ಹಿಂದೂ ಹುಲಿಯ ಸಿಡಿ ಬಿಡುಗಡೆ’ ಪೋಸ್ಟ್ ಬಗ್ಗೆ ಮೌನ ಮುರಿದ ಯತ್ನಾಳ್

basangouda patil yatnal
15/10/2021

ವಿಜಯಪುರ:  ಬಿಜೆಪಿಯ ಹಿಂದೂ ಹುಲಿಯ ಸಿಡಿ ಬಿಡುಗಡೆಗೆ ಕ್ಷಣಗಣನೆ, ಭರ್ಜರಿ ಯಶಸ್ವಿಯಾಗಲಿ ಎಂದು ಆಶಿಸುತ್ತೇವೆ ಎಂದು  ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅವರ ಹೋಲಿಕೆ ಇರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಈ ವೈರಲ್ ಫೋಟೋ ಬಗ್ಗೆ ಕೊನೆಗೂ ಅವರು ಪ್ರತಿಕ್ರಿಯಿಸಿದ್ದಾರೆ ಎಂದು ವರದಿಯಾಗಿದೆ.

ಫೋಟೋ ವೈರಲ್ ವಿಚಾರವಾಗಿ ಯಾರ್ಯಾರು ಇದ್ದಾರೆ ಎಂಬುದು ನನಗೆ ದಾಖಲೆ ಸಮೇತ ಮಾಹಿತಿ ಇದೆ. ಅವರಿಗೆ ತಕ್ಕ ಶಾಸ್ತಿ ಆಗುತ್ತೆ. ನಾನು ಭ್ರಷ್ಟಾಚಾರದ ವಿರುದ್ಧ, ಹಿಂದೂತ್ವದ ಪರ ಮಾತನಾಡುತ್ತೇನೆ. ಹಾಗಾಗಿ ನನ್ನ ಮಾತುಗಳು ಅವರಿಗೆ ಸಮಸ್ಯೆಯಾಗಿದೆ ಎಂದು ಯತ್ನಾಳ್ ಹೇಳಿರುವ ಬಗ್ಗೆ ವರದಿಯಾಗಿದೆ.

ಬಿಜೆಪಿ ಹಾಗೂ ಕಾಂಗ್ರೆಸ್ ನಲ್ಲಿ  ಸಿಡಿ ಮಾಡುವ ಫ್ಯಾಕ್ಟರಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಫೋಟೋ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ. ಕಳ್ಳರು ಯಾರೆಂಬುದು ಸ್ವಲ್ಪ ದಿನದಲ್ಲೇ ಬಹಿರಂಗವಾಗುತ್ತೆ ಎಂದು ಅವರು ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb

ಇನ್ನಷ್ಟು ಸುದ್ದಿಗಳು…

ಸಿಬಿಐ ದಾಳಿ ರಾಜಕೀಯ ಪ್ರೇರಿತ ಎಂದವರಿಗೆ ಅವರದ್ದೇ ಪಕ್ಷದವರು ಸಾಕ್ಷ್ಯ ನೀಡಿದ್ದಾರೆ | ನಳಿನ್ ಕುಮಾರ್ ಕಟೀಲ್

ಟಿಪ್ಪು ಸುಲ್ತಾನ್ ಇಲ್ಲದ ಮೈಸೂರು ದಸರಾ: ಬಿಜೆಪಿ ಸರಕಾರದ ಕೋಮುವಾದಿ ನಡೆ ಇತಿಹಾಸಕ್ಕೆ ಬಗೆದ ದ್ರೋಹ | ಪಾಪ್ಯುಲರ್ ಫ್ರಂಟ್

ಬಜರಂಗದಳದಿಂದ ತ್ರಿಶೂಲ ದೀಕ್ಷೆ: ಪರಿಶೀಲನೆ ನಡೆಸಲು ಪೊಲೀಸ್ ಆಯುಕ್ತರಿಂದ ಸೂಚನೆ

ನೈತಿಕ ಪೋಲಿಸ್ ಗಿರಿ: ಸಿಎಂ ಹೇಳಿಕೆ ದುಷ್ಕ್ರತ್ಯಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡುವಂತಿದೆ | ಸಿಪಿಐಎಂ ಆಕ್ರೋಶ

ಕೋಟಿಗೊಬ್ಬ-3 ಬಿಡುಗಡೆಗೆ ಯಾರಿಂದ ತೊಂದರೆ ಆಯ್ತು ಅಂತ ಗೊತ್ತಿದೆ | ವಿಡಿಯೋ ಶೇರ್ ಮಾಡಿದ ಕಿಚ್ಚ ಸುದೀಪ್

ಡಿಕೆಶಿ ಕುಡುಕರಂತೆ ತೊದಲುತ್ತಾರೆ, ಕಲೆಕ್ಷನ್ ಗಿರಾಕಿ | ಮೈಕ್ ಆನ್ ಆಗಿರೋದು ತಿಳಿಯದೇ ಮಾತನಾಡಿ ಕಾಂಗ್ರೆಸ್ ನಾಯಕರ ಯಡವಟ್ಟು!

ಇತ್ತೀಚಿನ ಸುದ್ದಿ