SSLC ಪಾಸಾದವರಿಗೆ ಹೋಂ ಗಾರ್ಡ್ ಹುದ್ದೆಗಳು: ನೀವು ಅರ್ಜಿ ಸಲ್ಲಿಸಿ
Home Guard Recruitment 2024 – ಬೆಳಗಾವಿ ಜಿಲ್ಲೆಯ ಗೃಹರಕ್ಷಕ ದಳದಲ್ಲಿ ಖಾಲಿ ಇರುವಂತಹ ಒಟ್ಟು 154 ಹೋಂ ಗಾರ್ಡ್ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಸೇವೆ ಸಲ್ಲಿಸಲು ಅರ್ಹತೆ ಮತ್ತು ಆಸಕ್ತಿಯುಳ್ಳ ಅಭ್ಯರ್ಥಿಗಳು ಈ ಕೂಡಲೇ ಈ ಮಾಹಿತಿ ತಿಳಿದು ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸಲು ಏನೆಲ್ಲಾ ಅರ್ಹತೆ ಹೊಂದಿರಬೇಕು?
ಬೆಳಗಾವಿ ಜಿಲ್ಲೆಯ ಗೃಹ ರಕ್ಷಕ ದಳದಲ್ಲಿ ಖಾಲಿ ಇರುವ ಹೋಂ ಗಾರ್ಡ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಕನಿಷ್ಠ 10ನೇ ತರಗತಿ ಪಾಸ್ ಆಗಿದ್ದು 18ರಿಂದ 40 ವರ್ಷದ ವಯೋಮಿತಿಯಲ್ಲಿರಬೇಕು.
ಪ್ರಮುಖವಾಗಿ ಅಭ್ಯರ್ಥಿಗಳು ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿರಬೇಕು. ಈ ಮೊದಲು ಯಾವುದೇ ರೀತಿಯ ಪೊಲೀಸ್ ಪ್ರಕರಣಗಳಲ್ಲಿ ದಾಖಲಾಗಿರಬಾರದು. ಈ ನೇಮಕಾತಿಯಲ್ಲಿ ಪ್ರಮುಖವಾಗಿ ವೃತ್ತಿ ಕೌಶಲ್ಯ ಹೊಂದಿರುವ ಅಭ್ಯರ್ಥಿಗಳಿಗೆ ಅಧ್ಯತೆ ನೀಡಲಾಗುವುದು.
ನೇಮಕಾತಿ ಹೇಗೆ ಮಾಡಿಕೊಳ್ಳಲಾಗುತ್ತದೆ?
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಶಸ್ತ್ರಾಸ್ತ್ರ ತರಬೇತಿ, ರೈಫಲ್ ಟ್ರೈನಿಂಗ್, ಸಂಚಾರ ನಿಯಂತ್ರಣ, ಅಗ್ನಿಶಮನ ತರಬೇತಿ ಸೇರಿದಂತೆ ವಿವಿಧ ಕಲೆಗಳ ತರಬೇತಿ ನೀಡಿ ಅಂತಹ ಅಭ್ಯರ್ಥಿಗಳನ್ನು ತುರ್ತು ಸಂಧರ್ಭದಲ್ಲಿ ಉಪಯೋಗಿಸಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಅಭ್ಯರ್ಥಿಗಳು ಬೆಳಗಾವಿಯ ಸಮಾದೇಷ್ಟ ಕಚೇರಿಗೆ ಭೇಟಿ ನೀಡಿ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ ಜಿಲ್ಲಾ ಗೃಹರಕ್ಷಕ ದಳ ಚನ್ನಮ್ಮ ಹೌಸಿಂಗ್ ಸೊಸೈಟಿಗೆ ಡಿಸೆಂಬರ್ 12, 2024ರ ಒಳಗಾಗಿ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ: 0831–2420451
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: