ಕಫ ಮನುಷ್ಯನನ್ನು ಕೊಲ್ಲದೆ ಕೊಲ್ಲುವ ರೋಗ | ಕಫ ನಿವಾರಣೆ ಮಾಡುವುದು ಹೇಗೆ?
ಸದ್ಯ ಕೊರೊನಾ ಕಾಲದಲ್ಲಿ ಜನರು ಸ್ವಲ್ಪ ಕಫ ಆದ್ರೂ ಭಯಪಡುವಂತಾಗಿದೆ. ಆದರೆ ಕಫ ಎನ್ನುವ ಸಮಸ್ಯೆ ಕೆಲವೊಮ್ಮೆ ನಮಗೆ ಹಲವು ಸಂದಿಗ್ಧತೆಯನ್ನು ತಂದಿಡುವುದಿದೆ. ಉಸಿರಾಟಕ್ಕೂ ಕೆಲವೊಮ್ಮೆ ಕಫ ತೊಂದರೆ ನೀಡುತ್ತದೆ. ಹಾಗಾದರೆ ಕಫವನ್ನು ನಿವಾರಿಸುವುದು ಹೇಗೆ? ಅದಕ್ಕೆ ಪ್ರಕೃತಿ ದತ್ತವಾಗಿ ನಾವೇ ಹೇಗೆ ಚಿಕಿತ್ಸೆ ಮಾಡಿಕೊಳ್ಳಬಹುದು ಬನ್ನಿ ನೋಡೋಣ.
ಬಿಸಿ ನೀರಿಗೆ ಉಪ್ಪು ಹಾಕಿ ದಿನಕ್ಕೆ 2 ಬಾರಿ ಬಾಯಿಗೆ ನೀರು ಹಾಕಿಕೊಂಡು ಗಾರ್ಗಲ್ ಮಾಡಿದರೆ, ಗಂಟಲಿನಲ್ಲಿದ್ದ ಕಫ ನಿವಾರಣೆಯಾಗುತ್ತದೆ. ಉಪ್ಪು ಮತ್ತು ಬಿಸಿ ನೀರು ಕಫ ನಿವಾರಣೆಗೆ ಹೆಚ್ಚು ಪರಿಣಾಮಕಾರಿಯೂ ಆಗಿದೆ. ಕೊರೊನಾ ಸಂದರ್ಭದಲ್ಲಿ ಬಹುತೇಕ ವೈದ್ಯರು ಇದೇ ಟಿಪ್ಸ್ ನ್ನು ನೀಡುತ್ತಿದ್ದಾರೆ.
ಇನ್ನೊಂದು ಪ್ರಮುಖವಾಗಿ ಕಫವನ್ನು ದೂರ ಮಾಡುವ ವಸ್ತು ನಿಂಬೆ ಹಣ್ಣಿನ ರಸ. ನಿಂಬೆ ಹಣ್ಣಿನ ತುಂಬಿಗೆ ಸೈಂಧವ ಉಪ್ಪು ಮತ್ತು ಕರಿಮೆಣಸಿನ ಪುಡಿ ಹಾಕಿ ಆ ರಸವನ್ನು ಸೇವಿಸಿದರೆ ಕಫ ಶಮನವಾಗುತ್ತದೆ.
ಕಫ ನಿವಾರಣೆಗೆ ಇನ್ನೊಂದು ಸುಲಭ ಉಪಾಯ ಏನೆಂದರೆ, ಒಂದು ಚಮಚ ಅರಿಶಿನ ಪುಡಿಯನ್ನು ಬಿಸಿ ನೀರಿನಲ್ಲಿ ಕಲಸಿ ಪದೇ ಪದೇ ಸೇವಿಸಿದರೆ ಕಫ ನಿವಾರಣೆಯಾಗುತ್ತದೆ. ಕರಿ ಮೆಣಸು ಕೂಡ ಕಫ ನಿವಾರಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಕರಿಮೆಣಸಿನ ಪುಡಿಗೆ ಜೇನು ತುಪ್ಪ ಸೇರಿಸಿ ದಿನಕ್ಕೆ 4ರಿಂದ 5 ಬಾರಿ ಸ್ವಲ್ಪ ಸ್ವಲ್ಪ ಸೇವಿಸಿದರೆ ಕಫ ಕರಗುತ್ತದೆ.