ವಿರೋಧ: ಮೋಹನ್ ಭಾಗವತ್ ಹೇಳಿಕೆಗೆ ಹಿಂದೂ‌ ಮುಖಂಡರಿಂದ ತೀವ್ರ ವಿರೋಧ - Mahanayaka
10:42 PM Wednesday 12 - March 2025

ವಿರೋಧ: ಮೋಹನ್ ಭಾಗವತ್ ಹೇಳಿಕೆಗೆ ಹಿಂದೂ‌ ಮುಖಂಡರಿಂದ ತೀವ್ರ ವಿರೋಧ

24/12/2024

ಅಯೋಧ್ಯೆಯಂತಹ ವಿವಾದವನ್ನು ಇನ್ನಿತರ ಮಸೀದಿಗಳ ಬಗ್ಗೆ ಹುಟ್ಟು ಹಾಕಬಾರದು ಎಂಬ ಆರ್ ಎಸ್ ಎಸ್ ಮುಖಂಡ ಮೋಹನ್ ಭಾಗವತ್ ಅವರ ಹೇಳಿಕೆಗೆ ಹಿಂದೂ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಖಿಲ ಭಾರತೀಯ ಸಾಂತ್ ಸಮಿತಿ ಎಂಬ ಸನ್ಯಾಸಿಗಳ ಸಂಘಟನೆ ಭಾಗವತ್ ಅವರ ಹೇಳಿಕೆಯ ವಿರುದ್ಧ ರಂಗಕ್ಕಿಳಿದಿದೆ. ಧರ್ಮಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಭಾಗವತ್ ಅವರು ತೀರ್ಮಾನ ಮಾಡಬೇಕಾಗಿಲ್ಲ ಮತ್ತು ಅದಕ್ಕೆ ಧಾರ್ಮಿಕ ಮುಖಂಡರಿದ್ದಾರೆ ಎಂದು ಸಂಘಟನೆ ಹೇಳಿದೆ.

ಧಾರ್ಮಿಕ ವಿಷಯಗಳಿಗೆ ಸಂಬಂಧಿಸಿ ವಿವಾದ ತಲೆದೋರಿದಾಗ ಆ ಬಗ್ಗೆ ಮಾತಾಡಬೇಕಾದದ್ದು ಧಾರ್ಮಿಕ ಮುಖಂಡರಾಗಿದ್ದಾರೆ. ಅವರು ಏನು ಹೇಳುತ್ತಾರೋ ಅದನ್ನು ಸಂಘ ಪರಿವಾರ ಅಂಗೀಕರಿಸಬೇಕು ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸ್ವಾಮಿ ಜಿತೇಂದ್ರಾನಂದ ಸರಸ್ವತಿ ಹೇಳಿದ್ದಾರೆ. ಐವತ್ತಾರು ಹೊಸ ಸ್ಥಳಗಳಲ್ಲಿ ಮಂದಿರದ ಕುರುಹುಗಳನ್ನು ಪತ್ತೆಹಚ್ಚಲಾಗಿದೆ.

ರಾಜಕೀಯ ಉದ್ದೇಶಗಳ ಆಚೆಗೆ ಜನರ ಭಾವನೆಯನ್ನು ಅರ್ಥ ಮಾಡಿಕೊಂಡು ಕೆಲಸ ಮಾಡಬೇಕಾಗಿದೆ ಎಂದವರು ಹೇಳಿದ್ದಾರೆ. ಇದಕ್ಕಿಂತ ಮೊದಲು ಜಗದ್ಗುರು ರಾಮಭದ್ರಾಚಾರ್ಯ ಕೂಡ ಧರ್ಮದ ವಿಷಯದಲ್ಲಿ ಸಂಘ ಪರಿವಾರ ಅಭಿಪ್ರಾಯ ಹೇಳಬೇಕಾಗಿಲ್ಲ ಎಂದು ಹೇಳಿದ್ದರು.


Provided by

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ