ಹಿತೈಷಿಗಳು, ಮಠಾಧೀಶರು ಸುಮ್ಮನಿರಪ್ಪ ಎಂದಿದ್ದಾರೆ | ರಮೇಶ್ ಜಾರಕಿಹೊಳಿ ಯೂಟರ್ನ್ - Mahanayaka
7:30 AM Thursday 12 - December 2024

ಹಿತೈಷಿಗಳು, ಮಠಾಧೀಶರು ಸುಮ್ಮನಿರಪ್ಪ ಎಂದಿದ್ದಾರೆ | ರಮೇಶ್ ಜಾರಕಿಹೊಳಿ ಯೂಟರ್ನ್

ramesh jarakiholi
10/07/2021

ಬೆಳಗಾವಿ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದ ರಮೇಶ್ ಜಾರಕಿಹೊಳಿ ಯುಟರ್ನ್ ಹೊಡೆದಿದ್ದು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರ ಮುಗಿದ ಅಧ್ಯಾಯ ಎಂದು ಹೇಳಿದ್ದಾರೆ.

ಗೋಕಾಕ್ ನ ಅಂಕಲಗಿ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,  ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ನಿರ್ಧರಿಸಿದ್ದು ನಿಜ. ಆದರೆ ಕೆಲವು ಹಿತೈಷಿಗಳು, ಮಠಾಧೀಶರು ಸುಮ್ಮನಿರಪ್ಪ ಎಂದಿದ್ದಾರೆ ಹಾಗಾಗಿ ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಅವರು ಹೇಳಿದರು.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರದಲ್ಲಿ  ರಾಜಕಾರಣ ಇರಲಿಲ್ಲ. ವೈಯಕ್ತಿಕವಾಗಿ ಬೇರೆ ಕಾರಣಗಳಿತ್ತು. ಹಿತೈಷಿಗಳು, ಮಠಾಧೀಶರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದು ಬೇಡ ಎಂದಿದ್ದಕ್ಕೆ ತಡೆದ ಹಿಡಿದಿದ್ದೇನೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾತನಾಡುತ್ತೇನೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

ಇತ್ತೀಚಿನ ಸುದ್ದಿ