ಹಿಂದೂ ಯುವತಿ, ಮುಸ್ಲಿಮ್ ಯುವಕನ ವಿವಾಹ ಫಿಕ್ಸ್: ಸ್ವಾಮೀಜಿಯಿಂದ ಸಂಧಾನಕ್ಕೆ ಯತ್ನ - Mahanayaka
3:11 AM Wednesday 11 - December 2024

ಹಿಂದೂ ಯುವತಿ, ಮುಸ್ಲಿಮ್ ಯುವಕನ ವಿವಾಹ ಫಿಕ್ಸ್: ಸ್ವಾಮೀಜಿಯಿಂದ ಸಂಧಾನಕ್ಕೆ ಯತ್ನ

swamiji
21/11/2021

ಮಂಗಳೂರು: ಹಿಂದೂ ಯುವತಿ ಹಾಗೂ ಮುಸ್ಲಿಮ್ ಯುವಕನ ಮದುವೆಯ ಆಹ್ವಾನ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಕರಾವಳಿಯ ಸ್ವಾಮೀಜಿಯೊಬ್ಬರು ಹಿಂದೂ ಯುವತಿಯ ಮನೆಗೆ ಭೇಟಿ ನೀಡಿ ಮನೆಯವರ ಜೊತೆ ಸಂಧಾನ ನಡೆಸಲು ಯತ್ನಿಸಿದ್ದಾರೆ.

ವಜ್ರದೇಹಿ ರಾಜಶೇಖರಾನಂದ ಸ್ವಾಮೀಜಿ ಅವರು, ಮುಸ್ಲಿಮ್ ಯುವಕನೊಂದಿಗಿನ ವಿವಾಹ ನಿರ್ಧಾರವನ್ನು ಬದಲಿಸುವಂತೆ ಯುವತಿ ಹಾಗೂ ಯುವತಿಯ ಪೋಷಕರೊಂದಿಗೆ  ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಮೆಡಿಕಲ್ ವಿದ್ಯಾರ್ಥಿಯಾಗಿರುವ ಕೇರಳದ ಕಣ್ಣೂರಿನ ಯುವಕನ ಜೊತೆಗೆ ಯುವತಿಯ ವಿವಾಹ ಫಿಕ್ಸ್ ಮಾಡಲಾಗಿದೆ. ನವೆಂಬರ್ 29ರಂದು ಇವರಿಬ್ಬರ ವಿವಾಹ ಕೇರಳದ ಕಣ್ಣೂರಿನಲ್ಲಿಯೇ ನಡೆಯಲಿದೆ. ಕಳೆದ ಮೂರು ವರ್ಷಗಳಿಂದ ಈ ಜೋಡಿ ಪ್ರೀತಿಸುತ್ತಿದ್ದು, ಇದೀಗ ಎರಡೂ ಕುಟುಂಬದವರು ವಿವಾಹಕ್ಕೆ ಒಪ್ಪಿಗೆ ಸೂಚಿಸಿದ್ದು, ಹೀಗಾಗಿ ಮದುವೆ ನಿಶ್ಚಯಗೊಳಿಸಲಾಗಿತ್ತು. ಈ ನಡುವೆ ಇವರ ವಿವಾಹದ ಆಹ್ವಾನ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹೀಗಾಗಿ ಇದು ಲವ್ ಜಿಹಾದ್ ಎಂದು ಕೆಲವು ಸಂಘಟನೆಗಳು ಆರೋಪಿಸಿದ್ದವು.

ವರದಿಯ ಪ್ರಕಾರ, ಯುವತಿಯ ಮನೆಗೆ ಭೇಟಿ ನೀಡಿದ ಸ್ವಾಮೀಜಿಗಳು ವಿವಾಹವನ್ನು ಮುಂದೂಡಿ, ಸ್ವಲ್ಪ ಆಲೋಚಿಸಿ ಎಂಬಂತೆ ಯುವತಿಯ ಪೋಷಕರಿಗೆ ಸಲಹೆ ನೀಡಿದ್ದಾರೆ ಎಂದು ಹೇಳಲಾಗಿದೆ. ಆದರೆ, ಮುಸ್ಲಿಮ್ ಯುವಕನನ್ನು ವಿವಾಹವಾದರೂ ಯುವತಿ ಹಿಂದೂ ಧರ್ಮದಲ್ಲೇ ಮುಂದುವರಿಯಲಿದ್ದಾಳೆ ಎಂದು ಸ್ವಾಮೀಜಿಗೆ ತಿಳಿಸಿ ಪೋಷಕರು, ಸ್ವಾಮೀಜಿಯನ್ನು ಗೌರವಿಸಿ ಕಳುಹಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕಿತ್ತಲೆ ಮಾರುವಾಗ ಇಂಗ್ಲಿಷ್ ನಲ್ಲಿ ಪ್ರಶ್ನೆ ಕೇಳಿದಾಗ ಶಾಲೆ ನಿರ್ಮಿಸಬೇಕು ಅನ್ನಿಸಿತು: ಹರೇಹಳ ಹಾಜಬ್ಬ

ಆಂಧ್ರಪ್ರದೇಶ:  ಪ್ರವಾಹದ ಪರಿಣಾಮ 25 ಮಂದಿ ಸಾವು, 17ಕ್ಕೂ ಅಧಿಕ ಮಂದಿ ನಾಪತ್ತೆ 20 ಸಾವಿರಕ್ಕೂ ಅಧಿಕ ಮಂದಿಯ ಸ್ಥಳಾಂತರ

ಒಂದೋ ಜೈಲಿಗಟ್ಟಿ ಇಲ್ಲವೇ, ಹುಚ್ಚಾಸ್ಪತ್ರೆಗೆ ಸೇರಿಸಿ: ಕಂಗನಾ ವಿರುದ್ಧ ಸಿಡಿದೆದ್ದ ಸಿಖ್ಖರು

ಪ್ರವಾಹಕ್ಕೆ ನಲುಗಿದ ಆಂಧ್ರಪ್ರದೇಶ: 17 ಮಂದಿ ಸಾವು, 100ಕ್ಕೂ ಅಧಿಕ ಮಂದಿ ನಾಪತ್ತೆ

ಬಿಗ್ ನ್ಯೂಸ್: ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದ ಮೋದಿ ಸರ್ಕಾರ!

ವಾಯು ಮಾಲಿನ್ಯದಿಂದ ಕಂಗೆಟ್ಟ ದೆಹಲಿ: ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ರಾಜ್ಯಾದ್ಯಂತ ಭಾರೀ ಮಳೆ ಸಾಧ್ಯತೆ | 6 ಜಿಲ್ಲೆಗಳಲ್ಲಿ ರೆಡ್ ಅಲಾರ್ಟ್ ಘೋಷಣೆ: ಶಾಲೆಗಳಿಗೆ ರಜೆ ಘೋಷಣೆ

ಇತ್ತೀಚಿನ ಸುದ್ದಿ