ಮಾಜಿ ಸಚಿವ, ಹಿರಿಯ ನಾಯಕ ಕೆ.ಬಿ.ಶಾಣಪ್ಪ ಕೊರೊನಾಕ್ಕೆ ಬಲಿ
09/05/2021
ಕಲಬುರಗಿ: ರಾಜ್ಯ ಸಭೆಯ ಮಾಜಿ ಸಚಿವ ಹಿರಿಯ ನಾಯಕ ಕೆ.ಬಿ.ಶಾಣಪ್ಪ ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ. ಕೊವಿಡ್ ಸೋಂಕು ದೃಢಪಟ್ಟ ಕಾರಣ ಮೂರು ದಿನಗಳ ಹಿಂದೆ ಇಲ್ಲಿನ ಜಿಮ್ಸ್ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು.
83 ವರ್ಷ ವಯಸ್ಸಿನಲ್ಲಿ ನಿಧನರಾದ ಶಾಣಪ್ಪ ಅವರು, ಕಾರ್ಮಿಕ ನಾಯಕರಾಗಿ ಗುರುತಿಸಿಕೊಂಡಿದ್ದರು. 2 ಬಾರಿ ಅವರು ಶಹಾಬಾದ್ ಮೀಸಲು ಕ್ಷೇತ್ರದಿಂದ ಕಮ್ಯುನಿಸ್ಟ್ ಪಕ್ಷದಿಂದ ಶಾಸಕರಾಗಿದ್ದರು.
ಎಂಎಲ್ ಎ, ಎಂಎಲ್ಸಿ ಅಲ್ಲದೇ ಇದ್ದರೂ ಜೆ.ಎಚ್.ಪಟೇಲ್ ಅವರು ಶಾಣಪ್ಪ ಅವರನ್ನ ಮಂತ್ರಿ ಮಂಡಲಕ್ಕೆ ಸೇರಿಸಿಕೊಂಡು ಅಬಕಾರಿ ಇಲಾಖೆಯನ್ನು ನೀಡಿದ್ದರು. ಆದರೆ ಆ ಬಳಿಕ ಅವರು ಎಂಎಲ್ ಎ, ಎಂಎಲ್ಸಿ ಆಗಲು ಸಾಧ್ಯವಾಗದ ಹಿನ್ನೆಲೆಯಲ್ಲಿ ತಮ್ಮ ಸ್ಥಾನದಿಂದ ಕೆಳಗಿಳಿದರು.
ಇದಾದ ಬಳಿಕ ಬಿಜೆಪಿ ಸೇರಿದ್ದ ಅವರನ್ನು ಮೊದಲು ರಾಜ್ಯಸಭೆಗೆ ನಾಮಕರಣಗೊಳಿಸಲಾಗಿತ್ತು. ತದನಂತರ ರಾಜ್ಯ ವಿಧಾನ ಪರಿಷತ್ ಗೂ ನಾಮನಿರ್ದೇಶನಗೊಳಿಸಲಾಗಿತ್ತು. ಇತ್ತೀಚಿಗಷ್ಟೇ ಅಂದರೆ ಕಳೆದ 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸೇರಿದ್ದರು.