ಕೊವಿಡ್ ನಿಂದ ಮೃತಪಟ್ಟ ಹಿಂದೂಗಳ ಮೃತದೇಹಕ್ಕೆ ಹೆಗಲು ನೀಡುತ್ತಿರುವ ಮುಸ್ಲಿಮ್ ಯುವಕರು - Mahanayaka
5:57 AM Friday 20 - September 2024

ಕೊವಿಡ್ ನಿಂದ ಮೃತಪಟ್ಟ ಹಿಂದೂಗಳ ಮೃತದೇಹಕ್ಕೆ ಹೆಗಲು ನೀಡುತ್ತಿರುವ ಮುಸ್ಲಿಮ್ ಯುವಕರು

muslim youths
29/04/2021

ಬೆಳಗಾವಿ: ಹಿಂದೂ ಧರ್ಮಿಯರು ಸೇರಿದಂತೆ ಕೊವಿಡ್ ನಿಂದ ಮೃತಪಟ್ಟ ಎಲ್ಲ ಜಾತಿ, ಧರ್ಮಗಳ ಜನರ ಮೃತದೇಹಗಳಿಗೆ ಮುಸ್ಲಿಮ್ ಯುವಕರು ಹೆಗಲು ನೀಡುತ್ತಿದ್ದು, ಧರ್ಮದ ಹೆಸರಿನಲ್ಲಿ ಉದ್ದುದ್ದ ಭಾಷಣ ಮಾಡುತ್ತಾ, ಸಮಾಜದಲ್ಲಿ ಕಲಹ ಸೃಷ್ಟಿಸಿದ ದೊಡ್ಡ ದೊಡ್ಡ ನಾಯಕರು ಮನೆಯಿಂದ ಹೊರ ಬಾರದೇ ಇರುವ ಸಂದರ್ಭದಲ್ಲಿಯೇ ದೇಶದ ಮೂಲೆ ಮೂಲೆಗಳಲ್ಲಿಯೂ ಮುಸ್ಲಿಮ್ ಯುವಕರು, ಸಂಘಟನೆಗಳು ಮೃತದೇಹಗಳ ಅಂತ್ಯಸಂಸ್ಕಾರಕ್ಕೆ ತಮ್ಮ ಪ್ರಾಣದ ಹಂಗುತೊರೆದು ಧಾವಿಸುತ್ತಿದ್ದಾರೆ.

ಹೌದು..! ಕೊವಿಡ್ ನಿಂದ ಮೃತಪಟ್ಟು, ತನ್ನ ಧರ್ಮಿಯರು, ಕುಟುಂಬಸ್ಥರಿಗೂ ಬೇಡವಾಗಿರುವ ಅನಾಥ ಮೃತದೇಹಗಳಿಗೆ ಮುಸ್ಲಿಮ್ ಯುವಕರು ಹೆಗಲು ನೀಡುತ್ತಿದ್ದು, ಬೆಳಗಾವಿ ಜಿಲ್ಲೆಯ ಮೂಡಲಗಿಯಲ್ಲಿ ಕಾರ್ಯಾಚರಿಸುತ್ತಿರುವ ಮುಸ್ಲಿಮ್ ಯುವಕರ ಅಂಜುಮನ್‌-ಎ-ಇಸ್ಲಾಂ ಸಮಿತಿ ಹಾಗೂ ಖಿದಮತ್‌ ಸೋಷಿಯಲ್‌ ವೆಲ್‌ಫೇರ್‌ ಸಮಿತಿಯ ತಂಡ ಅನಾಥ ಶವಗಳ ಅಂತ್ಯಸಂಸ್ಕಾರಕ್ಕೆ ಮುಂದಾಗಿದೆ.

ಈಗಾಗಲೇ 25 ಮೃತದೇಹಗಳಿಗೆ ಅಂತ್ಯಸಂಸ್ಕಾರ ನಡೆಸಲಾಗಿದ್ದು, ಅಂತ್ಯಸಂಸ್ಕಾರ ನಡೆಸಿದ ಮೃತದೇಹಗಳ ಪೈಕಿ ಹಿಂದೂ ಧರ್ಮಿಯರ ಮೃತದೇಹವೇ ಹೆಚ್ಚು. ಹಿಂದೂ ಧರ್ಮಿಯರ ಮೃತದೇಹವನ್ನುಅವರ ಪದ್ಧತಿಯಂತೆಯೇ ಅಂತ್ಯಸಂಸ್ಕಾರ ನಡೆಸಲಾಗಿದೆ.


Provided by

ಅಂಜುಮನ್‌-ಎ-ಇಸ್ಲಾಂ ತಂಡದ ಕಾರ್ಯದರ್ಶಿ ಹಾಗೂ ಖಿದಮತ್‌ ಸೋಷಿಯಲ್‌ ವೆಲ್‌ಫೇರ್‌ ಸಮಿತಿ ಅಧ್ಯಕ್ಷ ಶಖೀಲ ಬೇಪಾರಿ ಅವರು ಸಮಾನ ಮನಸ್ಕ ಯುವಕರಲ್ಲಿ ಸಮಾಜ ಸೇವೆಯ ಕಲ್ಪನೆ ಸೇವಾ ಕಾರ್ಯದಲ್ಲಿ ತೊಡಗಿದ್ದಾರೆ.  ತಂಡದಲ್ಲಿ ಮುಬಾರಕ ಪೈಲವಾನ, ಇರ್ಷಾದ ಪೈಲವಾನ, ತೌಷೀಫ ಕಿತ್ತೂರ, ಇಲಿಯಾಸ್‌ ಪೈಲವಾನ ಸೇರಿದಂತೆ 50 ಮಂದಿ ಇದ್ದಾರೆ.

ಈ ತಂಡದಲ್ಲಿರುವವರೆಲ್ಲರೂ ಶ್ರೀಮಂತರೇನಲ್ಲ, ಕಟ್ಟಡದ ಸೆಂಟ್ರಿಂಗ್‌, ಗೌಂಡಿ ಕೆಲಸ ಮಾಡುವವರು, ವಾಹನ ಚಾಲಕರು, ಮೇವು ಮಾರುವವರು ಹೀಗೆ ಸಣ್ಣ ಪುಟ್ಟ ಕೆಲಸ ಮಾಡುವವರು ಈ ತಂಡದಲ್ಲಿದ್ದಾರೆ. ಸಮಾಜದಲ್ಲಿ ಬಾಯಿಗೆ ಬಂದಂತೆ ಭಾಷಣ ಮಾಡಿ ಧರ್ಮಗಳ ಮೇಲೆ ಧರ್ಮಗಳನ್ನು ಎತ್ತಿಕಟ್ಟಿ ರಾಜಕೀಯ ಮಾಡುವ ದೊಡ್ಡ ನಾಯಕರು, ಕೊವಿಡ್ ಎರಡನೇ ಅಲೆ ಬಂದ ಬಳಿಕ ಮನೆಯಿಂದ ಹೊರಗೆ ತಲೆಯೇ ಹಾಕುತ್ತಿಲ್ಲ. ಆದರೆ ಇವರ ಭಾಷಣಗಳಿಂದ ಎಷ್ಟೋ ಹೊಡೆತಗಳನ್ನು ತಿಂದಿರುವ ಸಮುದಾಯ ಬೀದಿಗೆ ಇಳಿದು ಸೇವೆ ಮಾಡುತ್ತಿರುವುದು ಶ್ಲಾಘನೀಯವಾಗಿದೆ.

ಇತ್ತೀಚಿನ ಸುದ್ದಿ