ಬೇಸಿಗೆಯಲ್ಲಿ ಕೂದಲು ಉದುರುವುದನ್ನು ತಡೆಯಲು ಸರಳ ಮನೆಮದ್ದು!

hair loss
16/04/2024

ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚುತ್ತಿದೆ. ಈ ಬಿಸಿಲಿನ ಜೊತೆಗೆ ಕೂದಲು ಉದುರುವ ಸಮಸ್ಯೆ ಕೂಡ ಸಾಮಾನ್ಯವಾಗಿದೆ. ಹೀಗಾಗಿ ಬೇಸಿಗೆ ಕಾಲದಲ್ಲಿ ಕೂದಲು ಉದುರುವಿಕೆಯನ್ನು ತಡೆಗಟ್ಟಲು  ಬಳಸ ಬಹುದಾದ ಸರಳ ಮನೆ ಮದ್ದುಗಳ ಬಗ್ಗೆ ತಿಳಿದುಕೊಳ್ಳೋಣ.

ತೆಂಗಿನೆಣ್ಣೆ

ಕೂದಲಿನ ಸರ್ವಸಮಸ್ಯೆಗೂ ತೆಂಗಿನೆಣ್ಣೆ ಮದ್ದು ಎಂದರೆ ತಪ್ಪಾಗಲಿಕ್ಕಿಲ್ಲ. ಇದು ಕೂದಲು ಉದುರುವ ಸಮಸ್ಯೆಯನ್ನು  ತಪ್ಪಿಸುತ್ತದೆ. ಇದು ಹಾನಿಯಾದ ಹಾನಿ ಹಾನಿಯಾಗದ ಕೂದಲಿನಲ್ಲಿ ಪ್ರೊಟೀನ್‌ ನಷ್ಟವನ್ನು ತಪ್ಪಿಸುತ್ತದೆ.

ತೆಂಗಿನೆಣ್ಣೆಯನ್ನು ಬಿಸಿ ಮಾಡಿ ಉಗುರು ಬೆಚ್ಚಗೆ ಇರುವಾಗ ನೆತ್ತಿಗೆ ಭಾಗಕ್ಕೆ ಚೆನ್ನಾಗಿ ಮಸಾಜ್‌ ಮಾಡಿಕೊಳ್ಳುವುದರಿಂದ ರಕ್ತದ ಹರಿವು ಹೆಚ್ಚುತ್ತದೆ. ಇಲ್ಲದೆ ಇದು ಹೊಸ ಕೂದಲಿನ ಬೆಳವಣಿಗೆಗೂ ಸಹಾಯ ಮಾಡುತ್ತದೆ. ವಾರದಲ್ಲಿ ಮೂರು ಬಾರಿ ಹೀಗೆ ಮಾಡುವುದರಿಂದ ಉತ್ತಮ ಫಲಿತಾಂಶ ಲಭಿಸುತ್ತದೆ. ಎಣ್ಣೆ ಹಚ್ಚಿ ರಾತ್ರಿಯಿಡಿ ಹಾಗೇ ಇರಿಸಿ. ಮರುದಿನ ತಲೆಗೆ ಸ್ನಾನ ಮಾಡಿದರೆ ಇನ್ನೂ ಉತ್ತಮ.

ಡಯೆಟ್‌:

ಕೂದಲ ಕಾಳಜಿಯ ವಿಚಾರಕ್ಕೆ ಬಂದಾಗ ಡಯೆಟ್‌ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ಆಹಾರಕ್ರಮದಲ್ಲಿ ಕಬ್ಬಿಣಾಂಶ, ಝಿಂಕ್‌, ಬಯೋಟಿನ್‌, ನಿಯಾಸಿನ್‌, ವಿಟಮಿನ್‌ ಸಿ, ವಿಟಮಿನ್‌ ಡಿ, ಒಮೆಗಾ 3ಎಸ್‌ ಹಾಗೂ ಒಮೆಗಾ 6ಎಸ್‌ ಈ ಎಲ್ಲವೂ ಒಳಗೊಂಡಿರಬೇಕು. ಬಾದಾಮಿ ಹಾಗೂ ವಾಲ್‌ನಟ್‌ ಕೂಡ ನಿಮ್ಮ ಆಹಾರದ ಪಟ್ಟಿಯಲ್ಲಿ ಸೇರಿರಬೇಕು. ಜೊತೆಗೆ ನಿರ್ಲಜೀಕರಣವು ಕೂದಲು ಉದುರಲು ಕಾರಣವಾಗಬಹುದು. ಹಾಗಾಗಿ ದೇಹವು ಹೈಡ್ರೇಟ್‌ ಆಗಿರುವಂತೆ ನೋಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಪ್ರತಿದಿನ 2 ರಿಂದ 3 ಲೀಟರ್‌ ನೀರು ಕುಡಿಯಿರಿ. ಇದರೊಂದಿಗೆ ನೀರಿನಾಂಶ ಅಧಿಕವಾಗಿರುವ ಸೌತೆಕಾಯಿ, ಟೊಮೆಟೊ, ಕಲ್ಲಂಗಡಿಯಂತಹ ಹಣ್ಣುಗಳನ್ನು ಹೆಚ್ಚು ಸೇವಿಸಿ.

ಅಲೋವೇರಾ:

ತಾಜಾ ಅಲೋವೇರಾದ ತಿರುಳನ್ನು ನೆತ್ತಿಯ ಬುಡಕ್ಕೆ ಹಚ್ಚುವುದರಿಂದ ಕೂದಲು ಉದುರುವುದನ್ನು ನಿಯಂತ್ರಿಸಬಹುದು. ಇದರಿಂದ ಕೂದಲು ಉದುರುವುದು ನಿಲ್ಲುವುದರ ಜೊತೆಗೆ ಕೂದಲಿನ ತುದಿ ಸೀಳುವುದು ನಿಲ್ಲುತ್ತದೆ. ನೆತ್ತಿಯ ಭಾಗವನ್ನು ತೇವಗೊಳಿಸುವ ಮೂಲಕ ತಲೆಹೊಟ್ಟನ್ನು ನಿಯಂತ್ರಿಸುತ್ತದೆ.

ಬಾದಾಮಿ ಎಣ್ಣೆ:

ಬಾದಾಮಿ ಎಣ್ಣೆಯಲ್ಲಿ ವಿಟಮಿನ್‌, ಅಗತ್ಯ ಫ್ಯಾಟಿ ಆಸಿಡ್‌, ಆಂಟಿ ಆಕ್ಸಿಡೆಂಟ್ಸ್‌ ಅಂಶ ಸಮೃದ್ಧವಾಗಿದ್ದು, ಇದು ಕೂದಲಿನ ಆರೋಗ್ಯ ವೃದ್ಧಿಯಾಗಲು ಸಹಾಯ ಮಾಡುತ್ತದೆ. ವಿಟಮಿನ್‌ ಇ ನೈಸರ್ಗಿಕ ಆಂಟಿಆಕ್ಸಿಡೆಂಟ್‌ ಆಗಿದ್ದು, ಇದು ಆಕ್ಸಿಡೇಟಿವ್‌ ಒತ್ತಡ ಹಾಗೂ ಯುವಿ ಕಿರಣಗಳಿಂದಾಗುವ ಹಾನಿಯನ್ನು ತಪ್ಪಿಸುತ್ತದೆ. ಇದು ಕೂದಲನ್ನು ಮಾಯಿಶ್ಚರೈಸ್‌ ಮಾಡುವುದು ಮಾತ್ರವಲ್ಲ, ಕೂದಲು ತುಂಡಾಗುವುದನ್ನು ತಡೆಯುತ್ತದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version