ಕೊವಿಡ್ ನಿಂದ ಮೃತಪಟ್ಟ ಹಿಂದೂಗಳ ಅಂತ್ಯಸಂಸ್ಕಾರಕ್ಕೆ ಸಿದ್ಧ | ವಿಎಚ್ ಪಿ ಮುಖಂಡ ಶರಣ್ ಪಂಪ್ವೆಲ್ - Mahanayaka
10:43 PM Wednesday 12 - March 2025

ಕೊವಿಡ್ ನಿಂದ ಮೃತಪಟ್ಟ ಹಿಂದೂಗಳ ಅಂತ್ಯಸಂಸ್ಕಾರಕ್ಕೆ ಸಿದ್ಧ | ವಿಎಚ್ ಪಿ ಮುಖಂಡ ಶರಣ್ ಪಂಪ್ವೆಲ್

sharan pumpwell
09/05/2021

ದಕ್ಷಿಣಕನ್ನಡ/ಉಡುಪಿ: ಕೊವಿಡ್ ನಿಂದ ಮೃತಪಟ್ಟ ಹಿಂದೂಗಳ ಮೃತದೇಹವನ್ನು ಹಿಂದೂಗಳಿಗೆ ಮಾತ್ರವೇ ನೀಡಬೇಕು. ಮೃತದೇಹಗಳನ್ನು ಗೌರವಯುತವಾಗಿ ಅಂತ್ಯಸಂಸ್ಕಾರ ನಡೆಸಲು ಹಿಂದೂ ಸಂಘಟನೆಯ ಕಾರ್ಯಕರ್ತರು ಸಿದ್ಧರಿದ್ದಾರೆ ಎಂದು ಎಂದು  ವಿಎಚ್ ಪಿ ಮುಖಂಡ ಶರಣ್ ಪಂಪ್ ವೇಲ್ ಮನವಿ ಮಾಡಿದ್ದಾರೆ.

ಕೋವಿಡ್ ಕಾರಣದಿಂದ ಮೃತಪಟ್ಟ ಹಿಂದುಗಳ ಮೃತದೇಹವನ್ನು ಹಿಂದುಗಳಿಗೆ ಮಾತ್ರ ಬಿಟ್ಟು ಕೊಡಬೇಕು. ಹಿಂದೂ ಸಂಪ್ರದಾಯದಂತೆ , ಗೌರವಯುತವಾಗಿ ಅಂತ್ಯಸಂಸ್ಕಾರವನ್ನು ಮಾಡಲು ಹಿಂದು ಸಂಘಟನೆಯ ಕಾರ್ಯಕರ್ತರ ಪಡೆ ಸಿದ್ಧವಿದೆ ಎಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಅಧಿಕಾರಿಗಳಿಗೆ  ಅವರು ಮನವಿ ಮಾಡಿದ್ದಾರೆ.

ಕೊವಿಡ್ ನಿಂದ ಮೃತಪಟ್ಟವರ ಮೃತದೇಹಗಳ ಅಂತ್ಯಸಂಸ್ಕಾರವನ್ನು ವಿವಿಧ ಸಂಘಟನೆಗಳು ಮಾಡುತ್ತಿವೆ. ಇದೇ ಸಂದರ್ಭದಲ್ಲಿ ಕೊರೊನಾದಿಂದ ಮೃತಪಟ್ಟ ಹಿಂದೂಗಳ ಅಂತ್ಯಸಂಸ್ಕಾರ ನಾವೇ ಮಾಡುತ್ತೇವೆ ಎಂದು ವಿಎಚ್ ಪಿ ಮುಂದೆ ಬಂದಿದೆ. ಈ ಬಗ್ಗೆ ವಿಎಚ್ ಪಿ ಮುಖಂಡ ಶರಣ್ ಪಂಪ್ವೆಲ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.


Provided by

ಇತ್ತೀಚಿನ ಸುದ್ದಿ