ಮಾಧ್ಯಮಗಳಿಗೆ ಹೇಳಿಕೆ ನೀಡದೇ ಇರಲು ನಿರ್ಧರಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್!

ಬೆಂಗಳೂರು: ಇನ್ನು ಮುಂದೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದಿರಲು ತೀರ್ಮಾನಿಸಿರುವುದಾಗಿ ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ಇಂದು ಬೆಳಗ್ಗೆ ತಮ್ಮ ನಿವಾಸದ ಮುಂದೆ ಸಚಿವರ ಹೇಳಿಕೆಗಾಗಿ ಕಾಯುತ್ತಿದ್ದ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಇನ್ಮುಂದೆ ನಾನು ಮೀಡಿಯಾ ಅಡ್ರೆಸ್ ಮಾಡಲ್ಲ ಎಂದಿದ್ದಾರೆ.
ಇನ್ಮುಂದೆ ನಾನು ಮೀಡಿಯಾ ಅಡ್ರೆಸ್ ಮಾಡಲ್ಲ. ನನಗೆ ಇನ್ಸ್ಟ್ರಕ್ಷನ್ ಬಂದಿದೆ. ಏನಾದರೂ ಇದ್ದರೆ ನಾನೇ ಕರೆದು ಬಂದು ಮಾತನಾಡುತ್ತೇನೆ. ಸುಮ್ನೆ ನೀವು ಇಲ್ಲಿ ಕಾಯೋದು ಬೇಡ ಎಂದು ಸಚಿವರು ತಿಳಿಸಿದರು.
ಇತ್ತೀಚೆಗೆ ಸುದ್ದಗುಂಟೆಪಾಳ್ಯದ ಭಾರತಿ ಲೇಔಟ್ ನಲ್ಲಿ ಯುವತಿಯ ಮೇಲೆ ಅನುಚಿತವಾಗಿ ಯುವಕನೊಬ್ಬ ವರ್ತಿಸಿದ ವಿಚಾರವಾಗಿ ಪರಮೇಶ್ವರ್, “ ದೊಡ್ಡ ನಗರದಲ್ಲಿ ಅಲ್ಲಿ ಇಲ್ಲಿ ಇಂತಹ ಘಟನೆ ನಡೆಯುತ್ತವೆ” ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ರಾಷ್ಟ್ರಮಟ್ಟದಲ್ಲಿ ಟೀಕೆಗೆ ಗುರಿಯಾಗಿತ್ತು.
ಈ ಹೇಳಿಕೆಗೆ ಬಳಿಕ ಪರಮೇಶ್ವರ್ ವಿಷಾದ ವ್ಯಕ್ತಪಡಿಸಿದ್ದರು. ಅಲ್ಲದೇ ತನ್ನ ಹೇಳಿಕೆಯನ್ನ ರಾಜಕೀಯಗೊಳಿಸಲಾಗುತ್ತಿದೆ ಎಂದೂ ಆರೋಪಿಸಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: