ಹೊಳೆದಾಟಿದ ಮೇಲೆ ಅಂಬಿಗನ ಹಂಗೇಕೆ? | ಸಿಎಂಗೆ ಕನಿಷ್ಠ ಗೌರವವನ್ನೂ ಕೊಡದೆ ಹೊರಗೆ ತಳ್ಳಲಾಗಿದೆ | ಜಿ.ಪರಮೇಶ್ವರ್
ಬೆಂಗಳೂರು: ಹೊಳೆದಾಟಿದ ಮೇಲೆ ಅಂಬಿಗನ ಹಂಗೇಕೆ ಎಂಬಂತೆ ರಾಜ್ಯ ಬಿಜೆಪಿ ಯಡಿಯೂರಪ್ಪನವರಿಗೆ ಕನಿಷ್ಠ ಗೌರವವನ್ನೂ ನೀಡದೇ ರಾಜೀನಾಮೆ ನೀಡಿಸಿ ಪಕ್ಷದಿಂದ ಹೊರ ತಳ್ಳುವ ಕೆಲಸ ಮಾಡುತ್ತಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಟೀಕಿಸಿದ್ದಾರೆ.
ಸಿಎಂ ಯಡಿಯೂರಪ್ಪನವರ ರಾಜೀನಾಮೆ ವಿಚಾರವಾಗಿ ಟ್ವೀಟ್ ಮಾಡಿರುವ ಜಿ.ಪರಮೇಶ್ವರ್, ಯಡಿಯೂರಪ್ಪನವರಿಗೆ ಕನಿಷ್ಠ ಗೌರವನನ್ನೂ ನೀಡದೇ ಪಕ್ಷದಿಂದ ಹೊರ ತಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೊಳೆ ದಾಟಿದ ಮೇಲೆ ಅಂಬಿಗನ ಹಂಗೇಕೆ ಅಂದಂತೆ ಬಿಜೆಪಿಯು ರಾಜ್ಯದಲ್ಲಿ ಆಡಳಿತ ದೊರಕಿಸಿದ, ಪಕ್ಷವನ್ನು ಕಟ್ಟಿದ ಯಡಿಯೂರಪ್ಪನವರನ್ನೇ ಕನಿಷ್ಠ ಗೌರವವನ್ನೂ ಕೊಡದೆ ರಾಜೀನಾಮೆ ನೀಡಿಸಿ ಹೊರಗೆ ತಳ್ಳುವ ಕೆಲಸ ಮಾಡುತ್ತಿದೆ. ಪಕ್ಷದಿಂದ ಪಕ್ಷಕ್ಕೆ ಹಾರಿ ಅಧಿಕಾರ ದಾಹದಿಂದ ಬಿಜೆಪಿ ಸೇರಿರುವ ಎಲ್ಲರಿಗೂ ಇದು ಒಂದು ಪಾಠವಾಗಲಿ ಎಂದು ಪರಮೇಶ್ವರ್ ಟ್ವೀಟ್ ಮಾಡಿದ್ದಾರೆ.
ಇನ್ನಷ್ಟು ಸುದ್ದಿಗಳು…
ಕಟು ವಾಕ್ಯಗಳಿಂದ ಯಡಿಯೂರಪ್ಪ ರಾಜೀನಾಮೆಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ!
ರಾಜ್ಯ ಬಿಟ್ಟು ಎಲ್ಲಿಯೂ ಹೋಗಲ್ಲ ಎಂದ ಯಡಿಯೂರಪ್ಪ | ಸಿಎಂ ಸ್ಥಾನಕ್ಕೆ ರಾಜೀನಾಮೆಯ ಬಳಿಕ ಮುಂದಿನ ಆಯ್ಕೆ ಏನು?
ಫೋಟೋ ಶೇರ್ ಮಾಡಿದ ಕೆಲವೇ ನಿಮಿಷಗಳಲ್ಲಿ ಸಾವನ್ನಪ್ಪಿದ ಆಯುರ್ವೇದ ವೈದ್ಯೆ!
ಮತದಾರರ ಗುರುತಿನ ಚೀಟಿ ಕಳೆದು ಹೋದರೆ ಏನು ಮಾಡಬೇಕು?
ಮಠಾಧಿಪತಿಗಳಿಗೆ ಸಿಎಂ ಆಗುವ ಕನಸು | ಮಠಾಧಿಪತಿಗಳನ್ನು ಕರ್ನಾಟಕದ ಮುಖ್ಯಮಂತ್ರಿ ಮಾಡಿ ಎಂದ ಸ್ವಾಮೀಜಿ