ಮುಸ್ಲಿಂ ಮ್ಯಾನೇಜ್ ಮೆಂಟ್ ನ ಕಾಲೇಜುಗಳಲ್ಲಿ ಹಿಂದೂ ವಿದ್ಯಾರ್ಥಿಗಳೇ ಹೆಚ್ಚು: ಸರ್ವೇಯಲ್ಲಿ ಬಹಿರಂಗ - Mahanayaka
8:23 AM Thursday 19 - September 2024

ಮುಸ್ಲಿಂ ಮ್ಯಾನೇಜ್ ಮೆಂಟ್ ನ ಕಾಲೇಜುಗಳಲ್ಲಿ ಹಿಂದೂ ವಿದ್ಯಾರ್ಥಿಗಳೇ ಹೆಚ್ಚು: ಸರ್ವೇಯಲ್ಲಿ ಬಹಿರಂಗ

17/07/2024

ಮುಸ್ಲಿಂ ಮ್ಯಾನೇಜ್ ಮೆಂಟ್ ನ ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಪೈಕಿ ಮುಸ್ಲಿಂ ವಿದ್ಯಾರ್ಥಿಗಳಿಗಿಂತ ಹಿಂದೂ ವಿದ್ಯಾರ್ಥಿಗಳು ಹೆಚ್ಚಿದ್ದಾರೆ ಎಂದು ಸೆಂಟರ್ ಫಾರ್ ಸ್ಟಡಿ ಅಂಡ್ ರಿಸರ್ಚ್ ಸಂಸ್ಥೆಯ ಸರ್ವೆಯಿಂದ ಬಹಿರಂಗವಾಗಿದೆ. ಮುಸ್ಲಿಮರು ನಡೆಸುತ್ತಿರುವ ಕಾಲೇಜುಗಳಲ್ಲಿ ಹಿಂದೂ ವಿದ್ಯಾರ್ಥಿಗಳ ಸಂಖ್ಯೆ 55% ಇದ್ದರೆ ಮುಸ್ಲಿಂ ವಿದ್ಯಾರ್ಥಿಗಳ ಸಂಖ್ಯೆ ಕೇವಲ 42 ಶೇಕಡ ಮಾತ್ರವಿದೆ ಎಂದು ಕೂಡ ಈ ಸಮೀಕ್ಷೆಯಿಂದ ಗೊತ್ತಾಗಿದೆ. ದೇಶಾದ್ಯಂತ ವಿರುವ ಖಾಸಗಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ನಡೆಸಲಾದ ಸಮೀಕ್ಷೆಯಿಂದ ಈ ಮಾಹಿತಿ ಲಭ್ಯವಾಗಿದೆ.

ಯಾವುದೇ ಧಾರ್ಮಿಕ ಪಠ್ಯಗಳು ಇಲ್ಲದ ಮತ್ತು ಧಾರ್ಮಿಕ ತರಗತಿಗಳು ಇಲ್ಲದ ಮುಸ್ಲಿಂ ಮ್ಯಾನೇಜ್ಮೆಂಟ್ ಕಾಲೇಜುಗಳನ್ನು ಈ ಸಮೀಕ್ಷೆಗೆ ಆಯ್ಕೆ ಮಾಡಲಾಗಿತ್ತು. ದೇಶಾದ್ಯಂತ 1113 ಯೂನಿವರ್ಸಿಟಿಗಳು ಇದ್ದು ಇದರಲ್ಲಿ 23 ಯೂನಿವರ್ಸಿಟಿಗಳು ಮಾತ್ರ ಮುಸ್ಲಿಂ ಸಮುದಾಯಕ್ಕೆ ಸೇರಿವೆ. ಉತ್ತರ ಪ್ರದೇಶ ಮತ್ತು ಕರ್ನಾಟಕದಲ್ಲಿ ಅತ್ಯಧಿಕ ಮುಸ್ಲಿಂ ಮ್ಯಾನೇಜ್ಮೆಂಟ್ ಯುನಿವರ್ಸಿಟಿಗಳಿವೆ ಇವುಗಳ ಪೈಕಿ ಪೈಕಿ 70% ಕಾಲೇಜುಗಳು ಕೂಡ ನಗರದಲ್ಲಿವೆ.

ಹಾಗೆಯೇ ದೇಶದಲ್ಲಿ ಇರುವ 43796 ಕಾಲೇಜುಗಳ ಪೈಕಿ1155 ಕಾಲೇಜುಗಳು ಮುಸ್ಲಿಂ ಮ್ಯಾನೇಜ್ಮೆಂಟ್ನ ಕಾಲೇಜುಗಳಾಗಿವೆ. ಕೇರಳದಲ್ಲಿ ಅತ್ಯಧಿಕ ಮುಸ್ಲಿಂ ಮ್ಯಾನೇಜ್ಮೆಂಟ್ ಕಾಲೇಜುಗಳಿದ್ದು ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ನಂತರದ ಸ್ಥಾನದಲ್ಲಿದೆ.


Provided by

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ