12:01 PM Wednesday 12 - March 2025

ಹಿರಿಯ ನಟಿ ಭಾರ್ಗವಿ ನಾರಾಯಣ ನಿಧನ

Bhargavi01
15/02/2022

ಬೆಂಗಳೂರು: ವಯೋಸಹಜ ಅನಾರೋಗ್ಯ ಸಮಸ್ಯೆಯಿಂದ ಅವರು ಬಳಲುತ್ತಿದ್ದ ರಂಗಭೂಮಿ ಕಲಾವಿದೆ, ಹಿರಿಯ ನಟಿ ಭಾರ್ಗವಿ ನಾರಾಯಣ ಅವರು ಇಂದು ನಿಧನರಾಗಿದ್ದಾರೆ.

ಭಾರ್ಗವಿ ನಾರಾಯಣ(84) ಅವರು 20ಕ್ಕೂ ಅಧಿಕ ಚಿತ್ರದಲ್ಲಿ ನಟಿಸಿದ್ದರು. ಮಂಥನಾ ಮತ್ತು ಮುಕ್ತಾ ಧಾರಾವಾಹಿಯ ಮೂಲಕ ಮನೆ ಮಾತಾಗಿದ್ದರು. ಎರಡು ಕನಸು, ಪ್ರೊಫೆಸರ್ ಹುಚ್ಚೂರಾಯ, ಪಲ್ಲವಿ, ಮುಯ್ಯಿ, ಅ೦ತಿಮ ಘಟ್ಟ. ಜ೦ಬೂ ಸವಾರಿ, ಕಾದ ಬೆಳದಿ೦ಗಳು, ಇದೊಳ್ಳೆ ರಾಮಾಯಣ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಇವರು ನಟಿಸಿದ್ದಾರೆ.

ಇವರ ಆತ್ಮಚರಿತ್ರೆ ‘ನಾನು, ಭಾರ್ಗವಿ’ 2012ರಲ್ಲಿ ಬಿಡುಗಡೆಯಾಗಿದೆ. ಇವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು – ಅತ್ಯುತ್ತಮ ಪೋಷಕ ನಟಿ, ಕರ್ನಾಟಕ ರಾಜ್ಯನಾಟಕ ಅಕಾಡೆಮಿ ಪ್ರಶಸ್ತಿಗಳು, ಮಂಗಳೂರು ಪ್ರತಿಷ್ಠಿತ ಸಂದೇಶ ಪ್ರಶಸ್ತಿ, ಆಳ್ವಾಸ್ ನಡಿಸಿರಿ ಪ್ರಶಸ್ತಿ, ಕರ್ನಾಟಕ ರಾಜ್ಯ ನಾಟಕ ಸ್ಪರ್ಧೆ – ಅತ್ಯುತ್ತಮ ನಟಿ, ಕರ್ನಾಟಕ ರಾಜ್ಯ ಮಕ್ಕಳ ನಾಟಕ ಸ್ಪರ್ಧೆ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಿಕ್ಕಿವೆ. ಮೃತರು ಮಕ್ಕಳಾದ ಸುಜಾತಾ, ನಟ ಪ್ರಕಾಶ್‌ ಬೆಳವಾಡಿ, ಪ್ರದೀಪ್‌ ಮತ್ತು ನಟಿ ಸುಧಾ ಬೆಳವಾಡಿ ಅವರನ್ನು ಅಗಲಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ಪಲ್ಟಿ: ಹಲವರಿಗೆ ಗಾಯ

ನಾನು ಹಿಜಾಬ್ ಬಗ್ಗೆ ಮಾತನಾಡ್ತೀನಿ: ಡಿ.ಕೆ.ಶಿವಕುಮಾರ್ ಸೂಚನೆ ತಿರಸ್ಕರಿಸಿದ ಜಮೀರ್

ಫೆ. 17ರಂದು ಹಾರಿಹಿತ್ಲು, ರೆಂಜಾಳ ಶ್ರೀ ಸತ್ಯಸಾರಮಾನಿ ದೈವಸ್ಥಾನದ ವಾರ್ಷಿಕ ನೇಮೋತ್ಸವ

ಕನ್ನಡ ಚಿತ್ರರಂಗದ ಹಿರಿಯ ನಟನ ಆರೋಗ್ಯ ಸ್ಥಿತಿ ಗಂಭೀರ

ಇತ್ತೀಚಿನ ಸುದ್ದಿ

Exit mobile version