ಸುರತ್ಕಲ್: ಹೋಬಳಿ ಮಟ್ಟದ ಪ್ರಾಥಮಿಕ ವಿಭಾಗದ ಶಾಲಾ ಬಾಲಕ- ಬಾಲಕಿಯರ ಕ್ರೀಡಾಕೂಟ - Mahanayaka
11:00 AM Thursday 12 - December 2024

ಸುರತ್ಕಲ್: ಹೋಬಳಿ ಮಟ್ಟದ ಪ್ರಾಥಮಿಕ ವಿಭಾಗದ ಶಾಲಾ ಬಾಲಕ– ಬಾಲಕಿಯರ ಕ್ರೀಡಾಕೂಟ

nitk
01/10/2024

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಮಂಗಳೂರು ಉತ್ತರ ವಲಯ ಹಾಗೂ ದ.ಕ.ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕರಂಬಾರು ಇವರ ಆಶ್ರಯದಲ್ಲಿ ಸುರತ್ಕಲ್ ಹೋಬಳಿ ಮಟ್ಟದ ಪ್ರಾಥಮಿಕ ವಿಭಾಗದ ಶಾಲಾ ಬಾಲಕ / ಬಾಲಕಿಯರ ಕ್ರೀಡಾಕೂಟ ಸುರತ್ಕಲ್ N. I. T. K ಕ್ರೀಡಾಂಗಣದಲ್ಲಿ ಜರುಗಿತು.

ಕ್ರೀಡಾಕೂಟದ ಧ್ವಜಾರೋಹಣವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳೂರು ಉತ್ತರ ವಲಯದ ಜೇಮ್ಸ್ ಕುಟಿನೋ ನೆರವೇರಿಸಿದರು. ಕಾರ್ಯಕ್ರಮ ಉದ್ಘಾಟನೆಯನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸತೀಶ್ ದೇವಾಡಿಗರು ನೆರವೇರಿಸಿದರು.

ಶಾಲಾ ಮುಖ್ಯ ಶಿಕ್ಷಕಿ ಉಷಾ ಕಿರಣ ಕ್ರೀಡಾ ಜ್ಯೋತಿ ಹಸ್ತಾಂತರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು SDMC ಅಧ್ಯಕ್ಷರಾದ ಗುಣಪಾಲ್ ದೇವಾಡಿಗರು ವಹಿಸಿದ್ದರು.
ಅಗ್ನೇಸ್ ಡೊಟ್ಟಿ ಪಿಂಟೋ, BRP ಪ್ರಾಥಮಿಕ, ರಾಮ್ ದಾಸ್ ಭಟ್ CRP ಪದ್ಮನೂರು, ಹೇಮಂತ್ CRP ಕರಂಬಾರು ಕ್ಲಸ್ಟರ್, ವಿನೋದ್ ಕುಮಾರ್ ದೈಹಿಕ ಶಿಕ್ಷಣ ಶಿಕ್ಷಕಿ ಸಂಘದ ರಾಜ್ಯ ಮಟ್ಟದ ಸಂಘಟನಾ ಕಾರ್ಯದರ್ಶಿ, ಶಕುಂತಲ ದೈಹಿಕ ಶಿಕ್ಷಣ ಶಿಕ್ಷಕಿ ಜೋಕಟ್ಟೆ ಪ್ರಾಥಮಿಕ, ಆಶಾ ಟಿ. ದೈಹಿಕ ಶಿಕ್ಷಣ ಶಿಕ್ಷಕಿ ಜೋಕಟ್ಟೆ ಪ್ರೌಢಶಾಲೆ, ನಿತಿನ್ ಪುತ್ರನ್ ದೈಹಿಕ ಶಿಕ್ಷಣ ಶಿಕ್ಷಕ ಸಂಘದ ತಾಲೂಕು ಅಧ್ಯಕ್ಷರು ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕಿ ಉಷಾ ಕಿರಣ ಸ್ವಾಗತಿಸಿದರು. ಗೀತಾ ಎಸ್. ನಿರೂಪಿಸಿದರು. ಮಾಲಾಶ್ರೀ ವಂದಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

 

ಇತ್ತೀಚಿನ ಸುದ್ದಿ