ಹಿರಿಯ ನಟ ಶಿವರಾಮ್ ಪಂಚಭೂತಗಳಲ್ಲಿ ಲೀನ: ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ
ಬೆಂಗಳೂರು: ಸ್ಯಾಂಡಲ್ ವುಡ್ ಹಿರಿಯ ನಿರ್ಮಾಪಕ ಶಿವರಾಂ ಅವರ ಅಂತ್ಯಕ್ರಿಯೆ ಇಂದು ಬೆಂಗಳೂರಿನ ಬನಶಂಕರಿ ಚಿತಾಗಾರದಲ್ಲಿ ನಡೆಯಿತು. ಶಿವರಾಂ ಮಕ್ಕಳಾದ ರವಿಶಂಕರ್, ಲಕ್ಷ್ಮೀಶ್ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.
ಶಿವರಾಮ್ ಅವರು ಅಯ್ಯಪ್ಪ ಸ್ವಾಮಿ ಭಕ್ತರಾಗಿದ್ದರು. ಪೂಜೆಯ ವೇಳೆ ಅವರು ಯಾವಾಗಲೂ ಬಾಗಿಲು ಹಾಕಿಕೊಳ್ಳುತ್ತಿದ್ದರು. ಈ ಘಟನೆ ನಡೆದ ದಿನವೂ ಅದೇ ರೀತಿ ಬಾಗಿಲು ಹಾಕಿಕೊಂಡು ಪೂಜೆ ಮಾಡುತ್ತಿದ್ದರು. ಈ ವೇಳೆ ಅವರು ಕುಸಿದು ಬಿದ್ದು, ಅವರ ತಲೆಗೆ ಗಂಭೀರವಾಗಿ ಏಟು ತಗಲಿತ್ತು.
ಇನ್ನೂ ಪೂಜಾ ಕೊಠಡಿಗೆ ಬಾಗಿಲು ಹಾಕಿಕೊಂಡಿದ್ದರಿಂದಾಗಿ ಶಿವರಾಮ್ ಅವರು ಕುಸಿದು ಬಿದ್ದದ್ದರು ಯಾರ ಗಮನಕ್ಕೂ ಬಂದಿರಲಿಲ್ಲ ಎನ್ನಲಾಗಿದೆ. ವರದಿಗಳ ಪ್ರಕಾರ, ಒಂದು ಗಂಟೆಗೂ ಹೆಚ್ಚು ಕಾಲ ಅವರಿಗೆ ರಕ್ತಸ್ರಾವವಾಗಿತ್ತು ಎಂದು ಹೇಳಲಾಗಿದೆ. ಆ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಶಿವರಾಮ್ ಅವರಿಗೆ ನಿರಂತರವಾಗಿ ಚಿಕಿತ್ಸೆ ನೀಡಲಾಗಿದ್ದರೂ ಅವರು ಚೇತರಿಸಿಕೊಳ್ಳಲಿಲ್ಲ. ಬಳಿಕ ಅವರು ಮೆದುಳು ನಿಷ್ಕ್ರಿಯಗೊಂಡಿದ್ದು, ಪರಿಣಾಮವಾಗಿ ಅವರು ನಿಧನ ಹೊಂದಿದ್ದಾರೆ. ವರ್ಷಕ್ಕೆ ಮೂರು—ನಾಲ್ಕು ಬಾರಿ ಶಬರಿಮಲೆ ಯಾತ್ರೆ ಮಾಡುತ್ತಿದ್ದ ಶಿವರಾಮ್ ಅವರು ಪೂಜೆ ಮಾಡಲೆಂದೇ ಮನೆಯ ಟೆರೆಸ್ ನಲ್ಲಿ ಪ್ರತ್ಯೇಕವಾಗಿ ಜಾಗ ಮಾಡಿಕೊಂಡಿದ್ದರು. ಪೂಜೆಯ ಸಂದರ್ಭದಲ್ಲಿ ಅವರು ಏಕಾಂತವಾಗಿರುತ್ತಿದ್ದರು ಎನ್ನಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ನಂಬರ್ ಪ್ಲೇಟ್ ನಲ್ಲಿ SEX ಪದ ಬಳಕೆ: ಸಾರಿಗೆ ಇಲಾಖೆಗೆ ಮಹಿಳಾ ಆಯೋಗ ನೋಟಿಸ್
“ನಿನ್ನನ್ನು ನೋಡೋಕೆ ಬಂದಿದ್ದೀನಿ…” | ಪುಟಾಣಿ ಅಭಿಮಾನಿ ಜೊತೆಗೆ ಸಿದ್ದರಾಮಯ್ಯ ಮಾತು
ಭೀಕರ ಜ್ವಾಲಾಮುಖಿ ಸ್ಫೋಟ: 13 ಮಂದಿ ಸಾವು, ಗ್ರಾಮ ಬಿಟ್ಟು ಓಡಿದ ಜನ
ಇಂದು ಅಗಲಿದ ಹಿರಿಯ ನಟ ಶಿವರಾಮ್ ಅವರ ಅಂತ್ಯಕ್ರಿಯೆ
ತಂದೆಯ ಕಣ್ಣ ಮುಂದೆಯೇ ನೀರಿನಲ್ಲಿ ಕೊಚ್ಚಿ ಹೋದ ಯುವಕ!
ಭೀಕರ ಕೊಲೆ: ಒಮಿಕ್ರಾನ್ ಗೆ ಹೆದರಿ ಪತ್ನಿ, ಇಬ್ಬರು ಮಕ್ಕಳನ್ನು ಸುತ್ತಿಗೆಯಿಂದ ಹೊಡೆದು ಬರ್ಬರ ಹತ್ಯೆ