ಹಿಂದೂತ್ವ ಮನುವಾದ ಅಲ್ಲ: ನಟ ಅಹಿಂಸಾ ಚೇತನ್
ಹಿಂದೂತ್ವ ಮನುವಾದ ಅಲ್ಲ ಎಂದು ಚಲನ ಚಿತ್ರನಟ ಅಹಿಂಸಾ ಚೇತನ್ ಹೇಳಿದ್ದು, ಮಾಜಿ ಸಿಎಂ ಸಿದ್ದರಾಮಯ್ಯನವರ ಹೇಳಿಕೆಗೆ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.
ಸಂವಿಧಾನಕ್ಕೆ ವಿರುದ್ಧವಾದುದ್ದೇ ಹಿಂದುತ್ವ, ಅದೇ ಮನುವಾದ ಅನ್ನೋ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಚೇತನ್, ಇಲ್ಲಿ ಸಿದ್ದರಾಮಯ್ಯ ಅವರು ಹೇಳಿರುವುದು ತಪ್ಪು, ಹಿಂದುತ್ವ ಮನುವಾದ ಅಲ್ಲ ಎಂದು ಹೇಳಿದ್ದಾರೆ.
ಮನುವಾದವು ‘ಮನುಸ್ಮೃತಿ’ (185 BCE) ಮೂಲಕ ಸಾಂಸ್ಥಿಕಗೊಳಿಸಿದ ವರ್ಣ/ಲಿಂಗ ಆಧಾರಿತ ಅಸಮಾನತೆಯಾಗಿದೆ. ಇಂದಿನ ಮನುವಾದಿ (ಬ್ರಾಹ್ಮಣ್ಯ ಮತ್ತು ಯಥಾಸ್ಥಿತಿ) ಕಾಂಗ್ರೆಸ್, ಜೆಡಿಎಸ್, ಇತರ ಪಕ್ಷಗಳು ಹಿಂದುತ್ವ (ಬಿಜೆಪಿ) ಮತ್ತು ಮನುವಾದ (ಕಾಂಗ್ರೆಸ್-ಜೆಡಿಎಸ್, ಇತರೆ) ಎಲ್ಲವೂ ಸಮಾನತೆಗೆ ವಿರುದ್ಧವಾಗಿವೆ; ಆದ್ದರಿಂದ, ಎಲ್ಲವೂ ಅಸಂವಿಧಾನಿಕ ಎಂದಿದ್ದಾರೆ.
ಕಲಬುರಗಿ ನಗರದಲ್ಲಿ ಮಾಜಿ ಶಾಸಕ ಬಿ.ಆರ್.ಪಾಟೀಲ್ ಜೀವನ ಕಥೆಯ “ನಿರ್ಭಯ” ಸಮಾಜವಾದದೆಡೆಗೆ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, ಮನುವಾದ ಮತ್ತು ಪುರೋಹಿತಷಾಹಿ ಇವೆರಡೂ ಸಮಾಜಕ್ಕೆ ಶಾಪವಾಗಿದೆ. ನಾನು ಮನುವಾದ, ಹಿಂದುತ್ವದ ವಿರೋಧಿ, ಆದರೆ ಹಿಂದೂ ವಿರೋಧಿಯಲ್ಲ ಎಂದಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw