ಹಿಂದೂಯೇತರರು ದೇವಸ್ಥಾನ ಪ್ರವೇಶಿಸಿದರೆ ಥಳಿಸುತ್ತೇವೆ | 150 ದೇವಸ್ಥಾನಗಳ ಎದುರು ಬ್ಯಾನರ್! - Mahanayaka
5:14 AM Wednesday 11 - December 2024

ಹಿಂದೂಯೇತರರು ದೇವಸ್ಥಾನ ಪ್ರವೇಶಿಸಿದರೆ ಥಳಿಸುತ್ತೇವೆ | 150 ದೇವಸ್ಥಾನಗಳ ಎದುರು ಬ್ಯಾನರ್!

hindu
22/03/2021

ಡೆಹರಾಡೂನ್: ಹಿಂದೂಯೇತರರು ದೇವಸ್ಥಾನದೊಳಗೆ ಪ್ರವೇಶಿಸುವಂತಿಲ್ಲ ಎಂದು ಸುಮಾರು 150ಕ್ಕೂ ಅಧಿಕ ದೇವಸ್ಥಾನಗಳ ಮುಂದೆ ಫಲಕಗಳನ್ನು ಹಾಕಲಾಗಿದ್ದು, ಬಿಜೆಪಿ ಪರ ಸಂಘಟನೆಯೊಂದು ಈ ಬ್ಯಾನರ್ ಹಾಕಿದೆ ಎಂದು ತಿಳಿದು ಬಂದಿದೆ.

ಈ ಬ್ಯಾನರ್ ನ್ನು ನಾವೇ ಹಾಕಿದ್ದೇವೆ ಎಂದು ಹಿಂದೂ ಯುವ ವಾಹಿನಿ ಎಂಬ ಬಿಜೆಪಿ ಹಾಗೂ ಆರೆಸ್ಸೆಸ್ ಪರವಾಗಿ ಕಾರ್ಯಾಚರಿಸುತ್ತಿರುವ ಸಂಘಟನೆ  ಒಪ್ಪಿಕೊಂಡಿದೆ. ಇದರ ಅಧ್ಯಕ್ಷ ಗೋವಿಂದ್ ವಾದವಾ,  ಅನ್ಯ ಕೋಮಿನವರು ದೇವಸ್ಥಾನಕ್ಕೆ ಪ್ರವೇಶಿಸಿದರೆ, ಅವರನ್ನು ಥಳಿಸಿ ಪೊಲೀಸರಿಗೆ ನೀಡುತ್ತೇವೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾನೆ.

ಈ ಬ್ಯಾನರ್ ನಿಂದಾಗಿ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗುತ್ತಿದೆ. ರಾಜಕೀಯ ಕಾರಣಕ್ಕಾಗಿ ಸಮಾಜದಲ್ಲಿರುವ ಸಾಮರಸ್ಯವನ್ನು ಕೆಡಿಸುವ ಪ್ರಯತ್ನ ಇದಾಗಿದೆ. ಹಿಂದೂಗಳು ಎಂದರೆ, ಇತರ ಧರ್ಮೀಯರನ್ನು ದ್ವೇಷಿಸುವವರು ಎನ್ನುವ ಮನೋಭಾವವನ್ನು ಸೃಷ್ಟಿಸಿ ರಾಜಕೀಯ ಲಾಭವನ್ನು ಪಡೆದುಕೊಳ್ಳಲು ಈ ಕೃತ್ಯವನ್ನು ಎಸಗಲಾಗಿದೆ ಎಂಬ ಆಕ್ರೋಶಗಳು ಬ್ಯಾನರ್ ವಿರುದ್ಧ ಕೇಳಿ ಬಂದಿದೆ.

ಬಿಜೆಪಿ ತನ್ನ ಅಧಿಕಾರವಧಿಯಲ್ಲಿ ದುರಾಡಳಿತ ನಡೆಸಿದ್ದು, ಈ ದುರಾಡಳಿತವನ್ನು ಮುಚ್ಚಿ ಹಾಕಲು ಹಿಂದೂಗಳನ್ನು ರೊಚ್ಚಿಗೆಬ್ಬಿಸುತ್ತಿದೆ. ಈ ಮೂಲಕ ಕೋಮು ಗಲಭೆ ನಡೆಸಿ ಜನರ ದಿಕ್ಕು ತಪ್ಪಿಸಲು ಯೋಚಿಸುತ್ತಿದೆ. ಬಿಜೆಪಿ ಸರ್ಕಾರದ ಆಡಳಿತದಲ್ಲಿ ಬ್ರಾಹ್ಮಣ್ಯವನ್ನು ಯಾರು ಅನುಸರಿಸುತ್ತಿದ್ದಾರೋ ಅವರನ್ನು ಮಾತ್ರವೇ ಮನುಷ್ಯರು ಎಂದು ಪರಿಗಣಿಸಲಾಗುತ್ತಿದೆ. ಬ್ರಾಹ್ಮಣ್ಯವನ್ನು ಅನುಸರಿಸುವವರಿಗೆ ಶೇ.10 ಮೀಸಲಾತಿಯನ್ನು ಕೂಡ ನೀಡಿದ್ದು, ಕಡು ಬಡತನದಲ್ಲಿರುವವರನ್ನು ಸರ್ಕಾರ ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಬಡ ಹಿಂದೂಗಳನ್ನು ಗಲಾಟೆ ದೊಂಬಿಗೆ ಉಪಯೋಗಿಸುತ್ತಿದೆ. ಯಾರೋ ಸುಖದ ಸುಪ್ಪತ್ತಿಗೆಯಲ್ಲಿ ಮೆರೆದಾಡಲು ಬಡ ಹಿಂದೂಗಳನ್ನು ಅನ್ಯ ಧರ್ಮೀಯರ ವಿರುದ್ಧ ಎತ್ತಿಕಟ್ಟಲಾಗುತ್ತಿದೆ ಎಂದು ವಿಪಕ್ಷಗಳು ತೀವ್ರವಾಗಿ ಟೀಕಿಸಿವೆ.

ಇತ್ತೀಚಿನ ಸುದ್ದಿ